ಜಾಹೀರಾತು

Namdev Simpi Samaj* *Serial Number 940* *Kulakasabu Darji / Weaver

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 (ಜಾತಿಗಣತಿ)ಯಲ್ಲಿ ತಪ್ಪದೇ ಪ್ರತಿಯೊಬ್ಬರೂ ಭಾಗವಹಿಸಬೇಕು ಹಾಗೂ
*ನಾಮದೇವ ಸಿಂಪಿ ಸಮಾಜ*
*ಸಿರಿಯಲ್ ನಂಬರ್ 940*
*ಕುಲಕಸಬು ದರ್ಜಿ / ನೆಕಾರಿಕೆ* ಎಂದು ನಮೂದಿಸಬೇಕು ಎಂದು
ಕರ್ನಾಟಕ ರಾಜ್ಯ
ನಾಮದೇವ ಸಿಂಪಿ ಸಮಾಜದ ಅಧ್ಯಕ್ಷರ ನಾರಾಯಣ್.ವಿ. ಕೊಪರ್ಡೆ ಮನವಿ ಮಾಡಿದ್ದಾರೆ.
ಜಾತಿಗಣತಿಯ ಸಮಯದಲ್ಲಿ ಮನೆ ಮನೆಗೆ ಬರುವ ಗಣತಿದಾರರಿಗೆ ಅನುಸೂಚಿಯ ಧರ್ಮದ ಕಾಲಂನಲ್ಲಿ *ಹಿಂದೂ* ಎಂದು ನಮೂದಿಸಿ,
ಜಾತಿ ಕಾಲಂನಲ್ಲಿ *ನಾಮದೇವ ಸಿಂಪಿ* ಎಂದು ನಮೂದಿಸಿ ಜಾತಿಯ ಸಂಕೇತ *ಸಂಖ್ಯೆ 940* ಎಂದು ದಾಖಲಿಸಬೇಕು. ಹಾಗೂ *ಕುಲಕಸಬು ದರ್ಜಿ / ನೆಕಾರಿಕೆ* ಎಂದು ನಮೂದಿಸಬೇಕು ಇವುಗಳ ಜೊತೆಗೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ಪಷ್ಟವಾಗಿ ಗಣತಿದಾರರಿಗೆ ನೀಡಿ, ತಾವು ನೀಡಿದ ಮಾಹಿತಿಯನ್ನು ಸರಿಯಾಗಿ ದಾಖಲಿಸಿಕೊಂಡಿದ್ದಾರೆಯೇ ಎಂಬುದುನ್ನು ಖಚಿತಪಡಿಸಿಕೊಂಡು ಒಪ್ಪಿಗೆ ನೀಡುವುದನ್ನು ಮರೆಯಬಾರದು ಎಂದು ಕರ್ನಾಟಕ ರಾಜ್ಯ ನಾಮದೇವಸಿಂಪಿ ಸಮಾಜದ ಅಧ್ಯಕ್ಷ ನಾರಾಯಣ.ವಿ. ಕೊಪರ್ಡೆ ನಾಮದೇವ ಸಿಂಪಿ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಆಯೋಗವು ಕೈಪಿಡಿಯನ್ನು ಬಿಡುಗಡೆ ಮಾಡಿದ ನಂತರ ಅಧಿಕೃತ ಮಾಹಿತಿಯನ್ನು ತಮ್ಮ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು
ಸರ್ಕಾರಕ್ಕೆ ನಾಡಿನ ಜನರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ನಿಖರ ಮಾಹಿತಿ ದೊರೆತರೆ, ನಾಡಿನ ಜನರೆಲ್ಲರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸಲು ಅನುಕೂಲವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮೀಸಲಾತಿಗಾಗಿ ನೀಡುವ ಜಾತಿ ಪ್ರಮಾಣ ಪತ್ರಕ್ಕೂ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬರೆಸುವ ಮಾಹಿತಿಗೂ ಸಂಬಂಧವಿರುವುದಿಲ್ಲ. ನೈಜ ಜಾತಿಯನ್ನು ಶಾಲಾ ದಾಖಲಾತಿ ಇನ್ನಿತರೇ ದಾಖಲಾತಿಗಳನ್ನು ಪರಾಮರ್ಶಿಸಿದ ಬಳಿಕವಷ್ಟೇ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ನೈಜ ಜಾತಿಯನ್ನೇ ಸಮೀಕ್ಷೆಯಲ್ಲಿ ಬರೆಸಬೇಕು, ನಮ್ಮ ಸಮುದಾಯದ ನೈಜ ಒಟ್ಟು ಸಂಖ್ಯೆ ಹೊರಹೊಮ್ಮಲು ಸಹಕರಿಸಬೇಕು
ಎಂದು ಮನವಿ ಮಾಡಿದರು.
*ಜಾತಿ ಹೆಸರು ಬರುವ ನಾಮದೇವ ಸಿಂಪಿ ಸಮಾಜದ ಇಂಗ್ಲಿಷ್ ಅಕ್ಷರ *N* *ಆರಂಭವಾಗುತ್ತದೆ. ಸಿರಿಯಲ್ ನಂಬರ್ 940 ಕುಲಕಸಬು ದರ್ಜಿ / ನೆಕಾರಿಕೆ*
ಸಮೀಕ್ಷೆ ಕಾರ್ಯವನ್ನು ಪಡಿತರ ಚೀಟಿ ಮತ್ತು ಆಧಾರ್ ಗುರುತಿನ ಚೀಟಿಯ ಸಂಖ್ಯೆಯ ಆದಾರದ ಮೇಲೆ ಮಾಡುತ್ತಾರೆ . ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿದಾಗ ಮೇಲಿನ ದಾಖಲೆಯನ್ನು ನೀಡಿ ಪರಿಪೂರ್ಣ ಮಾಹಿತಿ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.
ಎಲ್ಲ ಜಾತಿ, ಸಮುದಾಯಕ್ಕೂ ನ್ಯಾಯ ದೊರಕುವ ರೀತಿಯಲ್ಲಿ ಸಮೀಕ್ಷೆಯನ್ನು ನಡೆಸುವಂತೆ ನಾಮದೇವ ಸಿಂಪಿ ಸಮಾಜ ಮನವಿ ಮಾಡಿದ್ದು ಸಮುದಾಯ ಎಲ್ಲರೂ
ಏಕಮತ್ಯದಿಂದ ಮತ್ತು ಒಕ್ಕೊರಲಿನಿಂದ ಸಮೀಕ್ಷೆಯಲ್ಲಿ ನೈಜವಾದ ಜಾತಿ ಹೆಸರು ಬರೆಸುವಂತೆ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷರ ನಾರಾಯಣ್.ವಿ. ಕೊಪರ್ಡೆ ಮನವಿ ಮಾಡಿದ್ದಾರೆ.
ಪ್ರಧಾನಕಾರ್ಯದರ್ಶಿ ಮುರುಳಿಧರ್ ಹಾಸಲ್ಕ್ ರ್
ಸಂಘಟನಾ ಕಾರ್ಯದರ್ಶಿ ರಾಜೇಶ್.ಎಂ.ಪಿ.
ಸಹಕಾರ್ಯದರ್ಶಿ,
ಸತೀಶ್ ಕುಮಾರ್ ಧಾವಸ್ಕರ್ ಪಾಂಡುರಂಗನಾಮದೇವ ಪಿಸೆ, ನಾಗರಾಜ್.ಕೆ. ಪತಂಗ, ರಮೇಶ್.ವಿ.ಚಿಕ್ಕಲಕರ್ ಹಾಗೂ ಅಶೋಕ್ ಎಂ.ಬೊಂಗಾಳೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
Total Views:
0
