Breaking News

ಇಂದು ಗುದ್ದೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ,

Today is Panchakalasa Maharathotsava of Guddeswara Swami.

ಜಾಹೀರಾತು
IMG 20241215 WA0021

ವರದಿ: ಪಂಚಯ್ಯ ಹಿರೇಮಠ

ನವ ಜೋಡಿಗಳಿ ಆಸಸ್ಥಾನ,,! ದಂಪತಿಗಳು ನೋಡಲೇಬೇಕಾದ ಪಂಚಕಳಸೋತ್ಸವ,,,


ಕುಕನೂರು, ಡಿ. 15 : ಪಟ್ಟಣದ ಗುದ್ನೇ ಪ್ಪನಮಠದ ಶ್ರೀ ಗುದ್ದೇಶ್ವರ ಪಂಚಕಳಸ ಮಹಾರಥೋತ್ಸವ ಡಿ.15 ರವಿವಾರದಂದು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಲಿದೆ.

ಗುದ್ದೇಶ್ವರನ ಪಂಚಕಳಸ ರಥೋತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯೇ ಇದೆ. ಕುಕನೂರಿನ ಪೂರ್ವಕ್ಕೆ ಗುದ್ದೇಪನಮಠ, ಪಶ್ಚಿಮಕ್ಕೆ ಮಹಾಮಾಯ ದೇವಸ್ಥಾನ, ಉತ್ತರಕ್ಕೆ ಕಲ್ಲೂರ ಕಲ್ಲಿನಾಥೇಶ್ವರ ದೇವಾಲಯ, ದಕ್ಷಿಣಕ್ಕೆ ಕೊಪ್ಪಳ ಗವಿಶಿದ್ದೇಶ್ವರ ದೇವಾಲಯ ಹೀಗೆ ಸುತ್ತ ಮುತ್ತಲಿನ ಪ್ರದೇಶಗಳೆಲ್ಲವು ಐತಿಹಾಸಿ ಹಾಗೂ ಧಾರ್ಮಿಕ ಭಕ್ತಿಯ ನೆಲೆ ಬಿಡಾಗಿದ್ದು ಇವುಗಳು ತಮ್ಮದೇ ಆದ ಐತಿಹಾಸಿಕ ಹಿನ್ನೇಲೆಯುಳ್ಳದ್ದಾಗಿವೆ.

ಈ ನಾಡಿನಲ್ಲಿಯೇ ವಿಶೇಷ ರಥೋತ್ಸವ ಇದಾಗಿದ್ದು ಪಂಚಕಳಸ ಹೊಂದಿರುವಂತಹ ವೈಶಿಷ್ಟ್ಯತೆ ಹೊಂದಿದ್ದು ಇದು ಜಿಲ್ಲೆಯಲ್ಲಿಯೇ ಆತಿ ದೊಡ್ಡ ರಥೋತ್ಸವ.

ಸಾಮಾನ್ಯವಾಗಿ ಎಲ್ಲ ರಥಗಳಿಗೆ ಒಂದೇ ಕಳಸ ಇರುವುದು ವಾಡಿಕೆ. ಆದರೆ ಈ ಗುದ್ದೇಶ್ವರನ ರಥಕ್ಕೆ ಐದು ಕಳಸಗಳಿರುವುದೊಂದು ವಿಶೇಷ.

ಗುದ್ದೇಶ್ವರ ಮಠದ ಅಧಿದೈವ ರುದ್ರಮುನೀಶ್ವರರು ಆದರೆ ಇವರಿಗೆ ವಾಡಿಕೆಯಲ್ಲಿ ಗುದ್ದೇಶ್ವರನೆಂದೇ ಖ್ಯಾತಿಯಾಗಿದ್ದಾರೆ, ರುದ್ರ ಮುನೀಶ್ವರರು ತಮ್ಮ ತಪೋ ಶಕ್ತಿಯಿಂದ ಜನರ ಸಂಕಷ್ಟಗಳನ್ನು ಪರಿಹರಿಸುತ್ತಾ, ಲೀಲೆಗೈಯುತ್ತಿರುವದರಿಂದ ಇಂದಿಗೂ ಜನರ ಕಷ್ಟ ಬಗೆಹರಿಸಿ, ಬೇಡಿ ಬಂದ ಭಕ್ತರ ಕಾಮಧೇನುವಾಗಿ ನೆಲೆಸಿದ್ದಾರೆ.

ರೇವಣಸಿದ್ದರು ಹಾಗೂ ಸುಂದರ ನಾಚಿಯರೇ ರುದ್ರ ಮುನೀಶ್ವರರ ತಂದೆ, ತಾಯಿ, ಕಾಂಚಿ ಪುರದಿಂದ ಸಂಚಾರಗೈಯುತ್ತ ಮಂಗಳ ವಾಡೆಗೆ ಆಗಮಿಸಿದ ದಂಪತಿಗಳು ಈ ನಾಡಿನಜನರ ಸುಖ, ದುಖಃಗಳಿಗೆ ಸ್ಪಂದಿಸಿ ಸಹಕಾರ ಸಹಾಯ ನೀಡುತ್ತಾರೆ. ಮೂರು ತಿಂಗಳು ಗರ್ಭಿಣೆಯಾಗಿದ್ದ ಸುಂದರ ನಾಚಿ ತವರು ಮನೆಗೆ ಹೋಗುವ ಅಭಿಲಾಷೆ ವ್ಯಕ್ತಪಡಿಸಿದಾಗ ರೇವಣಸಿದ್ದರು ತಮ್ಮ ಶಿವಯೋಗ ಶಕ್ತಿಯಿಂದ ಗರ್ಭದ ಕೂಸನ್ನು ಹೊರತೆಗೆದು ಭೂಮಿಯಲ್ಲಿ ಹೂಳಿಸುತ್ತಾರೆ. ಒಂಬತ್ತು ತಿಂಗಳು ನಂತರದಲ್ಲಿ
ಭೂಮಿಯಿಂದ ತೆಗೆಸಿದಾಗ ಮಗು ಬೆಳದಿರುತ್ತದೆ. ಈ ಪ್ರನಾಳ ಶಿಶುವೇ ರುದ್ರಮುನೀಶ್ವರರು.

ನಂತರದಲ್ಲಿ ರೇವಣಸಿದ್ದರು ರುದ್ರಮುನೀಶ್ವರರನ್ನು ರಂಭಾಪುರಿ ಮಠಕ್ಕೆ ತಂದು ಲಾಲನೆ ಪಾಲನೆ ಮಾಡುತ್ತಾರೆ. ನಂತರ ಗುರುವಿನ ಅಪ್ಪಣೆ ಪಡೆದ ರುದ್ರಮುನೀಶ್ವರ ದೇಶ ಸಂಚಾರಗೈಯುತ್ತ ಮಂಗಳವಾಡಿ ಕಲ್ಯಾಣ ಶರಣರ ಶರಣಸಂದೋಹದಲ್ಲಿ ಶಿವಾನುಭವ ಮಂಟಪದಲ್ಲಿ ಭಾಗಿಯಾಗುತ್ತಾರೆ. ಕಾಲಾನಂತರದಲ್ಲಿ ಲೀಲೆ ಗೈಯುತ್ತಾ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ, ಸಿದ್ನೇಕೊಪ್ಪ, ಬಿನ್ನಾಳ, ಅಂಕಲಗಿ ಸೇರಿದಂತೆ ವಿವಿದೆಡೆಗಳಲ್ಲಿ ಸಂಚರಿಸಿ ಕೊನೆಗೆ ಕುಕನೂರಿಗೆ ಆಗಮಿಸಿ ಕುಕನೂರಿನ ಗವಿಯೊಂದರಲ್ಲಿ ವಾಸಿಸುತ್ತಾ, ದನಗಾಯಿಗಳ ನೆರವಿನಿಂದ ಅಲ್ಲಿ ನೆಲೆ ನಿಂತು ಭಕ್ತರಿಗೆ ದರ್ಶನ ಹಾಗೂ ಲೀಲೆಗಳನ್ನು ಮಾಡುತ್ತಾ ಆಶಿರ್ವಧಿಸುತ್ತಾರೆ.

ನಂತರ ಕುಕನೂರಿನ ಈಗಿನ ಗುದ್ನೇಪ್ಪನ ಮಠದ ಜಮೀನು ಬರಡು ಭೂಮಿಯಾಗಿತ್ತು ಆದ್ದರಿಂದ ಆಗಿನ ಆಸ್ಥಾನಿಕ ಅರಸರು ಈ ಭೂಮಿಯನ್ನು ದಾನ ರೂಪದಲ್ಲಿ ನೀಡಿದ್ದರು ಎಂದು ಐತಿಹ್ಯದಿಂದ ತಿಳಿದು ಬಂದಿದ್ದು, ದಾನವಾಗಿ ನೀಡಿದ ಬರಡು ಭೂಮಿಯ ಜಮೀನಲ್ಲಿ ಒಂದು ಗಳಿಗೆಯಲ್ಲಿ 500 ಎಕರೆ ಹುಣಸೆ ಬೀಜ ಬಿತ್ತಿದನು, ಇದನ್ನು ಕೇಳಿದ ಅರಸರು ಕುಪಿತಗೊಂಡು ರುದ್ರಮುನೀಶ್ವರನ್ನು ಬಂಧಿಸಿ ತರಲು ಹೇಳುತ್ತಾನೆ ಈ ಸುದ್ದಿ ತಿಳಿಯುತ್ತಿದ್ದಂತೆ, ರುದ್ರಮುನೀಶ್ವರರು ಕುಕನೂರು ಅರಸನಿಗೆ ಇನ್ನೂ ಮುಂದೆ ನಾನು ಕಾಣಿಸಬಾರದು ಎಂದು ತಾನು ಸೇರಿದ ಹಾವಿನ ಹುತ್ತದ ಸುತ್ತಲು ದೊಡ್ಡ ಒಡ್ಡುಗಳನ್ನು ಹಾಕಿ, ತಾನು (ಹಾವಿನ ಹುತ್ತ) ಗುದ್ದಿನೊಳಗೆ ಹಾವಾಗಿ ಸೇರಿದನು ಅಂದಿನಿಂದ ಗುದ್ನೇಶ್ವರನಾಗಿ ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ಬಂದಿದ್ದಾನೆ. ಎನ್ನುವದು ಐತಿಹ್ಯಗಳಿಂದ ತಿಳಿದು ಬರುತ್ತದೆ.

ರುದ್ರಮುನೀಶ್ವರರು ಅಂದು ಯಾವ ಜಾಗೆಯಲ್ಲಿ ಬಿತ್ತುವದನ್ನು ನಿಲ್ಲಿಸಿದ್ದರೋ ಆ ಸ್ಥಾನದಲ್ಲಿಯೇ ಎತ್ತುಗಳು ಕಲ್ಲುಗಳಾದವೆಂದು, ಹಾಗೂ ಅವರು ಒಟ್ಟಿದ ಮೇವಿನ ಬಣವೇ ಕೂಡಾ ಕಲ್ಲಾಯಿತು ಎಂದು ಇತಿಹಾಸದಿಂದ ತಿಳಿದು ಬಂದಿದ್ದು, ಇಂದಿಗೂ ಕೂಡಾ ಅವುಗಳು ವಿಕ್ಷಣೆಗೆ ಪ್ರಸ್ತುತವಾಗಿವೆ.

ನೂತನ ದಂಪತಿಗಳ ಆಸಸ್ಥಾನ :
ಈ ಪಂಚಕಳಸ ಮಹಾರಥೋತ್ಸವವು ನವ ಜೋಡಿ ( ನೂತನ ದಂಪತಿ)ಗಳ ಆಸಸ್ಥಾನವಾಗಿದೆ. ಈ ಪಂಚಕಳಸ ರಥೋತ್ಸವಕ್ಕೆ ನಾಡಿನ ವಿವಿಧೆಡೆಗಳಿಂದ ನೂತನ ದಂಪತಿಗಳು ಆಗಮಿಸಿ ಭಕ್ತಿ ಸಮರ್ಪಿಸಿದರೇ ಒಂದು ವರ್ಷದಲ್ಲಿ ಒಳ್ಳೆಯದಾಗುವುದು ಎನ್ನುವುದು ವಾಡಿಕೆ ಹಾಗೂ ನಂಬಿಕೆ.

About Mallikarjun

Check Also

whatsapp image 2025 11 15 at 6.04.03 pm

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ Government School Hosalli attracts attention with …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.