Breaking News

ಹನೂರು ವಿಧಾನ ಕ್ಷೇತ್ರದ ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ ರೈತರು.

Farmers have appealed to the government to provide basic facilities to forested villages of Hanur Vidhan Constituency.


ವರದಿ: ಬಂಗಾರಪ್ಪ ಸಿ
ಹನೂರು : ಕ್ಷೇತ್ರದ ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವಂತೆ ಮಾನ್ಯ ರಾಜ್ಯ ಪಾಲರು ಹಾಗೂ ಮುಖ್ಯಮಂತ್ರಿಗಳು ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹನೂರು ಕ್ಷೇತ್ರದ ಶಾಸಕರಿಗೆ ವಿಧಾನ ಸೌದ ಕಚೇರಿಯಲ್ಲಿ ಕಾಡಂಚಿನ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಮನವಿ ಸಲ್ಲಿಸಿರುವ ಬಗ್ಗೆ ಮಾಧ್ಯಮದವರೊಂದಿಗೆ ನಾಗಮಲೆ ಗ್ರಾಮದ ನಿವಾಸಿ ಬೊಮ್ಮಯ್ಯ ಅವರು ಮಾತನಾಡಿ ಸ್ವಾತಂತ್ರ ಬಂದು 75ವರ್ಷ ಕಳೆದರೂ ಇನ್ನೂ ಸಹ ನಮ್ಮ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವ ಪರಿಸ್ಥಿತಿಯಾಗಿದೆ.
ಕಾಡಂಚಿನ ಗ್ರಾಮಗಳಾದ ತೋಳಸಿ ಕೆರೆ, ನಾಗಮಲೆ, ದೊಡ್ಡಾಣೆ, ಮೇದಗಣೆ, ಕೊಕ್ಕಬರೆ, ಮೆಂದರೆ, ಇಂಡಿಗನತ್ತ, ಪಡಸಲನತ್ತ ಸೇರಿದಂತೆ ಇತರೆ ಕಾಡಂಚಿನ ಸುತ್ತ ಮುತ್ತ,ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿದ್ದೆ, ಮೂರು ನಾಲ್ಕು ತಲೆ ಮಾರುಗಳಿಂದ ನಾವು ಜೀವನ ನಡೆಸುತ್ತಿದ್ದೇವೆ.
ಚುನಾವಣೆಯಲ್ಲಿ ಮತ ಕೇಳಲು ಮಾತ್ರ ಬರುತ್ತಾರೆ ಆದರೆ ನಮ್ಮ ಕಷ್ಟಗಳನ್ನು ಬಗೆಹರಿಸುತ್ತಿಲ್ಲ, ನಾಗಮಲೆ ಗ್ರಾಮದಲ್ಲಿ ನಾವು ಧನ ಕರು ಕುರಿಗಳನ್ನು ಮೇಯಿಸಿ ಕೊಂಡು ಜೀವನ ಸಾಗಿಸುತ್ತಿದೆವು ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ದೊಳಗೆ ಧನ ಕರುಗಳನ್ನು ಬಿಡದ ಕಾರಣ ನಾವು ದನ ಕರುಗಳನ್ನು ಮಾರಾಟ ಮಾಡಬೇಕಾಯಿತು.
ಆದರೆ ನಾಗ ಮಲೆ ದೇವಾಲಯದ ಬಳಿ ಸಣ್ಣ ಪುಟ್ಟ ಅಂಗಡಿ ಗಳನ್ನು ಇಟ್ಟು ಜೀವನ ನಡೆಸುತ್ತಿದ್ದೆವು ಆದರೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು ನಾಗ ಮಲೆ ದೇವಾಲಯಕ್ಕೆ ಭಕ್ತದಿ ಗಳನ್ನು ನಿಷೇದ ಮಾಡಿರುವುದರಿಂದ ನಮಗೆ ವ್ಯಾಪಾರವಿಲ್ಲದೆ ತುಂಬಾ ತೊಂದರೆ ಯಾಗಿದೆ ಇದರ ಬಗ್ಗೆ ಬೆಂಗಳೂರು ವಿಧಾನ ಸೌದದ ಸಚಿವರ ಕಚೇರಿಗಳಿಗೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಪಡಸಲನತ್ತ ಗ್ರಾಮದ ನಾಗರಾಜು ಮಾತನಾಡಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಡಂಚಿನ ಗ್ರಾಮ ಗಳಾದ ನಾಗ ಮಲೆ,ಮಂದರೆ, ಮೆದಗಣೆ ತೊಕೆರೆ ಸೇರಿದಂತೆ ಹಲವು ಕಾಡಂಚಿನ ಗ್ರಾಮ ಗಳಲ್ಲಿ ಸೋಲಾರ್, ರಸ್ತೆ ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಇಲ್ಲಿನ ಜನರು ಬಹಳ ಕಷ್ಟ ಪಡುವಂತ ಪರಿಸ್ಥಿತಿಯಿದೆ.
ನಾಗಮಲೆ ಗ್ರಾಮದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ 15 ಕಿಲೋ ಮೀಟರ್ ಕಾಡಿನಲ್ಲೇ ನಡೆದುಕೊಂಡು ಬರಬೇಕು. ಅನಾರೋಗ್ಯ ಸಮಸ್ಯೆಯಾದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ, ನಮ್ಮ ಬದುಕು ಶೋಚನಿಯ ವ್ಯವಸ್ಥೆ ಯಾಗಿದೆ ಎಂದು ತಮ್ಮ ಅಲಳನ್ನು ತೊಡಿಕೊಂಡರು.
ಅಂದಿನ ಜಿಲ್ಲಾಧಿಕಾರಿಯಾಗಿ ಡಾ. ಎಂ. ಆರ್ ರವಿಯವರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾಡಂಚಿನ ಗ್ರಾಮಗಳ ಮೂಲ ಭೂತ ಸೌಕರ್ಯ ಒದಗಿಸುವಂತೆ ಮನವಿ ಮಾಡಲಾಗಿತ್ತು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ ಸೋಮಣ್ಣ ರವರಿಗೂ ಸಹ ಮನವಿ ಸಲ್ಲಿಸಿದ್ದೆವು ಆದರೆ ಏನು ಪ್ರಯೋಜನವಾಗಿಲ್ಲ.
ಸೋಲಾರ್ ವ್ಯವಸ್ಥೆ ಇಲ್ಲದೆ ಕತ್ತಲೆ ಯಲ್ಲೇ ಜೀವನ ನಡೆಸುವ ಪರಿಸ್ಥಿತಿ ಉಂಟಾಗಿದೆ, ಜಲ ಜೀವನ್ ಯೋಜನೆ ಯಡಿಯಲ್ಲಿ ಕಳಪೆ ಕಾಮಗಾರಿಯನ್ನು ಕೈಗೊಂಡಿದ್ದಾರೆ, ಎಂದು ಆರೋಪಿಸಿದರು. ಆದ್ದರಿಂದ ಸರಕಾರ ಇತ್ತ ಗಮನಹರಿಸಿ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮ ಗಳಲ್ಲಿ ವಾಸಿಸುವ ಜನರಿಗೆ ಮೂಲ ಭೂತ ಸೌಕರ್ಯ ಗಳನ್ನು ಒದಗಿಸಬೇಕೆಂದು ಕೈ ಮುಗಿದು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಪಡಸಲನತ್ತ ಪುಟ್ಟಸ್ವಾಮಿ, ನಾಗರಾಜು, ನಾಗಮಲೆ ಬೊಮ್ಮಯ್ಯ, ಪುಟ್ಟ ತಮ್ಮಡಿ, ಲೋಕೇಶ, ಮಾದೇಶ, ವೆಂಕಟಚಲ ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ನೇಹಾ ಕೊಲೆ ಖಂಡಿಸಿ ಏಪ್ರಿಲ್-೨೪ ಗಂಗಾವತಿ ಬಂದ್ ಘೋಷಣೆಗೆ ಬಿಚಕತ್ತಿ ಸಹೋದರರು ಹಾಗೂ ಮುಸ್ಲಿಂ ಸಮುದಾಯ ಬೆಂಬಲ

Condemning Neha’s murder, Bichakatti brothers and Muslim community support declaration of April-24 Gangavati bandh. ಗಂಗಾವತಿ: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.