Breaking News

ಕಲ್ಯಾಣ ಕರ್ನಾಟಕ ವೈರ್‌ಮನ್ ಕಾರ್ಮಿಕರ ಸಂಘಅಸ್ತಿತ್ವಕ್ಕೆಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸದಾಸಿದ್ಧ:ಹೆಚ್.ಆರ್.ಶ್ರೀನಾಥ್

Kalyana Karnataka Wireman Workers Association is always ready to protect the rights of workers: H.R.Srinath


ಗಂಗಾವತಿ: ಕಾರ್ಮಿಕರ ಬೆವರಿನ ಫಲದಿಂದ ನಾವೆಲ್ಲರು ನೆಮ್ಮದಿಯಾಗಿ ಮನೆಗಳಲ್ಲಿ ಇರಲು ಸಾಧ್ಯವಿದ್ದು ಬಿಸಿಲಲ್ಲಿ ದುಡಿಯುವ ದುಡಿಯುವ ವರ್ಗ ಸೂರಿಗಾಗಿ ಪರಿತಪಿಸುವಂತಾಗಿದ್ದು, ಎಲ್ಲರಿಗು ಬೆಳಕು ನೀಡುವ ವೈರ್‌ಮನ್‌ಗಳ ಬದುಕು ಬೆಳಕಾಗಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಹೇಳಿದರು.
ಅವರು ಭಾನುವಾರ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ವೈರ್‌ಮನ್ ಕಾರ್ಮಿಕರ ಸಂಘ ಉದ್ಘಾಟಿಸಿ ಮಾತನಾಡಿದರು. ಕಟ್ಟಡ ಕಾರ್ಮಿಕರು ಹಲವು ತೊಂದರೆಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದು, ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಕಾರ್ಮಿಕರ ಕುಟುಂಬಕ್ಕೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮುಖೇನ ಜೀವನ ಮಟ್ಟ ಸುಧಾರಣೆ ಮಾಡಿಕೊಳ್ಳಬೇಕೆಂದರು.
ವೃತ್ತ ಕಾರ್ಮಿಕ ನಿರೀಕ್ಷಕ ಜಿ.ಬಿ.ದೂಪದ್ ಮಾತನಾಡಿ, ನಿಜವಾದ ಕೆಲಸಗಾರರನ್ನು ನೀವು ಸಂಘಟನೆಯ ಸದಸ್ಯರನ್ನಾಗಿ ಮಾಡಿಕೊಳ್ಳಿ, ಸಂಘದಲ್ಲಿಯೂ ಕೂಡಾ ಪ್ರಾಮಾಣಿಕರಿಗೆ, ಮುನ್ನಡೆಸಿಕೊಂಡು ಹೋಗುವವರಿಗೆ ಆದ್ಯತೆ ನೀಡಿ, ಕೆಲ ದಿನಗಳವರೆಗೆ ಮಾತ್ರ ಸಂಘ ಎನ್ನುವಂತಾಗಬಾರದು, ನಿರಂತರ ಕಾರ್ಮಿಕರ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿ ಈ ಸಂಘ ನಿಲ್ಲಬೇಕು ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.
ಶ್ರೀ ನಾಗಭೂಷಣ ಶೀವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ವಕೀಲರು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕಾ ಅಧ್ಯಕ್ಷ ನಾಗರಾಜ್ ಇಂಗಳಗಿ, ಗಂಗಾವತಿ ಇಂಜಿನೀಯರಿAಗ್ ಅಸೋಸಿಯೇಷನ್ ಗಂಗಾವತಿ ತಾಲೂಕಾ ಅಧ್ಯಕ್ಷ ಚೇತನ್ ಕುಮಾರ್ ಹಿರೇಮಠ್, ಗಂಗಾವತಿ ಕಲ್ಯಾಣ ಕರ್ನಾಟಕ ವೈರ್‌ಮನ್ ಸಂಘದ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ್ ಮತ್ತು ಹಿರಿಯರಾದ ಸಂಗಮೇಶ್ ಇತರರಿದ್ದರು.

ಕಾರ್ಮಿಕರ ಬೆನ್ನಿಗೆ ನಿಲ್ಲುವೆ: ಪರಣ್ಣ
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಕಾರ್ಮಿಕರು ಬವಣೆ ನೀಗಿಸಲು ಸರಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ತಮ್ಮ ಹೋರಾಟಕ್ಕೆ ನಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ.
ಸೂಕ್ತ ಹೋರಾಟದ ಮೂಲಕ ಸರಕಾರದ ಅನುಕೂಲಗಳನ್ನು ನಿಮಗೆ ಒದಗಿಸಿಕೊಡವೆ. ಯಾವುದೇ ಸಂದರ್ಭದಲ್ಲೂ ನನ್ನನ್ನು ಸಂಪರ್ಕಿಸಿ ನನ್ನಿಂದ ಸಾಧ್ಯವಾದಷ್ಟು ಸಹಕಾರ ನೀಡುವೆ. ಬೆಳಕು ನೀಡುವ ನಿಮ್ಮ ಬದುಕು ಹಸನಾಗಲಿ, ಸಂಘಟನೆಯ ಮೂಲಕ ಸಾಧನೆ ಮಾಡಬಹುದು ಒಗ್ಗಟ್ಟಿನಲ್ಲಿ ಬಲವಿದ್ದು, ಉತ್ತರೋತ್ತರವಾಗಿ ಸಂಘ ಬೆಳೆಯಲಿ ಎಂದು ಹೇಳಿದರು.

About Mallikarjun

Check Also

ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ, ಬಿಜೆಪಿ-ಜೆಡಿಎಸ್ ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ: ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಮಾಧ್ಯಮ ಹೇಳಿಕೆ ಬೆಂಗಳೂರು, ಮೇ 6: ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.