ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಹಾಗೂ ಕೊಪ್ಪಳ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Appointment of new office bearers of Karnataka Dalit Sangharsh Samiti's state and Koppal district units

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಹಾಗೂ ಕೊಪ್ಪಳ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಜಾಹೀರಾತು

​ಗಂಗಾವತಿ: ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸಂಘಟನೆಯ ರಾಜ್ಯ ಹಾಗೂ ಕೊಪ್ಪಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ನೇಮಕಾತಿ ಸಭೆಯು ರಾಜ್ಯ ಸಂಚಾಲಕರಾದ ಡಿ.ಆರ್. ಪಾಂಡುರಂಗಸ್ವಾಮಿ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಜೂನ್ 08 ರಂದು ನಗರದ ಸರ್ಕಿಟ್ ಹೌಸ್ ನಲ್ಲಿ ಯಶಸ್ವಿಯಾಗಿ ಜರುಗಿತು.
​ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಸಂಚಾಲಕ ಡಿ.ಆರ್. ಪಾಂಡುರಂಗಸ್ವಾಮಿ ಹೆಗಡೆ ಅವರು, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಸಂಘಟನೆಯನ್ನು ಬೇರು ಮಟ್ಟದಿಂದ ಬಲಪಡಿಸುವಂತೆ ಕರೆ ನೀಡಿದರು. ಗ್ರಾಮ ಮತ್ತು ತಾಲೂಕು ಮಟ್ಟದ ಸಮಸ್ಯೆಗಳನ್ನು ಗುರುತಿಸಿ, ಅವುಗಳ ನಿವಾರಣೆಗೆ ನಿರಂತರವಾಗಿ ಶ್ರಮಿಸಬೇಕು. ಕಾಯ, ವಾಚಾ, ಮನಸಾ ನಿಷ್ಠೆಯಿಂದ ಸಂಘಟನೆಯ ಉದ್ದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂದು ಅವರು ಸೂಚಿಸಿದರು. ​ನೂತನ ಪದಾಧಿಕಾರಿಗಳ ವಿವರ: ​ರಾಜ್ಯ ಸಂಘಟನಾ ಸಂಚಾಲಕರು: ಹಂಪೇಶ ಜಿ. ಹರಿಗೋಲ್. ​ಕಲ್ಯಾಣ ಕರ್ನಾಟಕ ಸಂಚಾಲಕರು: ಯಮನೂರಪ್ಪ ನಾಯಕ ಹುಲಿಹೈದರ್. ​ಕಲ್ಯಾಣ ಕರ್ನಾಟಕ ಸಂಘಟನಾ ಸಂಚಾಲಕರು: ಹನುಮಂತಪ್ಪ ಈಳೀಗನೂರು.
​ಜಿಲ್ಲಾ ಸಂಚಾಲಕರು (ಕೊಪ್ಪಳ): ದುರುಗಪ್ಪ ಹೊಸಳ್ಳಿ. ​ಜಿಲ್ಲಾ ಮಹಿಳಾ ಒಕ್ಕೂಟ ಸಂಚಾಲಕರು: ಶ್ರೀಮತಿ ಪಾರ್ವತಮ್ಮ ಹೆಚ್. ಹರಿಗೋಲ್. ​ಜಿಲ್ಲಾ ಖಜಾಂಚಿ (ಕೊಪ್ಪಳ): ಆರ್.ಕೆ. ರಮೇಶ.
​(ಇವರಲ್ಲದೆ ಕೊಪ್ಪಳ ಜಿಲ್ಲಾ ಸಂಘಟನಾ ಸಂಚಾಲಕರುಗಳಾಗಿ ಶಿವಪ್ಪ ಪೂಜಾರ, ಕೆ. ವೆಂಕಟೇಶ ನೀರಲೂಟಿ, ಹನುಮಂತ ಬಳ್ಳಾರಿ, ಗೋವಿಂದಪ್ಪ ವಡ್ಡೆಪಲ್ಲಿ, ಹುಲಗಪ್ಪ ಡಂಬರ್, ಶಾರದಮ್ಮ ಕಟ್ಟಿಮನಿ ಹಾಗೂ ವಿವಿಧ ತಾಲೂಕು ಸಂಚಾಲಕರಾಗಿ ನಾಗರಾಜ ವೆಂಕಟಗಿರಿ (ಗಂಗಾವತಿ), ಶ್ಯಾಮಣ್ಣ ಭಂಡಾರಿ ಮತ್ತು ಪಾಮೇಶ ಹರಿಗೋಲ್ (ಕನಕಗಿರಿ) ಆಯ್ಕೆಯಾಗಿದ್ದಾರೆ.) ​ಈ ಸಂದರ್ಭದಲ್ಲಿ ಶಿವಾನಂದ ಎಂ. ಸಾವಳಗಿ, ಗೋವಿಂದ ಸಣ್ಣಕ್ಕಿ, ಗುರುಬಾಯಿ ಎನ್. ಕಟ್ಟಿಮನಿ ಸೇರಿದಂತೆ ಅನೇಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳು ಸಂಘಟನೆಯ ಉನ್ನತಿಗೆ ಮತ್ತು ಜನಪರ ಕೆಲಸಗಳಿಗೆ ಬದ್ಧರಾಗಿರುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.

Total Views: 1
Share This Article