Minister Shivraj met and offered condolences. Personal Finance Assistance

ವರದಿ : ಪಂಚಯ್ಯ ಹಿರೇಮಠ
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ತಾಲೂಕಿನ ಆಡೂರ ಗ್ರಾಮದ ಪ್ರಕಾಶ ಹಿರೇಮನಿ ಎಂಬುವರ ಪತ್ನಿ ರೇಣುಕಾ ಹಾಗೂ ಮಗು ವೈದ್ಯರ ನಿರ್ಲಕ್ಷದಿಂದ ಇತ್ತಿಚಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮೃತರ ನಿವಾಸಕ್ಕೆ ಸಚಿವ ಶಿವರಾಜ ತಂಗಡಗಿ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಮಂಗಳವಾರದಂದು ಮಧ್ಯಾನ್ಹ 4 ಗಂಟೆಗೆ ಹಿರೇಮನಿಯವರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಅವರು ವಯಕ್ತಿಕವಾಗಿ ಧನ ಸಹಾಯ ಮಾಡಿದರು.
ಈ ವೇಳೆ ಮಾತನಾಡಿ ಈ ಕುರಿತಂತೆ ನಾನು ಹಾಗೂ ರಾಯರಡ್ಡಿಯವರು ಮುಖ್ಯಮಂತ್ರಿಗಳ ಚರ್ಚಿಸಿ ಸಾಧ್ಯವಾದಷ್ಟು ಕುಟುಂಬಕ್ಕೆ ಪರಿಹಾರ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಸತ್ಯಶೋಧನಾ ತಂಡದವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಬಾಣಂತಿಯರ ಸಾವಾಗುತ್ತಿದ್ದು ಇದಕ್ಕೆ ಸರಕಾರವೇ ನೇರ ಹೊಣೆ ಎಂದು ಆಪಾದಿಸಿ ಮಾತನಾಡಿದಕ್ಕೆ ತಂಗಡಗಿಯವರು ಪ್ರತಿಕ್ರೀಯಿಸಿ ಬಿಜೆಪಿಯವರಂತೆ ನಾವು ಸಾವಿನ ಮನೆಯಲ್ಲೂ ರಾಜಕಾರಣ ಮಾಡುವುದಿಲ್ಲಾ, ಸಾಂತ್ವಾನ ಹೇಳುವುದನ್ನು ಬಿಟ್ಟು ರಾಜಕೀಯ ಮಾಡದೇ ವಾಸ್ತವ ಸತ್ಯ ಅರಿತು ಮಾತನಾಡಬೇಕು ಅವರು ಏನು ತಮ್ಮ ತಂಡದಿಂದ ಸತ್ಯಶೋಧನೆ ಮಾಡಲು ಬಂದಿದ್ದರೋ ಏನು ಆಡಳಿತ ಪಕ್ಷವನ್ನು ಟೀಕೆ ಮಾಡಲು ಬಂದಿದ್ದರೋ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದವರು ಎಲ್ಲೆ ಬರಲಿ ಅವರು ನಮ್ಮನ್ನು ಹೊಗಳಲು ಬರುತ್ತಾರೆಯೇ ಎಂದು ರಾಯರಡ್ಡಿ ಹೇಳಿ ಮಾತನಾಡಿ ನಮ್ಮನ್ನು ಟೀಕೆ ಮಾಡಲು ಅವರು ಬರುವುದು. ನಮ್ಮ ಬಗ್ಗೆ ಟೀಕೆ ಮಾಡಿದ ಬಿಜೆಪಿಯವರು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಕೊಡಿಸಲಿ ನಾವು ಹತ್ತು ಲಕ್ಷ ಕೊಡಸ್ತೇವೆ ಎಂದರು.
ರಾಷ್ಟ್ರಮಟ್ಟದಲ್ಲಿ ಬಾಣಂತಿಯರು ಸಾವು ಒಂದು ಲಕ್ಷಕ್ಕೆ 65 ಸಾವುಗಳಾಗುತ್ತಿದ್ದು, ಆದರೆ ನಮ್ಮ ರಾಜ್ಯದಲ್ಲಿ ಒಂದು ಲಕ್ಷಕ್ಕೆ 64 ಆದರೆ ಕೊಪ್ಪಳದಲ್ಲಿ 61 ಬಾಣಂತಿಯರ ಸಾವುಗಳು ಸಂಭವಿಸುತ್ತಿವೆ.
ಇದು ಬಳ್ಳಾರಿಯ ಹಾಗೇ ಇದು ಔಷದದಿಂದ ಸಾವಾಗಿಲ್ಲಾ, ಪೌಷ್ಠಿಕಾಂಶದ ಕೊರತೆಯಿಂದ ಆಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಆರೋಗ್ಯ ಇಲಾಖೆಯವರಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ವೇಳೆ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಸಂಸದ ರಾಜಶೇಖರ್ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ ಇವರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೀರುಪಾಕ್ಷಪ್ಪ ದೊಡ್ಮನಿ, ಪ್ರಭು ತೊಂಡಿಹಾಳ, ಶಿವರಾಜ ದೊಡ್ಮನಿ, ವೀರಣ್ಣ ಚೌಡಿ, ಸುರೇಶ ಚೌಡಿ, ಗುರುಪಾದ ಹಿರೇಮನಿ, ದೇವರಾಜ ಮನ್ನಾಪೂರ, ಅರವಿಂದ ಮುಂದಲಮನಿ, ವಿಜಯಕುಮಾರ ಮಾದಿನೂರ, ದೇವೇಂದ್ರಪ್ಪ ಬಡಗೇರ ಇನ್ನಿತರರು ಇದ್ದರು. ಈ ವೇಳೆ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ತಹಶೀಲ್ದಾರ, ಗ್ರಾಮ ಪಂಚಾಯತಿ ಪಿಡಿಒ ಇನ್ನಿತರ ಇಲಾಖೆಯವರು ಇದ್ದರು.