Breaking News

ಮೈಸೂರಿನಲ್ಲಿಅಶೋಕಸ್ವಾಮಿಹೇರೂರಅವರಿಗೆ ಸನ್ಮಾನ.

Tribute to Ashokaswamy Herura in Mysore.

ಮೈಸೂರು:ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಕಾನೂನು ಘಟಕದ ಅಧ್ಯಕ್ಷರಾಗಿ ಮತ್ತು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಅಶೋಕಸ್ವಾಮಿ ಹೇರೂರ ಅವರನ್ನು ಮೈಸೂರು ಜಿಲ್ಲಾ ಔಷಧ ವ್ಯಾಪಾರಿಗಳು ಸನ್ಮಾನಿಸಿದರು.

ಮಂಗಳವಾರ ಸಂಘದ ಕಾರ್ಯಾಲಯದಲ್ಲಿ ಸಭೆ ಸೇರಿದ ಪದಾಧಿಕಾರಿಗಳು,ಹೇರೂರ ಅವರನ್ನು ಗೌರವಿಸಿದರು.

ಇಪ್ಪತ್ತು ವರ್ಷಗಳ ನಂತರ ರಾಜ್ಯದಲ್ಲಿ ಫ಼ಾರ್ಮಸಿ ಕೌನ್ಸಿಲ್ ಚುನಾವಣೆ ನಡೆಯುತ್ತಿದ್ದು,ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸಿರುವ ಮೈಸೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್.ಮಂಜುನಾಥ ಅವರ ಆಯ್ಕೆಗೆ ಶ್ರಮಿಸಬೇಕೆಂದು ಕರೆ ಕೊಟ್ಟರು.

ಔಷಧ ಮತ್ತು ಕಾಂತಿ ವರ್ಧಕ ಕಾಯ್ದೆಯಲ್ಲಿ ಕೆಮಿಸ್ಟ ಆಯಿಂಡ್ ಡ್ರಗ್ಗಿಸ್ಟ ಎಂಬ ಪದವನ್ನು ತೆಗೆದು ಹಾಕಿ ಫ಼ಾರ್ಮಸಿ ಎಂದು ಬದಲಾಯಿಸಲಾಗಿದೆ.ಅದರಂತೆ ಅರ್ಹತಾ ವ್ಯಕ್ತಿ ಎಂಬುದನ್ನು ರಿಜಿಸ್ಟರ್ಡ ಫ಼ಾರ್ಮಸಿಸ್ಟ ಎಂದು ಬದಲಾಯಿಸಲಾಗಿದೆ ಎಂದು ಅಶೋಕಸ್ವಾಮಿ ಹೇರೂರ ಮಾಹಿತಿ ನೀಡಿದರು.

ಜನೌಷಧಿ ಕೇಂದ್ರಗಳಿಗೆ ಒಂದು ಕಾನೂನು ಸಾಮಾನ್ಯ ಔಷಧ ವ್ಯಾಪಾರಿಗಳಿಗೊಂದು ಕಾನೂನು ಮಾಡಲಾಗುತ್ತಿದೆ.ಇದನ್ನು ವಿರೋಧಿಸಿ ಪತ್ರ ಬರೆಯಲಾಗಿದೆ,ಈ ದೇಶದಲ್ಲಿ ಕಾನೂನು ಎಲ್ಲರಿಗೂ ‌ ಒಂದೇ ತಾರತಮ್ಯ ಮಾಡಲು ಸಾಧ್ಯವಿಲ್ಲ ಎಂದವರು ಅಭಿಪ್ರಾಯ ಪಟ್ಟರು.

ಅಧಿಕಾರಿಗಳು ಚೈನ್ ಸ್ಟೋರ್ಸ್ ಮತ್ತು ಜನೌಷಧಿ ಕೇಂದ್ರಗಳ ಪರಿವೀಕ್ಷಣೆ ನಡೆಸುವುದೇ ಇಲ್ಲ.ಕೇವಲ ಸಾಮಾನ್ಯ ಔಷಧ ಮಳಿಗೆಗಳ ಪರಿವೀಕ್ಷಣೆ ಮಾಡುತ್ತಾರೆ ಎಂಬ ಅಪಾದನೆ ಇಡೀ ರಾಜ್ಯದಲ್ಲಿಯೇ ಇದ್ದು, ಈ ಬಗ್ಗೆ ಇಲಾಖೆಯ ಗಮನವನ್ನು ಸೆಳೆಯಲಾಗುವುದು ಎಂದು ಹೇರೂರ ತಿಳಿಸಿದರು.

ಮೈಸೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್.ಮಂಜುನಾಥ ಸೇರಿದಂತೆ ಇತರ ಪದಾಧಿಕಾರಿಗಳಾದ ಸುನಿಲ್ ಎಸ್.ಪಿ.ಫ಼ಾರ್ಮಾ, ನಾಗೇಶ್ ನಿಮಿಶಾ ಅಸೋಸಿಯೇಟ್ಸ್,ರಮೇಶ,ಸಿದ್ಧು ನಾಯಕ್ ಲಕ್ಶ್ಮಿ ಫ಼ಾರ್ಮಾ ಮತ್ತು ಸಿದ್ದುರಾಜ್ ಮೆಡಿಲಿಂಕ್ ಫ಼ಾರ್ಮಾ ಮುಂತಾದವರು ಹಾಜರಿದ್ದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.