Breaking News

ಮಾರ್ಟಳ್ಳಿ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!

Universe corruption in Manrega scheme in Martalli Panchayat..!

ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ .

ಗಿಡ ನೆಡುವ ಕಾಮಗಾರಿಯಲ್ಲಿ ವ್ಯಾಪಕ ಗೋಲ್ ಮಾಲ್..!!
ಯುವ ರೈತನ ದೂರಿನಿಂದ ಸಾಕ್ಷಾö್ಯಧಾರ ಸಮೇತ ಸಿಕ್ಕಿಬಿದ್ದ ಪಿಡಿಓ,ತಾಂ.ಸಹಾಯಕ..!!!
ಚಾನರಾಜನಗರ ಜಿಲ್ಲೆಯ
ಹನೂರು ತಾಲ್ಲೊಖಿನ ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಡಿ ರೈತರ ಜಮೀನುಗಳಿಗೆ ಗಿಡ ನೆಡುವ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದು ಲಕ್ಷಾಂತರ ರೂ ಗುಳುಂ ಆಗಿರುವುದಕ್ಕೆ ಸ್ಪಷ್ಟ ಪುರಾವೆಯಾಗಿ ಓರ್ವ ವಿದ್ಯಾವಂತ ಯುವ ರೈತನ ದೂರಿನಿಂದ ಒಂದು ಪ್ರಕರಣವಷ್ಟೆ ಬೆಳಕಿಗೆ ಬಂದಿದ್ದು ಗಿಡ ನೆಡುವ ಕಾವiಗಾರಿಗಳ ಇಡೀ ಪ್ರಕರಣದ ಬಗ್ಗೆ ತೀವ್ರ ತನಿಖೆ ನಡೆಸಿದಲ್ಲಿ ಮತ್ತಷ್ಟು ರೋಚಕ ಸತ್ಯ ಬೆಳಕಿಗೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.
ದಿವ್ಯಾನಂದನ ದೂರಿನ ಪ್ರಕರಣದ ತನಿಖೆ ನಡೆದು ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಓ ಬಾಲಗಂಗಾಧರ್‌ರಿಂದ ಶೇ ೫೦ ಪಾಲು ಅಂದರೆ ೪೮,೭೪೯ ಹಾಗೂ ಇದೇ ಪಂಚಾಯ್ತಿಯ ತಾಂತ್ರಿಕ ಸಹಾಯಕ ಎಂ.ಪ್ರದೀಪ್ ಕುಮಾರ್‌ರಿಂದ ಶೇ ೫೦ ಪಾಲುರಂತೆ ೪೮,೭೪೯ ರೂಗಳಂತೆ ಒಟ್ಟು ೯೭,೪೯೮ ರೂಗಳನ್ನು ವಸೂಲು ಮಾಡಿ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲು ಸಿಇಓಗೆ ಪ್ರರಕಣದ ತನಿಖೆ ನಡೆಸಿದ ಓಂಬುಡ್ಸ್ ಮನ್ ಎನ್.ಎಸ್ ಮಹಾದೇವಸ್ವಾಮಿ ಆದೇಶ ನೀಡಿರುವುದು ಅಕ್ರಮಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ..!
ವಡ್ಡರದೊಡ್ಡಿ ಗ್ರಾಮದ ಯುವ ವಿದ್ಯಾವಂತ ರೈತ ದಿವ್ಯಾನಂದ ಎಂಬುವರ ತಂದೆ ಮದಲೈಸ್ವಾಮಿಯವರ ಬ್ಯಾಂಕ್ ಖಾತೆಗೆ ಅ ೨೨ ರ ೨೦೨೨ ರಂದು ದಿಢೀರನೆ ೨೫ ಸಾವಿರ ರೂ ಬರುತ್ತೆ. ಅವರು ಅವಿದ್ಯಾವತರಾದ್ದರಿಂದ, ಅವರ ಪುತ್ರ ದಿವ್ಯಾನಂದ ಇದಾವುದಪ್ಪ ನಮ್ಮ ಅಪ್ಪನ ಖಾತೆಗೆ ಹಣ ಬಂದಿದೆ ಎಂದು ಮೂಲ ಹುಡುಕಲು ಹೋದಾಗ ಮನರೇಗಾ ಯೋಜನೆಯ ಕಾಮಗಾರಿಯಲ್ಲಿ ಕೂಲಿ ಮಾಡಿದ ಹಣ ಎಂದು ತಿಳಿದು ಬರುತ್ತದೆ. ಆದರೆ ವಾಸ್ತವದಲ್ಲಿ ಜಾಬ್ ಕಾರ್ಡ್ ಹೊಂದಿದ್ದರೂ ಸಹ ಯಾವುದೇ ಕೆಲಸಕ್ಕೆ ಹೋಗದಿದ್ದರೂ ಕೂಲಿ ಹೇಗೆ ಬಂತು ಎಂದು ಮೂಲ ಹುಡುಕಿದಾಗ ದೊಡ್ಡ ಹಗರಣವೇ ಬೆಳಕಿಗೆ ಬಂದಿದೆ.
ದಿವ್ಯಾನಂದನ ಕುಟುಂಬದರ‍್ಯಾರು ಮಾರ್ಟಳ್ಳಿ ಪಂಚಾಯ್ತಿಗೆ ಮನರೇಗಾ ಯೋಜನೆಯಡಿ ಅನುಕೂಲ ಕಲ್ಪಿಸಿಕೊಡುವಂತೆ ಕೋರದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಲ್ಲಿ ಪಂಚಾಯ್ತಿಯವರು ದಾಖಲೆಯಲ್ಲಿ ನಮೂದಿಸಿರುವಂತೆ ಯಾವ ಗಿಡಗಳು ಇವರ ಜಮೀನಿನಲ್ಲಿ ಇಲ್ಲದಿದ್ದರೂ ರಕ್ತ ಚಂದನ ಹಾಗೂ ಶ್ರೀಗಂಧದ ಗಿಡಗಳನ್ನು ೨೦೨೨-೨೩ ನೇ ಸಾಲಿನಲ್ಲಿ ಮನರೇಗಾ ಯೋಜನೆಯಡಿ ನೆಟ್ಟಿರುವುದಾಗಿಯೂ ಅದರ ಅಂದಾಜು ಮೊತ್ತ ೨.೫ ಲಕ್ಷ ಎಂತಲೂ ನಾಮಫಲಕ ಅಳವಡಿಸಿ ೭ ಎಂಎನ್‌ಆರ್‌ಗಳನ್ನು ತೆಗೆದು ೯೭,೪೮೯ ರೂಗಳನ್ನು ಕೂಲಿ ಪಾವತಿಸಿರುವುದಾಗಿ ದಾಖಲೆ ಸೃಷ್ಟಿ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇದರಿಂದ ಕೆಂಡಾಮAಡಲರಾದ ಯುವ ರೈತ ದಿವ್ಯಾನಂದ ಪಿಡಿಓ ಬಾಲಗಂಗಾಧರ್‌ರವರನ್ನು ಭೇಟಿ ಮಾಡಿ ನಮ್ಮ ಕುಟುಂಬದವರು ಯಾವುದೇ ಕೂಲಿ ಕೆಲಸಕ್ಕೆ ಬಂದಿಲ್ಲ. ಹಾಗಿದ್ದರೂ ಕೂಲಿ ಹಣ ಅಂತಾ ಹೇಗೆ ಹಾಕಿದ್ದೀರಿ. ಎಂದು ವಿಚಾರಿಸಿದಾಗ, ಈ ಯೋಜನೆಯಿಂದ ನಿಮಗೆ ಹೆಚ್ಚಿನ ಹಣ ಬರುತ್ತದೆ ಯಾವುದನ್ನು ಪ್ರಶ್ನೆ ಮಾಡದೆ ತೆಪ್ಪಗಿರಿ ಎಂದು ಧಮಕಿ ಹಾಕಿದ್ದಲ್ಲದೆ ಕೆಲ ಪಂಚಾಯ್ತಿ ಸದಸ್ಯರು ಮತ್ತಿತರರ ಕಡೆಯಿಂದ ಹಲ್ಲೆಗೂ ಮುಂದಾಗಿ ಪ್ರಾಣ ಬೆದರಿಕೆ ಪ್ರಕರಣವೂ ನಡೆದು ಈ ಬಗ್ಗೆ ದಿವ್ಯಾನಂದ ಆರಂಭದಲ್ಲೇ ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಜಮೀನಿನಲ್ಲಿ ಯಾವುದೇ ಗಿಡಗಳನ್ನು ನೆಡದಿದ್ದರೂ ನೆಟ್ಟಂತೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಲ್ಲದೆ ಪ್ರಶ್ನಿಸಲು ಹೋದ ತಮ್ಮ ಮೇಲೆಯೆ ಹಲ್ಲೆ ಪ್ರಣ ಬೆದರಿಕೆಗೆ ಮುಂದಾಗಿದ್ದಾರೆ ಎಂದು ಪಿಡಿಓ ಬಾಲಗಾಂಗಾಧರ್ ಮತ್ತಿತರೆ ಕೆಲ ಸದಸ್ಯರ ವಿರುದ್ದ ರಾಮಾಪುರ ಠಾಣೆಗೆ ದೂರು ನೀಡಿದರೂ ಅವರು ಎಫ್‌ಐಆರ್ ದಾಖಲಿಸಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ನಂತರದಲ್ಲಿ ತಾ.ಪಂ.ಇಓ. ಜಿ.ಪಂ.ಸಿಇಓ, ಜಿಲ್ಲಾಧಿಕಾರಿಗಳಿಗೂ ದಾಖಲೆ ಸಮೇತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಛಲಬಿಡದ ವಿಕ್ರಮನಂತೆ ಅಂತಿಮ ಹಂತವಾಗಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿದ ಪರಿಣಾಮವೇ ಈ ಪ್ರಕರಣ ಬೆಳಕಿಗೆ ಬಂದಿರುವುದು. ಪಂಚಾಯತ್ ರಾಜ್ ಇಲಾಖೆಯಿಂದ ಚಾಮರಾಜನಗರದ ಓಂಬುಡ್ಸ್ ಮನ್‌ರವರಿಗೆ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿದ ನಂತರ ಓಂಬುಡ್ಸ್ ಮನ್ ರವರ ವಿಚಾರಣೆಯಿಂದ ಅಸಲಿ ಸತ್ಯ ಸಂಗತಿ ಬೆಳಕಿಗೆ ಬಂದಿದೆ.
ಓAಬುಡ್ಸ್ ಮನ್ ರವರ ಭೇಟಿಯ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಿAದ ಯಾವುದೇ ಗಿಡ ನೆಡುವ ಕಾಮಗಾರಿ ಕೈಗೊಳ್ಳದಿರುವುದು ಕಂಡುಬAದಿದೆ. ಕೊನೆ ಪಕ್ಷ ಗುಂಡಿ ಕೂಡ ತೆಗೆದಿರುವುದಿಲ್ಲ. ತಾ.ಪಂ.ನ ಸಹಾಯಕ ನಿರ್ದೇಶಕ(ಗ್ರಾ.ಉ) ಮತ್ತು ತಾಂತ್ರಿಕ ಸಂಯೋಜಕರು ಕಾಮಗಾರಿಯ ಉಸ್ತುವಾರಿ/ಮೇಲ್ವಿಚಾರಣೆ ಮಾಡರದಿರುವುದು ಬೆಳಕಿಗೆ ಬಂದಿದೆ. ೨೦೨೨-೨೩ ನೇ ಸಾಲಿನಲ್ಲಿ ಗ್ರಾ.ಪಂ.ನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಯಾಗಿದ್ದು ೨.೫೦ ಲಕ್ಷ ಮೊತ್ತಕ್ಕೆ ಜಿ.ಪಂ.ನಿAದ ಅನುಮೋದಿಸಲ್ಪಟ್ಟಿದೆ. ಕೆಲಸಕ್ಕಾಗಿ ಅರ್ಜಿ ಕರೆದಂತೆ, ಹಂಚಿಕೆ ಮಾಡಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ.
ಫಲಾನುಭವಿಯಿಂದ ಯಾವುದೇ ಮನವಿ ಅರ್ಜಿ ಸಲ್ಲಿಕೆಯಾಗಿಲ್ಲದಿರುವುದು. ೭ ಎಂಎನ್‌ಆರ್‌ಗಳನ್ನು ತೆಗೆದು ೯೭,೪೯೮ ರೂಗಳನ್ನು ಕೂಲಿ ಹಣಕ್ಕೆ ಪಾವತಿಸಿರುವುದಾಗಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಡೆಯದ ಗಿಡ ನೆಡುವ ಕಾಮಗಾರಿಗೆ ತಾಂತ್ರಿಕ ಸಹಾಯಕ ಪ್ರದೀಪ್ ಕುಮಾರ್, ಕಾಮಗಾರಿಯ ಮೇಲ್ವಿಚಾರಣೆ ನಡೆಸಿದಂತೆಯೂ ಅಳತೆ ಪುಸ್ತಕದಲ್ಲಿಯೂ ನಮೂದಿಸಿ ಪವಾಡ ಮೆರೆದಿರುವುದು ಬೆಳಕಿಗೆ ಬಂದಿದೆ. ಪಂಚಾಯ್ತಿ ದಾಖಲೆಯಲ್ಲಿ ಕಾಮಗಾರಿಯೊಂದಿಗೆ ಲಗತ್ತಿಸಿರುವ ಪೊಟೋಗಳಿಗೂ ಜಮೀನಿಗೂ ಯಾವುದೇ ತಾಳೆಯಿಲ್ಲದಿರುವುದು ಅದು ಬೇರೆ ಯಾವುದೋ ಅನ್ಯ ಬೇನಾಮಿ ಜಮೀನಿನದೆಂಬುದು ಗೊತ್ತಾಗಿದೆ. ಕಾಮಗಾರಿಯ ಸಾಮಾಜಿಕ ಲೆಕ್ಕ ಪರಿಶೋಧನೆ ಆಗಿರುವುದಿಲ್ಲ.
ಈ ಎಲ್ಲಾ ಅಕ್ರಮಗಳ ಹಿನ್ನೆಲೆಯಲ್ಲಿ ಪಂಚಾಯತಿ ಪಿಡಿಓ ಬಾಲಗಂಗಾಧರ್ ಹಾಗೂ ತಾಂತ್ರಿಕ ಸಹಾಯಕ ಪ್ರದೀಪ್ ಕುಮಾರ್ ಸಾಮೀಲಾಗಿ ನಡೆಯದ ಕಾಮಗಾರಿಗೆ ನಕಲಿ ದಾಖಲೆ ಸೃಷ್ಟಿಸಿ ಗೋಲ್ ಮಾಲ್ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರಿಂದ ವಸೂಲಿಗೆ ಆದೇಶಿಸಲಾಗಿದೆ.
ಇದೊಂದು ಬೆಳಕಿಗೆ ಬಂದ ಪ್ರಕರಣವಷ್ಟೆ ಆಗಿದ್ದು ೨೦೨೧ ರಿಂದ ಇಲ್ಲಿಯ ತನಕ ಇಂತಹ ನೂರಾರು ಪ್ರಕರಣಗಳು ನಡೆದಿದ್ದು ಹಲವರ ಹೆಸರಿನಲ್ಲಿ ಇದೇ ರೀತಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು ಲಕ್ಷಾಂತರ ರೂಪಾಯಿ ದುರ್ಬಳಕೆ ಆಗಿದ್ದು ಅವುಗಳ ಬಗ್ಗೆಯೂ ಉನ್ನತ ಮಟ್ಟದಿಂದ ಸಮಗ್ರ ತನಿಖೆ ನಡೆಸಿದಲ್ಲಿ ಇನ್ನೂ ಹೆಚ್ಚಿನ ಅಕ್ರಮಗಳು ಬೆಳಕಿಗೆ ಬರುವುದಾಗಿ ದೂರುದಾರ ದಿವ್ಯಾನಂದ ಆಗ್ರಹಿಸಿದ್ದಾರೆ.
ಈ ಅಕ್ರಮದಲ್ಲಿ ಸ್ಥಳೀಯ ಒಬ್ಬ ಸಸಿಗಳ ಮಾರಾಟಗಾರ ಆಗೂ ಪಂಚಾಯ್ತಿ ಸದಸ್ಯನೊಬ್ಬನ ಪಾಲುದಾರಿಕೆಯಿದ್ದು, ರೈತರನ್ನು ಪುಸಲಾಯಿಸಿ ಅವರಿಂದ ಮೊದಲಿಗೆ ೨೦ ಸಾವಿರ ರೂಪಾಯಿ ಹಾಗೂ ಜಮೀನಿನ ದಾಖಲೆಗಳನ್ನು ಪಡೆದುಕೊಂಡು ಯಂತ್ರದಿಂದ ರಕ್ತಚಂದನ ಹಾಗೂ ಶ್ರೀಗಂಧದ ಸಸಿಗಳನ್ನು ನಾಟಿ ಮಾಡಿ ನಂತರದಲ್ಲಿ ಎಂಎನ್‌ಆರ್‌ನಂತೆ ಕೂಲಿ ನಿರ್ವಹಿಸಿರುವುದಾಗಿ ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅವರ ಬ್ಯಾಂಕ್ ಖಾತೆಗೆ ಅವರಿಂದ ಪಡೆದುಕೊಂಡಿದ್ದ ಹಣವನ್ನೆ ಮರು ಪಾವತಿ ಮಾಡಲಾಗುತ್ತದೆ. ಈ ಕಾಮಗಾರಿಗೆ ೫೦ ಸಾವಿರದಷ್ಟು ವೆಚ್ಚವಾಗಿದ್ದರೆ, ೨.೫೦ ಲಕ್ಷ ಹಾಗೂ ಮೆಟೀರಿಯಲ್ ಬಿಲ್ ಸೇರಿದಂತೆ ಬಂದ ಲಕ್ಷಾಂತರ ಹಣವನ್ನು ಪಿಡಿಓ, ತಾಂತ್ರಿಕ ಸಹಾಯಕ ಹಾಗೂ ಕೆಲ ಸದಸ್ಯರು ಹಂಚಿಕೊಳ್ಳುತ್ತಿದ್ದು ಇದೇ ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಬಿಟ್ಟಿಯಾಗಿ ಗಿಡಗಳನ್ನು ನೆಡಿಸಿಕೊಂಡ ಖಷಿಯಲ್ಲಿ ರೈತರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಗುಮ್ಮಾಗುಳಿಯುವುದೇ ಇವರ ಅಕ್ರಮಕ್ಕೆ ರಹದಾರಿ ನೀಡಿದಂತಾಗಿದೆ.
ಮನರೇಗಾ ಯೋಜನೆಯಲ್ಲಿ ಈ ಪಂಚಾಯ್ತಿಯಲ್ಲಿ ೮೦ ರಿಂದ ೧೦೦ ಕೋಟಿಯಷ್ಟು ಕಾಮಗಾರಿ ನಡೆದಿದ್ದು ಸ್ಥಳೀಯ ಜನ ಸಾಮಾನ್ಯರು ಮಾತನಾಡಿಕೊಳ್ಳುವಂತೆ ಎಲ್ಲದರಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಜಗಜ್ಜಾಹೀರಾಗಿದ್ದು ಮನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಈ ಸಂಬಂಧದ ಕಡತಗಳನ್ನು ಸಮಗ್ರ ತನಿಖೆ ಮಾಡಿದಲ್ಲಿ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬರುವುದರಲ್ಲಿ ಸಂಶಯವೇ ಇಲ್ಲ. ಜಿಲ್ಲಾಡಳಿತ ಈ ಬಗ್ಗೆ ಪರಿಣಾಮಕಾರೀ ಕ್ರಮಕ್ಕೆ ಮುಂದಾಗುವುದೇ ಕಾದು ನೋಡೋಣ..

About Mallikarjun

Check Also

ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಗುರಿ ಸಾಧನೆ ಸಾಧ್ಯ-ಸಿದ್ದಲಿಂಗಪ್ಪ ಗೌಡ, ಪೊಲೀಸ್ ಉಪ ವಿಭಾಗಾಧಿಕಾರಿ

ಗಂಗಾವತಿ,: ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಗುರಿ ಸಾಧನೆ ಸಾಧ್ಯ ಎಂದು ಪೊಲೀಸ್ ಉಪ ವಿಭಾಗಾಧಿಕಾರಿ ಶ್ರೀ ಸಿದ್ದಲಿಂಗಪ್ಪ ಗೌಡ, ಹೇಳಿದರು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.