Breaking News

ಹಂಪಿಯಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆ

In the State Level Open Yoga Championship held at Hampi Excellent achievement by the students of Jain Public School

ಗಂಗಾವತಿ: ರಂಜು ಆರ್ಟ್ಸ್ ಯೋಗ ಟ್ರಸ್ಟ್ ಹಂಪಿ ವತಿಯಿಂದ ರಾಜ್ಯ ಮಟ್ಟದ ಮುಕ್ತ ಹಂಪಿ ಯೋಗಾಸನ ಚಾಂಪಿಯನ್‌ಶಿಪ್ ಭಾನುವಾರ ಹಂಪಿಯ ಶಿವರಾಮ ಅವಧೂತ ಆಶ್ರಮ ಹೇಮಕೂಟದಲ್ಲಿ ನಡೆಯಿತು.
ಈ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿ ನಗರದ ಜೈನ್ ಪಬ್ಲಿಕ್ ಶಾಲೆಯಿಂದ ೮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ೮ ವರ್ಷದೊಳಗಿನ ಹುಡುಗಿಯರ ಸ್ಪರ್ಧೆಯಲ್ಲಿ ಆರ್. ನಾಗಚೈತನ್ಯ (ಯುಕೆಜಿ) ದ್ವಿತೀಯ ಸ್ಥಾನ ಹಾಗೂ ೮ ವರ್ಷದೊಳಗಿನ ಹುಡುಗರ ಸ್ಪರ್ಧೆಯಲ್ಲಿ ಹೃತ್ವಿಕ್ ಆರಾಧ್ಯ (೧ನೇ ತರಗತಿ) ಪ್ರಥಮ ಸ್ಥಾನ ಪಡೆದಿದ್ದಾರೆ. ೮ ರಿಂದ ೧೦ ವರ್ಷ ವಯಸ್ಸಿನ ಹುಡುಗಿಯರ ಸ್ಪರ್ಧೆಯಲ್ಲಿ ಶ್ವೇತಾ ೪ನೇ ತರಗತಿ ಪ್ರಥಮ ಸ್ಥಾನ, ಜಯಶ್ರೀ ೨ನೇ ತರಗತಿ ದ್ವಿತೀಯ ಸ್ಥಾನ ಪಡೆದರು. ಅದೇರೀತಿ ೮ ರಿಂದ ೧೦ ವರ್ಷ ವಯಸ್ಸಿನ ಹುಡುಗರ ಸ್ಪರ್ಧೆಯಲ್ಲಿ ಎನ್. ಚೇತನ್‌ಕೃಷ್ಣ ರೆಡ್ಡಿ ೪ನೇ ತರಗತಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ೧೧ ರಿಂದ ೧೪ ವರ್ಷ ವಯಸ್ಸಿನ ಮಕ್ಕಳಾದ ಚಾರ್ವಿ, ಇ.ಎಸ್ ಅನ್ನಪೂರ್ಣ, ಮೋಹನ ಕೃಷ್ಣಾರೆಡ್ಡಿ ಸಿರಿಗೇರಿ ಭಾಗವಹಿಸಿದ್ದರು.
ಜೈನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಮ್ಯಾನೇಜ್‌ಮೆಂಟ್ ಮತ್ತು ಗಂಗಾವತಿ ಶಾಲೆಯ ಸಿ.ಒ.ಓ ಆದ ಶ್ರೀ ಶಶಿಧರ್ ಉಪ್ಪಾರ ಮತ್ತು ಶೈಕ್ಷಣಿಕ ಕೌನ್ಸಿಲರ್ ಆದ ಶ್ರೀ ಸಯೀದಾ ಫಬೀನ್ ಇವರು ಎಲ್ಲಾ ವಿಜೇತರಿಗೆ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.