Breaking News

“ಬಿಕ್ಕಿ ಮರಡಿ ದುರ್ಗಮ್ಮ ದೇವಿಯ ಪಲ್ಲಕ್ಕಿ ಮಹೋತ್ಸವ”

Bikki Maradi Durgamma Devi’s Palanki Mahotsav”

ಜಾಹೀರಾತು


ಕೊಟ್ಟೂರು ಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ ಬಿಕ್ಕಿಮರಡಿ ದುರ್ಗಮ್ಮ ದೇವಿಯ ಪಲ್ಲಕ್ಕಿ ಮಹೋತ್ಸವ ಭಕ್ತರ ಸಡಗರದೊಂದಿಗೆ ಸಾಗುತ್ತಿದ್ದಂತೆ ಮಹಿಳೆಯರು ರಸ್ತೆಯುದ್ದಕ್ಕೂ ಮಲಗಿ ದೇವಿಗೆ ನಮಿಸಿ ಭಕ್ತಿ ಸಮರ್ಪಿಸಿದರು.
ಬಿಕ್ಕಿಮರಡಿ ದುರ್ಗಮ್ಮ ದೇವಿಯ ಪಲ್ಲಕ್ಕಿ ಮಹೋತ್ಸವ ಬುಧವಾರ ಪಟ್ಟಣ ಪ್ರವೇಶ ಮಾಡುವ ಮೂಲಕ ಭಕ್ತರ ಸಡಗರ ಸಂಭ್ರಮದೊಂದಿಗೆ ನೆರೆವೇರಿತು.
ಜೀವಂತ ಕೋಳಿಗಳನ್ನು ಭಕ್ತರು ತೂರುವ ಏಕೈಕ ರಥೋತ್ಸವ ಎಂದೇ ಹೆಗ್ಗಳಿಕೆ ಹೊಂದಿರುವ ಬಿಕ್ಕಿಮರಡಿ ದುರ್ಗಮ್ಮನ ರಥೋತ್ಸವ ಸೋಮವಾರ ನಡೆದ ಹಿನ್ನಲೆಯಲ್ಲಿ ದೇವಿಯ ಮೂರ್ತಿಯನ್ನು ಪಟ್ಟಣದೊಳಕ್ಕೆ ರಥೋತ್ಸವ ಜರುಗಿದ ಮೂರು ದಿನದಲ್ಲಿ ಪಲ್ಲಕ್ಕಿ ಮಹೋತ್ಸವ ಜರುಗುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದ ಧಾರ್ಮಿಕ ವಿಧಿವಿಧಾನವಾಗಿದೆ.
ದುರ್ಗಮ್ಮ ದೇವಿಯ ದೇವಸ್ಥಾನದಿಂದ ಬೆಳಿಗ್ಗೆ ದೇವಿಯ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಉತ್ಸವ ಕೆಳಗೇರಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪಲ್ಲಕ್ಕಿ ಉತ್ಸವದುದ್ದಕ್ಕೂ ವಾಲ್ಮೀಕಿ ಜನಾಂಗದವರು ಮತ್ತು ಆಯಾಗಾರ ಬಳಗದವರು ಪಾಲ್ಗೊಂಡು ಪರಸ್ಪರ ಕುಂಕುಮ, ಗುಲಾಲು ಇತ್ಯಾದಿಗಳನ್ನು ಮುಖಕ್ಕೆ ಹಚ್ಚಿಕೊಂಡು ಸಂಭ್ರಮಿಸಿದರು. ಪಲ್ಲಕ್ಕಿ ಮಹೋತ್ಸವ ಸಾಗುತ್ತಿದ್ದಂತೆ ಕೊಟ್ಟೂರೇಶ್ವರ ದೇವಸ್ಥಾನ, ಗಾಂಧಿ ವೃತ್ತ ಮತ್ತಿತರ ಕಡೆ ಮಹಿಳಾ ಭಕ್ತರು ರಸ್ತೆಯುದ್ದಕ್ಕೂ ಮಲಗಿಕೊಂಡು ಭಕ್ತಿ ಸಮರ್ಪಿಸಿದರು. ಪಟ್ಟಣದ ಕೆಲವೊಂದು ಓಣಿಗಳಲ್ಲಿ ಭಕ್ತರು ಭೂತಪ್ಪಗಳಿಗೆ ಅಹಾರ ಭಕ್ಷö್ಯ ವನ್ನು ಇಟ್ಟು ಸಂಬ್ರಮಿಸುತ್ತಾರೆ ಭಕ್ತರು ನೀಡಿದ ಬೆಲ್ಲ, ಮೈಸೂರು ಪಾಕು, ಲಾಡು ಇನ್ನು ಇತರೆ ಸಿಹಿ ತಿನುಸುಗಳನ್ನು ಭೂತಪ್ಪಗಳು ತಿಂದು ಖಾಲಿ ಮಾಡುತ್ತವೆ ನಂತರ ಭಕ್ತರು ದೇವಿಯ ಪಲ್ಲಕ್ಕಿ ತಮ್ಮ ಮೇಲೆ ಹಾದು ಹೋದರೆ ಒಳ್ಳೆಯದಾಗುತ್ತದೆಂಬ ನಂಬಿಕೆವಿರಿಸಿಕೊಂಡು ಬಹಳಷ್ಟು ಮಹಿಳೆಯರು ಮತ್ತು ಮಕ್ಕಳು ಈ ರೀತಿ ನಮಿಸಿದರು.

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *