SKRPU college students selected for state level
ಗಂಗಾವತಿಯ ಶ್ರೀ ಕೆಂಧೋಳೆ ರಾಮಣ್ಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ 2023-24 ನೇ ಸಾಲಿನ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಓದಿನಲ್ಲಷ್ಟೇ ಅಲ್ಲ ಆಟಗಳಲ್ಲೂ ತಾವು ಯಾರಿಗಿಂತಲೂ ಹಿಂದಿಲ್ಲ ಎಂದು ಸಾಧಿಸಿ ತೋರಿಸಿದ್ದಾರೆ.
ಕುಮಾರಿ. ಸೃಷ್ಟಿ ಇಲ್ಲೂರು ಚೆಸ್ ನಲ್ಲಿ ಪ್ರಥಮ ಸ್ಥಾನ, ಕುಮಾರಿ. ಅಂಕಿತ ಹ್ಯಾಮರ್ ತ್ರೋ ಪ್ರಥಮ ಸ್ಥಾನ, ಕುಮಾರ. ಶೇಕ್ ಅಹಮದ್ ಪೋಲ್ ವಾಲ್ಟ್ ಪ್ರಥಮ ಸ್ಥಾನ, ಕುಮಾರ ಜಡೇಶ್ ತ್ರಿವಿಧ ಜಿಗಿತ ದ್ವಿತೀಯ ಸ್ಥಾನ ಮತ್ತು ಕುಮಾರ ಅನಿಲ್ ಹ್ಯಾಮರ್ ತ್ರೋ ತೃತೀಯ ಸ್ಥಾನ ಇವರು ಉತ್ತಮ ಸಾಧನೆಗೈದ ವಿದ್ಯಾರ್ಥಿಗಳು. ಇವರು ಎಸ್ ಕೆ ಆರ್ ಪಿ ಯು ಕಾಲೇಜಿಗಷ್ಟೇ ಅಲ್ಲದೆ ಗಂಗಾವತಿ ತಾಲ್ಲೂಕಿಗೂ ಕೀರ್ತಿಯನ್ನು ತಂದಿರುತ್ತಾರೆ ಎಂದು
ಕಾಲೇಜಿನ ಪ್ರಾಚಾರ್ಯರಾದ ಶ್ರೀ ವಿರುಪಾಕ್ಷಿ ಎನ್.ಹೆಚ್. ಅವರು ತಿಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಕೆಂಧೋಳೆ ಹಾಗೂ ಕಾರ್ಯದರ್ಶಿಗಳಾದ ಶ್ರೀ ರಾಮ ಮೋಹನ,
ಇತರೆ ಆಡಳಿಮಂಡಳಿಯ ಸದಸ್ಯರು ಮತ್ತು ಉಪನ್ಯಾಸಕ ವೃಂದ ಹರ್ಷವನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆಮಾಡಲು ಪ್ರೇರೇಪಣೆ ನೀಡಿದ್ದಾರೆ.Show more