Suspicious death of a forest animal on World Elephant Day: Forest officials visit the place.
ವರದಿ :ಬಂಗಾರಪ್ಪ ಸಿ ಹನೂರು.
ಹನೂರು :ರೈತರ ಜಮೀನಿನಲ್ಲಿ ಕಾಡಾನೆಯೊಂದು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ . ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ನಾಗರಾಜು ಮತ್ತು ಸೆಲ್ವಂ ಎಂಬವರ ಜಮೀನಿನಲ್ಲಿ ಅಂದಾಜು 12 ವರ್ಷದ ಗಂಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದೇ ದಿನ ಇನ್ನೊಂದು ಪ್ರತ್ಯೇಕ ಪ್ರಕರಣ ನಡೆದಿದೆ .
ವೃದ್ಧೆಯಿಂದ ಹಣ, ಮೊಬೈಲ್ ದೋಚಿ ದುಷ್ಕರ್ಮಿಗಳು ಪರಾರಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ವೃದ್ಧೆಗೆ ಪೊಂಗಲ್ ತಿನ್ನಿಸಿ ಹಣ, ಮೊಬೈಲ್ ದೋಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ರತ್ಮಮ್ಮ(70) ವಂಚನೆಗೊಳಗಾದ ವೃದ್ಧೆ.ಮಲೆಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ರತ್ನಮ್ಮ ದೇವರ ದರ್ಶನ ಮುಗಿಸಿ ರಂಗಮಂದಿರದಲ್ಲಿ ಮಲಗಿದ್ದ ವೇಳೆ ಮೂವರು ಪುರುಷರು, ಓರ್ವ ಮಹಿಳೆ ಪರಿಚಯಿಸಿಕೊಂಡು ಜೊತೆಗೆ ಮಲಗಿದ್ದಾರೆ. ಬೆಳಗ್ಗೆ ವೃದ್ಧೆ ಎದ್ದ ಬಳಿಕ ಪೊಂಗಲ್ನಲ್ಲಿ ಮತ್ತು ಬರುವ ಔಷಧಿ ಬೆರೆಸಿಕೊಟ್ಟು ಪ್ರಜ್ಞೆ ತಪ್ಪಿಸಿ ಬಳಿಕ 10 ಸಾವಿರ ನಗದು, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಸದ್ಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.