Breaking News

ಅರಿವಿನ ಪರಿಮಳ ಸೂಸಿದಕಾಯಕಯೋಗಿ ಶರಣ ಹೂಗಾರ ಮಾದಯ್ಯ:ಅರುಣ್ ಕುಮಾರ್ ಚಂದಾ

Kayakayogi Sharan Hugara Madaiah who smelled the scent of knowledge: Arun Kumar Chanda

ಜಾಹೀರಾತು

ಮಾನ್ವಿ: ಪಟ್ಟಣದ ಉದ್ಬವ ಶ್ರೀ ಆಂಜನೇಯ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ತಾಲೂಕು ಹೂಗಾರ ಸಮಾಜ, ತಾ.ವೀರಶೈವ ಲಿಂಗಾಯತ ಸಮಾಜ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಯುಕ್ತಾಶ್ರಯದಲ್ಲಿ ನಡೆದ ಕಾಯಕಯೋಗಿ ಶರಣ ಶ್ರೀ ಹೂಗಾರ ಮಾದಯ್ಯನವರ ಜಯಂತಿ ಕಾರ್ಯಕ್ರಮವನ್ನು ಶರಣ ಶ್ರೀ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾ.ಅಧ್ಯಕ್ಷರಾದ ಅರುಣ್ ಕುಮಾರ್ ಚಂದಾ ಮಾತನಾಡಿ ೧೨ ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪ್ಪದಲ್ಲಿ ಪ್ರಮುಖ ಶರಣರಾಗಿದ್ದ ಶರಣ ಶ್ರೀ ಹೂಗಾರ ಮಾದಯ್ಯನವರು ಹೂಮಾರುವ ಕಾಯಕದೊಂದಿಗೆ ಅನೇಕ ವಚನಗಳನ್ನು ರಚಿಸಿದರೆ ಅವರ ತತ್ವಗಳನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ವೀ.ಲಿಂ. ಸಮಿತಿಯ ತಾ.ಅಧ್ಯಕ್ಷರಾದ ಹರಿಹರ ಪಾಟೀಲ್, ಹೂಗಾರ ಸಮಾಜದ ಅಧ್ಯಕ್ಷರಾದ ಬಸವರಾಜ್ ಹೂಗಾರ್ ಹರವಿ, ಶರಣಪ್ಪ ಹೂಗಾರ್, ಸಂತೋಷ್ ಹೂಗಾರ್, ವಿರುಪಾಕ್ಷಿ ಹೂಗಾರ್, ಶಿವಕುಮಾರ್ ಹೂಗಾರ್, ಪ್ರಕಾಶ್ ಹೂಗಾರ್, ಪರಣ್ಣ ಹೂಗಾರ್, ಸುರೇಶ್ ಹೂಗಾರ್, ಶಿವಕುಮಾರ್, ವಿಜಯಕುಮಾರ್ ಸ್ವಾಮಿ ಸಂಕೇಶ್ವರ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *