Breaking News

ಗಂಗಾವತಿ-ವಿಜಯಪುರ ನೂತನ ರೇಲ್ವೆ ,ನಿಲ್ದಾ ಮೇಲ್ದರ್ಜೆಗೆ:ಸಂಸದರಿಗೆ ಕೃತಜ್ಞತೆ.

Gangavati-Vijaypur New Railway, Nilda for Upgrading: Thanks to MPs.

ಗಂಗಾವತಿ:ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯರಾದ ಸಂಗಣ್ಣ ಕರಡಿಯವರು ಗಂಗಾವತಿ ಮತ್ತು ಭಾನಾಪೂರ ರೇಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಮತ್ತು ಜಿಲ್ಲೆಯ ವಿವಿಧ ರೇಲ್ವೆ ಸೌಲಭ್ಯ ಒದಗಿಸಲು ಒತ್ತಾಯಿಸಿ, ಹುಬ್ಬಳ್ಳಿಯ ನೈರುತ್ಯ ರೇಲ್ವೆ ವಿಭಾಗದ ಜನರ ಮ್ಯಾನೇಜರ್ ಅವರನ್ನು ಭೇಟಿಯಾಗಿ,ಒತ್ತಾಯಿಸಿದ್ದಾರೆ.

ಗಂಗಾವತಿ ರೇಲ್ವೆ ಸ್ಟೇಷನ್ ನಲ್ಲಿ ಎಕ್ಸಿಲೇಟರ್,ಲಿಫ಼್ಟ ಅಳವಡಿಸಲು ಮತ್ತು ಅಧಿಕೃತ ರೇಲ್ವೆ ಸಿಬ್ಬಂದಿ ಹೊಂದಿರುವ ಟಿಕೆಟ್ ಕೌ೦ಟರ್ ಆರಂಭಿಸಲು ಸಂಸದರು ಆಗ್ರಹಿಸಿದ್ದು,ಅದಕ್ಕೆ ರೇಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸಂಸದರ ಕೋರಿಕೆಯ ಪ್ರಕಾರ ಗಂಗಾವತಿ-ವಿಜಯಪುರ ನೂತನ ರೇಲ್ವೆ ಆರಂಭವಾಗಲಿದೆ ಮತ್ತು ಅಯೋಧ್ಯೆ-ಗಂಗಾವತಿ ನಡುವೆ ರಾಮಾಂಜನೇಯ ಎಕ್ಸ್‌ಪ್ರೆಸ್‌ ರೇಲ್ವೆ ಆರಂಭಿಸಲು ಆಗ್ರಹಿಸಿ ಪತ್ರ ಬರೆದಿದ್ದಾರೆ.

ಗಾಂಧೀಜಿಯವರು ಇಳಿದಿದ್ದ ಭಾನಾಪೂರ ರೇಲ್ವೆ ಸ್ಟೇಷನ್ ಅಭಿವೃದ್ಧಿ ಪಡಿಸಲು ಸಂಸದರು ಈ ಸಂಧರ್ಬದಲ್ಲಿ ಒತ್ತಾಯಿಸಿದ್ದಾರೆ.

ಗಿಣಿಗೇರಾ ರೇಲ್ವೆ ನಿಲ್ದಾಣದ ನಾಲ್ಕನೇ ಪ್ಲಾಟ್ ಫಾರಂ ಎತ್ತರಿಸಲು ಸಂಗಣ್ಣ ಕರಡಿ ಒತ್ತಾಯಿಸಿದ್ದಾರೆ.ಈ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ಧೇಶಕ ಹಾಗೂ ಕೊಪ್ಪಳ ಜಿಲ್ಲೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಸಂಸದರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.