Health is everyone’s right and everyone’s duty to maintain it- vam fa dan prem lobo
ಪೋತ್ನಾಳ :ಕಾಯಿಲೆಗಳು ಬರುವ ಮುನ್ನ ಜಾಗೃತಿ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು ಎಂದು ಲೋಯೋಲ ಸಮಾಜ ಸೇವಾ ಕೇಂದ್ರದ ನಿರ್ದೇಶಕರಾದ ವಂ ಫಾ ಫಾದರ್ ಡಾನ್ ಪ್ರೇಮ್ ಲೋಬೋ ತಿಳಿಸಿದರು.
ಸಮೀಪದ ಅಮರಾವತಿ ಗ್ರಾಮದಲ್ಲಿ ಲೋಯೋಲ ಸಮಾಜ ಸೇವಾ ಕೇಂದ್ರ ಮಾನ್ವಿ ಆರೋಗ್ಯ ಕೇಂದ್ರ ಜಾಗೀರಪನ್ನೂರು ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಉದ್ಘಾಟಿಸಿ ಮಾತನಾಡಿದರು
ನಂತರ ಮಾತನಾಡಿದ ಅವರು ಆರೋಗ್ಯ ವಾಗಿದ್ದರೆ ಆದಾಯ ಪ್ರಮಾಣ ಹೆಚ್ಚಾಗುತ್ತದೆ ಇಲ್ಲವಾದರೆ ವರ್ಷದ ದುಡಿಮೆಯ ಆದಾಯದಲ್ಲಿ ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ ಆದ್ದರಿಂದ ಕಾಯಿಲೆಗಳು ಬರುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಕೊಂಡು ಡಾ ಅನ್ನಮರಿಯಾ ನೀಡುವ ಸಲಹೆ ಪಾಲಿಸಬೇಕೆಂದು ತಿಳಿಸಿದರು
ಇದೇ ವೇಳೆ ಲೋಯೋಲ ಆರೋಗ್ಯ ಕೇಂದ್ರ ಜಾಗೀರಪನ್ನೂರು ಮುಖ್ಯಸ್ಥರಾದ ಸಿಸ್ಟರ್ ಲೀನಾ ಮಾತನಾಡಿ ಜನರ ಸಂಕಷ್ಟಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ಲೋಯೋಲ ಸಮಾಜ ಸೇವಾ ಕೇಂದ್ರದ ಮೂಲಕ ಉಚಿತ: ಆರೋಗ್ಯ ಶಿಬಿರಗಳಿಂದ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಇಂಥ ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಆಯೋಜಿಸಲಾಗುತ್ತದೆ ಈ ಶಿಬಿರದ ಪ್ರಯೋಜನವನ್ನು ತಾವೆಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು ಸುಮಾರು 250 ಹೆಚ್ಚು ರೋಗಿಗಳ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಲೋಯೋಲ ಸಮಾಜ ಸೇವಾ ಕೇಂದ್ರದ ಸಿಬ್ಬಂದಿಗಳಾದ ಶ್ರೀಮತಿ ಸುಮಿತ್ರಾ ಬಸವರಾಜ್ ಹರವಿ ಶ್ರೀ ಮತಿ ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.