Breaking News

ವೃಕ್ಷಬದುಕಿನಅಕ್ಷರವಾಗಲಿ – ಚನ್ನಪ್ಪ ವಿಶ್ವಕರ್ಮ

Let the tree be the letter of life – Channappa Vishwakarma

ಸಿಂಧನೂರು :ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಸಾಮಾಜಿಕ ಕಳಕಳಿ ಇರುವ ಮಾನವ ಸಂಪನ್ಮೂಲ ವ್ಯಕ್ತಿಗಳು ದೊರಕುವುದೇ ವಿರಳವಾಗಿದೆ.ಆದರೆ ಸಿಂಧನೂರು ತಾಲೂಕಿನ ಕೆ. ಹೊಸಹಳ್ಳಿ ಗ್ರಾಮದ ವನಸಿರಿ ಫೌಂಡೇಶನ್ ಜಿಲ್ಲಾಮಟ್ಟದ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿರುವ ಚನ್ನಪ್ಪ ವಿಶ್ವಕರ್ಮರವರು ತಮ್ಮ ಮಗುವಿನ ನಾಮಕರಣವನ್ನು 101 ಸಸಿಗಳನ್ನು ನೀಡುವ ಮೂಲಕ ವಿಶೇಷವಾಗಿ ಆಚರಿಸಿದರು.

ಪರಿಸರದ ಕಾಳಜಿ ಪ್ರತಿಯೊಬ್ಬರಲ್ಲಿ ಬರಬೇಕು ಹುಟ್ಟುಹಬ್ಬ ಮಗುವಿನ ನಾಮಕರಣ,ಮದುವೆಯಂತಹ ಸಮಾರಂಭಗಳಲ್ಲಿ ಬಂದಿರುವ ಅತಿಥಿಗಳಿಗೆಲ್ಲ ಸಸಿಗಳನ್ನು ನೀಡುವುದರ ಮೂಲಕ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಆಮ್ಲಜನಕದ ಲಭ್ಯತೆ ಹೆಚ್ಚಿಸಬಹುದಾಗಿದೆ.ಹಾಗಾಗಿ ನನ್ನ ಮಗುವಿನ ನಾಮಕರಣಕ್ಕೆ ಸಸಿಗಳನ್ನು ನೀಡಿದೆ ಎನ್ನುತ್ತಾರೆ ಚನ್ನಪ್ಪ ವಿಶ್ವಕರ್ಮರವರು.

ಹುಟ್ಟು ಹಬ್ಬದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ನಮ್ಮ ತಂಡದ ವತಿಯಿಂದ ತಾಲೂಕು ಜಿಲ್ಲೆಯ ರಾಜ್ಯಮಟ್ಟದಲ್ಲಿ ಸಸಿಗಳನ್ನು ವಿತರಿಸುವ ಮತ್ತು ಅವುಗಳನ್ನು ಕಾಳಜಿ ವಹಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ನಮ್ಮ ತಂಡದ ಉದ್ದೇಶವೇ ಹಸಿರು ಸಂರಕ್ಷಿಸುವುದು ಮತ್ತು ಸಸಿಗಳನ್ನು ಬೆಳೆಸುವುದು ಎಂದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪುರ ಹಾಗೂ ತಂಡದ ಸದಸ್ಯರು,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪಂಪನಗೌಡ ಹಾಗೂ ಸಿಬ್ಬಂದಿಗಳು,ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು,ಶಾಲೆಯ ಮುಖ್ಯ ಗುರುಗಳಾದ ಹುಸೇನ್ ಸಾಬ್ ಹಾಗೂ ಶಿಕ್ಷಕ ವರ್ಗದವರು, ಹಾಗೂ ಅಂಗನವಾಡಿ ಶಿಕ್ಷಕರು ಹಾಗೂ ಸಿಬ್ಬಂದಿಗಳು, ತುರವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಮೋದೀನ್ ಬೀ ಹಾಗೂ ಸಿಬ್ಬಂದಿಗಳು,ವಿಶ್ವಕರ್ಮ ಸಮಾಜದ ರಾಜ್ಯ ಕಾರ್ಯದರ್ಶಿ ಸೋಮಣ್ಣ ಸುಕಲಪೇಟೆ,ತಾಲೂಕ ಅದ್ಯಕ್ಷರಾದ ಮೌನೇಶ ತಿಡಿಗೋಳ ಹಾಗೂ ಪದಾಧಿಕಾರಿಗಳು ಹಾಗೂ ಸಮಾಜದ ಬಂಧುಗಳು, ಕುಟುಂಬ ವರ್ಗದವರು,ಹಾಗೂ ತುರವಿಹಾಳ ಸ್ನೇಹಿತರ ಬಳಗದ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಿದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.