Breaking News

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ನೂತನ ಜಿಲ್ಲಾಧ್ಯಕ್ಷರಾಗಿ ಪ್ರಕಾಶ್ ಹೊಳೆಯಪ್ಪನವರ್ ಆಯ್ಕೆ

Karnataka Dalit Sangharsh Samiti Bhimava elected Prakash Jagappanavar as the new district president

ಜಾಹೀರಾತು

ಕೊಪ್ಪಳ ನವಂಬರ್ 29: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಪ್ಪಳ ಜಿಲ್ಲಾ ಸಮಿತಿಯನ್ನ ರಚನೆ ಮಾಡಲಾಗಿದೆ ಎಂದು ಕೊಪ್ಪಳ ಪಟ್ಟಣದಲ್ಲಿ ದಲಿತಪರ ಹೋರಾಟಗಾರ ಮಾರ್ಕಂಡೆಪ್ಪ ಡಿ ಹಲಗಿ ರವರು ಮಾಹಿತಿ ನೀಡಿದರು. ಗುರುವಾರ ಸಂಜೆ ಪಟ್ಟಣದ ತಾಲೂಕ ಪಂಚಾಯತ್ ಬಳಿ ಗಿವ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಮಾರ್ಕಂಡೆಪ್ಪ ಹಲಗಿ ರವರು ಮಾತನಾಡಿ, ಕೊಪ್ಪಳದ 12ನೆಯ ವಾರ್ಡ್ ಬಸವೇಶ್ವರ ನಗರದ ನಿವಾಸಿಗಳಾದ ಪ್ರಕಾಶ್ ಹೆಚ್ ಹೊಳೆಯಪ್ಪನವರು ದಲಿತ ಸಮಾಜದಲ್ಲಿ ಜನಸಿ, ಸದಾಕಾಲ ಸಮಾಜದ ಏಳಿಗೆಗಾಗಿ ಹೋರಾಟ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಕಾಶ್ ಹೊಳೆಯಪ್ಪನವರ ಸಮಾಜ ಸೇವೆಯನ್ನ ಗುರುತಿಸಿದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ ರವರು ಡಾ. ಬಿ ಆರ್ ಅಂಬೇಡ್ಕರ್ ಫೆಲೋಸೀಫ್ ಪ್ರಶಸ್ತಿ ಕೊಟ್ಟಿದ್ದಾರೆ. ಸದಾಕಾಲ ಸಮಾಜದ ಯುವಕರಿಗೆ ಬೆನ್ನೆಲುಬಾಗಿ ನಿಂತು, ಯುವಕರು ಹಾಗೂ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಣವಂತರಾಗಬೇಕು ಎಂದು ಜಾಗೃತಿಯನ್ನ ಮಾಡಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನ ಗಮನಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ ) ರಾಜ್ಯಾಧ್ಯಕ್ಷರಾದ ಡಾ. ಆರ್ ಮೋಹನ್ ರಾಜ್ ರವರು ಪ್ರಕಾಶ್ ಹೊಳೆಯಯಪ್ಪ ರವರನ್ನು ನೂತನ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಹಾಗೂ ಬಾಬು ಜಗಜೀವನ್ ರಾಮ್ ಸಾಂಸ್ಕೃತಿಕ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ್ ವೈ ಕೋಳೂರು ರವರನ್ನು ಕೊಪ್ಪಳ ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ನೇಮಕ ಮಾಡಿದ್ದಾರೆ ಎಂದು ಕೊಪ್ಪಳದಲ್ಲಿ ಮಾರ್ಕಂಡೆಪ್ಪ ಹಲಗಿ ರವರು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸಂಗೀತ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಗವಿಸಿದ್ದಪ್ಪ ಕುಣಿಕೇರಿ, ಸಂಘಟನೆಯ ಮುಖಂಡರಾದ ಯಮನೂರಪ್ಪ ದನಕನದೊಡ್ಡಿ, ಇನ್ನೂ ಅನೇಕರು ಉಪಸ್ಥಿತರಿದ್ದರು.

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *