Breaking News

ನಗರಕ್ಕೆ ರಾಜೀವ್ ಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆಯ ಆಗಮನ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

The arrival of the Rajiv Gandhi Jyoti Sadbhavana Yatra in the city was given a grand welcome by the Congress workers

ಜಾಹೀರಾತು

ಗಂಗಾವತಿ:ರಾಜೀವ್ ಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆಯ ಅಧ್ಯಕ್ಷರಾದ ದೊರೈ, ಉಪಾಧ್ಯಕ್ಷರಾದ ಗೋಮತಿಶನ್, ಶ್ರೀನಿವಾಸಪ್ಪ ಅವರ ನ್ನೊಳಗೊಂಡ ಸಮಿತಿಯ ಗಂಗಾವತಿ ನಗರಕ್ಕೆ ಬರಮಾಡಿಕೊಳ್ಳಲಾಯಿತು, ಇಂದಿರಾ ವೃತದಲ್ಲಿರುವ ಮಾಜಿ ಪ್ರಧಾನಿ ದಿ!!ಇಂದಿರಾಗಾಂಧಿ ಯವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೋಮ ತೀಶನ್ ಅವರು ಮಾತನಾಡಿದರು, ಗಂಗಾವತಿ ಕಾಂಗ್ರೆಸ್ ಪಕ್ಷದ ಪರವಾಗಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಅಜಗರ ಆಲಿಯವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅಮರೇಶ್ ಗೋನಾಳ್, ನಗರಸಭಾ ಸದಸ್ಯರಾದ ಮನೋಹರ್ ಸ್ವಾಮಿ, ಕಾಸಿಂಸಾಬ್ ಗದ್ವಾಲ್, ಎಫ್. ರಾಘವೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಣ್ಣಕ್ಕಿ ನೀಲಪ್ಪ, ಮಾಜಿ ಸದಸ್ಯರಾದ ವಿಠಲಪುರ್ ಯಮನಪ್ಪ,ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಜುಬೈರ್, ಗ್ರಾಮೀಣ ಬ್ಲಾಕ್ ಉಪಾಧ್ಯಕ್ಷರಾದ ವಿಶ್ವನಾಥ್ ಮಾಲಿಪಾಟೀಲ್, ಬಸಾಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಂಜನಿ ನಾಯಕ್, ವಡ್ಡರ ಹಟ್ಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗೌಸ್ ಸಾಬ್ ,ಪಕ್ಷದ ಹಿರಿಯ ಮುಖಂಡರುಗಳಾದ ಹಾಶುಮುದ್ದೀನ್ ವಕೀಲರು, ದುರ್ಗಪ್ಪ ಮೋರಿ, ನೀಲಕಂಠಪ್ಪ,ಇಲಿಯಾಸ ಬಾಬಾ,ಕಮಲಿ ಬಾಬಾ, ಹುಸೇನಪ್ಪ ಹಂಚಿನಾಳ,ಗಿರೀಶ್ ಗಾಯಕ್ವಾಡ, ರಾಮಣ್ಣ ಬಳ್ಳಾರಿ, ಯಮನಪ್ಪ ನವಲಿ, ಹನುಮೇಶಪ್ಪ ಡ್ಯಾಗಿ, ದುರುಗೇಶ್ ನಾಯಕ್, ಕೆ. ವಿ. ಬಾಬು ಅಯುಬ ಅಲಿ,ಆನಂದ್,ಪರಶುರಾಮ್ ಕಿರಿ ಕಿರಿ, ರವಿ ಸಿಂಗ್, ಗವಿಸಿದ್ದಯ್ಯ, ಹನುಮಂತಪ್ಪ ,ಚಂದ್ರಶೇಖರ್, ಶಿವರಾಜ್, ಭೀಮೇಶ್,ಅಬ್ಬಾಸ್, ಸುರೇಶ, ಮಂಜುನಾಥ ದೇವರ ಮನಿ ಇನ್ನಿತರು ಇದ್ದರು.

About Mallikarjun

Check Also

ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ

New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ …

Leave a Reply

Your email address will not be published. Required fields are marked *