Ashokaswamy Heroor: Election announcement!
ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಸ್ಥಿತ್ವಕ್ಕೆ (1916 ರಲ್ಲಿ ) ಬಂದಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಆಯ್ಕೆಯನ್ನು ಮಂಗಳವಾರ ಸಂಸ್ಥೆಯ 106 ನೇ ವಾರ್ಷಿಕೋತ್ಸವದಲ್ಲಿ ಘೋಷಣೆ ಮಾಡಲಾಯಿತು.
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಹೇರೂರ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.
ದರೋಜಿ-ಗಂಗಾವತಿ,ಗಂಗಾವತಿ-ಬಾಗಲಕೋಟ ನೂತನ ಬ್ರಾಡಗೇಜ್ ರೇಲ್ವೆ ಲೈನ್ ನಿರ್ಮಾಣಕ್ಕೆ, ಗಂಗಾವತಿ-ಬಳ್ಳಾರಿ, ಮುದಗಲ್-ಕಲಬುರ್ಗಿ,ಗಂಗಾವತಿ-ಹಂಪಿ-ಹೊಸಪೇಟೆ ಮೇಲ್ದರ್ಜೆಗೆ ಏರಿಸಲು ಮತ್ತು
ಕೊಪ್ಪಳ-ರಾಯಚೂರು ಚತುಸ್ಪಥ ರಸ್ತೆ ನಿರ್ಮಾಣಕ್ಕೆ ಒತ್ತು ಕೊಡುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಅಶೋಕಸ್ವಾಮಿ ತಿಳಿಸಿದ್ದಾರೆ.