Breaking News

ಮೂಲ ಸ್ಥಾನವಾದ ಶ್ರೀ ಉರಿಲಿಂಗ ಪೆದ್ದಿ ಮಠ ಶಾಖಾ ಮಠದ ಜೀರ್ಣೋದ್ಧಾರ ಕಾಮಗಾರಿಗೆ ಗುದ್ದಲಿ ಪೂಜೆ : ಶಾಸಕ ಎಮ್ ಆರ್ ಮಂಜುನಾಥ್

Kuddali Puja for the restoration work of Sri Urilinga Peddi Math Branch Math, the original seat: MLA M R Manjunath

ಜಾಹೀರಾತು
Screenshot 2025 02 21 17 39 18 45 6012fa4d4ddec268fc5c7112cbb265e7


ವರದಿ: ಬಂಗಾರಪ್ಪ .ಸಿ .
ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿ ಮಣಗಳ್ಳಿಯಲ್ಲಿನ ಗುರುದೊಡ್ಡಿ ಗ್ರಾಮದಲ್ಲಿ ಹಲವಾರು ವರ್ಷಗಳ ಹಿಂದಿನ ಹಳೆಯ ಮಠವಿದ್ದು ಅದರ ಜೀರ್ಣೋದ್ಧಾರ ಕಾರ್ಯವನ್ನು ,ಜ್ಞಾನ ಪ್ರಕಾಶ್ ಸ್ವಾಮಿಗಳ ಹಾಗೂ ಶಾಸಕ ಎಂ.ಆರ್ ಮಂಜುನಾಥ್ ರವರು ಭೂಮಿ ಪೂಜೆ ನೆರವೇರಿಸಿದರು.
ಗುರುಗಳ ದೊಡ್ಡಿ ಗ್ರಾಮದಲ್ಲಿ ಉರಿಲಿಂಗ ಪೆದ್ದಿ ಶಾಖಾ ಮಠದ ದಾಸೋಹ ಭವನ ಕರ್ತು ಗದ್ದಿಗೆ ,ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು ನಂತರ ಮಾತನಾಡಿದ ಶಾಸಕರು ಮಠದ ಕಾಮಗಾರಿಗೆ ಈಗಾಗಲೇ ಸ್ವಲ್ಪ ಮಟ್ಟಿಗೆ ಹಣ ಬಂದಿದ್ದರು ಸಹ ಯಾವುದೇ ದೊಡ್ಡ ಕಾಮಗಾರಿ ಮಾಡಲು ಆಗುವುದಿಲ್ಲ ಮುಂದಿನ ದಿನಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು . ಇದೇ ಸಮಯದಲ್ಲಿ ಸ್ಥಳಿಯರನ್ನು ಕರೆದು ಮಠಕ್ಕೆ ಮತ್ತು ಅದರ ಮುಂದಿನ ಜಮೀನುಗಳಿಗೆ ಸಂಚಾರ ಮಾಡಲು ರಸ್ತೆಗಳ ಅಗಲಿಕರಣ ಮಾಡಬೇಕಾಗಿದೆ ಎಂದು ತಿಳಿಸಿದರು.
ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ ಈ ಸ್ಥಳವನ್ನು ಮಾಧರಿ ಪುಣ್ಯ ಸ್ಥಾನವನ್ನಾಗಿ ಮಾಡಬೇಕಾಗಿದೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ಗ್ರಾಮಸ್ಥರ ಹಿತದೃಷ್ಟಿಯಿಂದ ಶಾಲಾ ಕಾಲೇಜು ಸೇರಿದಂತೆ ಹತ್ತು ಹಲವು ಕಾಮಗಾರಿ ಗಳನ್ನು ಮಾಡಬೇಕಿದೆ , ಸ್ಥಳಿಯ ಶಾಸಕರು ಬಹಳ ಕ್ರಿಯಾಶೀಲ ರಾಗಿದ್ದು ಅವರಿಗೆ ನಮ್ಮೇಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ,ಸಿದ್ಧರಾಮ ಶಿವಯೋಗಿಸ್ವಾಮಿ ವಿಧಾನ ಪರಿಷತ್ ಸದಸ್ಯರಾದ  ಹೆಚ್.ಪಿಸೂಡಾಮ್ ದಾಸ್,ರವೀಂದ್ರ ಅರಳಿ,ಮಣಗಳ್ಳಿ ಶಿವಪ್ಪ ,ಮಲ್ಲಣ್ಣ, ಸಂದನಪಾಳ್ಯ ತಲೈವರ್ ಸಂತಿಯಾಗ್,ರಾಜು,ರಕೀಪ್,ಮಹಾದೇವ,ತಮ್ಮೇಗೌಡ,ಲೋಕೇಶ್ ರಾವಣ,ವೆಂಕಟಾಚಲ,ಡೈರಿ ಬಾಬು,ಹಾಗೂ ಇನ್ನಿತರರು ಹಾಜರಿದ್ದರು .

About Mallikarjun

Check Also

whatsapp image 2025 11 15 at 6.04.03 pm

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ Government School Hosalli attracts attention with …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.