Breaking News

ಆಹಾರದಲ್ಲಿ ಬಣ್ಣ, ಟೇಸ್ಟಿಂಗ್ ಪೌಡರ್ ಮಿಶ್ರಣದಿಂದ ಆರೋಗ್ಯ ಹಾಳು:ಬನದೇಶ್ವರ

Mixture of color, tasting powder in food is harmful to health: Banadeshwar

ಜಾಹೀರಾತು

ಮಾನ್ವಿ : ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ತಾ ಆಹಾರ ಸುರಕ್ಷತಾ ಅಧಿಕಾರಿ ಬನದೇಶ್ವರ ಎಕ್ಕಿಹಳ್ಳಿ ಭೇಟಿ ನೀಡಿ ಗ್ರಾಮದಲ್ಲಿ ಸಾರ್ವಜನಿಕರ ಆರೋಗ್ಯದಹಿತ ದೃಷ್ಟಿಯಿಂದ ಮುಖ್ಯ ರಸ್ತೆಯಲ್ಲಿರುವ ವಿವಿಧ ಹೋಟೆಲ್ ಬೀದಿ ಬದಿಯಲ್ಲಿ ಸಿಗುವಂತಹ ಎಗ್ ರೈಸ್ ಮತ್ತು ಚಿಕನ್ ಕಬಾಬ್ ಗೋಬಿ-ಮಂಚೂರಿ ಬಂಡಿಗಳಲ್ಲಿ ಆಹಾರ ತಯಾರಿ ಕುರಿತು ತಪಾಸಣೆ ನಡೆಸಿದರು ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಬನದೇಶ್ವರ ಎಕ್ಕಿಹಳ್ಳಿ ಮಾತನಾಡಿ ಗ್ರಾಮದಲ್ಲಿ ದಿನಗೂಲಿ ನೌಕರರು ಮತ್ತು ಕಾರ್ಮಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬೀದಿ ಬದಿಯಲ್ಲಿ ಸಿಗುವಂತಹ ಆಹಾರ ತಯಾರಿಸುವ ಸ್ಥಳಗಳಲ್ಲಿ ಶುಚಿತ್ವ ಹಾಗೂ ನೈರ್ಮಲ್ಯ ಮತ್ತು ಗುಣಮಟ್ಟದ ಆಹಾರ ತಯಾರಿಕೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಆಡುಗೆ ತಯಾರಿಸುವವರು ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು
ಸಾರ್ವಜನಿಕರಿಗೆ ಅತಿಯಾಗಿ ರುಚಿಕರವಾದ ಆಹಾರವನ್ನು ನೀಡುವ ಅಂಗಡಿಗಳು ಆಹಾರಕ್ಕೆ ಬಣ್ಣ ಉಪಯೋಗಿಸಿ ಆಹಾರ ತಯಾರಿಸುತ್ತಾರೆ ಅಲ್ಲದೆ ಮಿಶ್ರಣ ಮಾಡಿ ರುಚಿಕರವಾದ ಟೇಸ್ಟಿಂಗ್ ಪೌಡರ್ ಅತಿ ಹೆಚ್ಚಾಗಿ ಮಿಶ್ರಣ ಮಾಡಿ ಸಾರ್ವಜನಿಕರಿಗೆ ಆಹಾರವಾಗಿ ನೀಡುವುದರಿಂದ ಇದನ್ನು ತಿಂದು ಸಾರ್ವಜನಿಕರು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಕ್ಯಾನ್ಸರ್ ಮತ್ತು ಇನ್ನಿತರ ಭಯ ಬೀಳುವಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹಾಗೂ ಅಡುಗೆಗೆ ಬಳಸುವ ಎಣ್ಣೆಯನ್ನು ಒಮ್ಮೆ ಬಳಸಿದ ಮೇಲೆ ಮರುಬಳಕೆ ಮಾಡುವುದರಿಂದ ಹೃದಯದ ಕಾಯಿಲೆ ಬರುವ ಸಂಭವವಿರುತ್ತದೆ ಹಾಗೂ ಆಹಾರದ ಸ್ವಾದದಲ್ಲಿ ವ್ಯತ್ಯಸವಾಗುತ್ತದೆ. ತಾಜಾ ತರಕಾರಿ ,ಮಾಂಸವನ್ನೆ ಬಳಸಬೇಕು ಸಾರ್ವಜನಿಕರ ಉತ್ತಮ ಸ್ವಾಸ್ತö್ಯಕ್ಕಾಗಿ ಹೋಟೆಲ್,ರೆಸ್ಟೋರೆಂಟ್‌ಗಳಲ್ಲಿ ಬೀದಿ ಬದಿಯ ತಳ್ಳುಗಾಡಿಗಳಲ್ಲಿ ಆಹಾರ ತಯಾರಿಸಿ ಗ್ರಾಹಕರಿಗೆ ನೀಡಬೇಕು. ಆಹಾರ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ವಿಭಾಗದ ಆಯುಕ್ತರು ಮತ್ತು ಸರ್ಕಾರ ಅಧೀನ
ಕಾರ್ಯದರ್ಶಿಗಳ ಹಾಗೂ ಸರ್ಕಾರದ ಆದೇಶದ ಮೇರೆಗೆ ಗ್ರಾಮದಲ್ಲಿರುವ ಬೀದಿಬದಿಯ ಎಗ್ ರೈಸ್, ಹೋಟೆಲ್ ಮತ್ತು ಚಿಕನ್ ಕಬಾಬ್ ಅಂಗಡಿಗಳಿಗೆ ಮತ್ತು ಗೋಬಿ-ಮಂಚೂರಿ ಬಂಡಿಗಳಿಗೆ ಭೇಟಿ ನೀಡಿದರು. ಮುಂದಿನ ದಿನಗಳಲ್ಲಿ ಯಾವುದೇ ತರಹದ ದೂರುಗಳು ಬಂದಲ್ಲಿ ಕೂಡಲಿ ತಮ್ಮ ಅಂಗಡಿಗಳ ಮೇಲೆ ಕಾನೂನು ಸೂಕ್ತ ಕ್ರಮ ಜರುಗಿಸಲಾಗುವುದೆಂದು ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಕಾನೂನಿನ ಸಲಹೆ ಮತ್ತು ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.