Breaking News

ದಲಿತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ -ಶಾಸಕ ಕೆ.ಷಡಕ್ಷರಿ.

Respond appropriately to the problems of Dalits – Legislator K. Shadakshari.

ನಗರದ ಕಲ್ಪತರು ಕಾಲೇಜು ಆಡಿಟೋರಿಯಂ ನಲ್ಲಿ ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ವರ್ಗಗಳ ಕುಂದೂಕೊರತೆ ಸಭೆ ಉದೇಶಿಸಿ ಮಾತನಾಡಿದ ಅವರು ದಲಿತರಿಗೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳು ಕ್ರಮವಹಿಸಬೇಕು ಶಾಸಕರು ತಾಲ್ಲೋಕಿನಲ್ಲಿ ಅಧಿಕಾರಿಗಳು ದಲಿತರು ಬಡವರಿಗೆ ಮೂಲಸೌಕರ್ಯ ದೊರಕಿಸಲು ಹೆಚ್ಚು ಆಧ್ಯತೆ ನೀಡಬೇಕು
ತಾಲ್ಲೋಕಿನಲ್ಲಿ ಎಲ್ಲಾ ಗ್ರಾಮಗಳಲೂ ಸಾರ್ವಜನಿಕ ಸ್ಮಶಾನಗಳು ದೊರೆಯುವಂತೆ ಮಾಡಬೇಕು ಮನುಷ್ಯ ಬದುಕಿದ್ದಾಗ ನೆಮ್ಮದಿಯಾಗಿ ಇರುತ್ತಾನೋ ಇಲ್ಲವೋ ಸತ್ತ ನಂತರ ಅವನ ಶವಸಂಸ್ಕಾರಕ್ಕೆ ತೊಂದರೆಯಾಗ ಬಾರದು
ರಾಜ್ಯದಲ್ಲಿ ಹಲವಾರು ಕಡೆ ನೋಡಿದ್ದೇವೆ ದಲಿತರಿಗೆ ಸ್ಮಶಾನಗಳಿಲ್ಲದೆ ಗಲಾಟೆಗಳಾಗಿರುವುದನ್ನ ನಮ್ಮ ತಾಲ್ಲೋಕಿನಲ್ಲಿ ಇಂತಹ ಸಮಾಜ ತಲೆತಗ್ಗಿಸುವ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಸಾವಿರಾರು ಜನರ ಬಗರು ಹುಕುಂ ಅರ್ಜಿಗಳು ವಿಲೇವಾರಿಯಾಗದೆ ಉಳಿದಿದ್ದು ಕೂಡಲೇ ಸರ್ಕಾರದ ನಿರ್ದೇಶನದಂತೆ ಬಗರ್ ಹುಕ್ಕುಂ ಕಮಿಟಿ ರಚಿಸಿ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಣೆ ಮಾಡುವುದಿಲ್ಲ ಮಾಡಲಾಗುವುದು. ತಾಲೂಕಿನ ಚೌಡಾಪುರ ಹಾಗೂ ಹಾಲ್ಕುರ್ಕೆಯಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ಕಾನೂನು ಸಮಸ್ಯೆ ಉಂಟಾಗಿ ಸಾಗುವಳಿದಾರರಿಗೆ ತೊಂದರೆಯಾಗಿರುವ ಬಗ್ಗೆ ದೂರುಗಳಿದ್ದು ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೆ ನಡೆಸಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ, ಎಂದು ತಿಳಿಸಿದರು
ಯಾವುದೇ ಕಾರಣಕ್ಕೂ ಕುಡಿಯುವ ನೀರು ರಸ್ತೆ ಬೀದಿ ದೀಪ ಸೇರಿದಂತೆ ಮೂಲಸೌಕರ್ಯಗಳಿಗೆ ಕೊರತೆಯಾಗದಂತೆ ಕ್ರಮವಹಿಸಿ ಎಂದು ತಿಳಿಸಿದರು.ಸಭೆಯಲ್ಲಿ ಚೌಡ್ಲಾಪುರ ಹಾಗೂ ಹಾಲ್ಕುರಿಕೆಯಲ್ಲಿ ಸರ್ಕಾರದ ಸಾಗುವಳಿಚೀಟಿ ಪಡೆದು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನ ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಹೊರಟಿರುವುದು ಖಂಡನೀಯ ಎಂದು ದಲಿತಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ನಾಗತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ ತಾಲೂಕಿನಲ್ಲಿ ಹಾದು ಹೋಗಿರುವ ಎತ್ತಿನ ಹೊಳೆ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿಯೋಜನೆಗೆ ಹಲವಾರುಗ್ರಾಮಗಳಲ್ಲಿ ದಲಿತರ ಭೂಮಿಯನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ, ಈ ಬಗ್ಗೆ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೆ ಉಡಾಫೆಯಾಗಿ ವರ್ತಿಸುತ್ತಿದ್ದಾರೆ,ದಲಿತರ ಜೀವನಾಧಾರವಾಗಿರುವ ಭೂಮಿಯನ್ನು ಕಳೆದುಕೊಂಡು ಸೂಕ್ತ ಪರಿಹಾರವೂ ದೊರೆಯದೆ ರೈತರು ಕಂಗಾಲಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸಲು ಒತ್ತಾಯಿಸಲಾಯಿತು.
ದಲಿತ ಮುಖಂಡ ಬಜಗೂರು ಮಂಜುನಾಥ್ ಮಾತನಾಡಿ ಕಂದಾಯ ಇಲಾಖೆಯ ಅಧಿಕಾರಿಗಳು ತಾಲೂಕಿನ ಹಲವಾರು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಕಾಯ್ದಿರಿಸಿರುವ ಬಗ್ಗೆ ವರದಿ ನೀಡುತ್ತಿರುವುದು ಸುಳ್ಳು ವರದಿಯಾಗಿದೆ, ಸರ್ಕಾರಿ ದಾಖಲೆಯಲ್ಲಿ ಮಾತ್ರ ಸ್ಮಶಾನಗಳಿದ್ದು ಬಹುತೇಕ ಸ್ಮಶಾನಗಳು ಒತ್ತುವರಿಯಾಗಿವೆ ಕೂಡಲೇ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಇಲಾಖೆ ಜಂಟಿಯಾಗಿ ಸರ್ವೇ ಮಾಡಿ ಗ್ರಾಮ ಪಂಚಾಯಿತಿಗೆ ಸ್ಮಶಾನಗಳನ್ನ ಹಸ್ತಾಂತರಿಸಬೇಕು, ಗ್ರಾಮ ಪಂಚಾಯಿತಿಗಳು ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಕೊಪ್ಪ ಶಾಂತಪ್ಪ ಮಾತನಾಡಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಮೀಸಲು ಹಣ 22.75% ಹಣ ದುರುಪಯೋಗವಾಗಿದ್ದು ಕೂಡಲೇ ತನಿಖೆ ನಡೆಸಿ ಹಣ ಸದ್ಬಳಕೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಪವನ್ ಕುಮಾರ್ ಇಓ ಸುದರ್ಶನ್. ದಲಿತ ಮುಖಂಡರಾದ ಗಾಂಧಿನಗರ ಬಸವರಾಜು. ಕುಪ್ಪಾಳ ರಂಗಸ್ವಾಮಿ, ಯಗಚಿಕಟ್ಟೆ ರಾಘವೇಂದ್ರ, ವೆಂಕಟೇಶ್, ಪೆದ್ದಿಹಳ್ಳಿ ನರಸಿಂಹಯ್ಯ,ಲಾಯರ್ ವೆಂಕಟೇಶ್, ವಾಲ್ಮೀಕಿ ಸಂಘದ ಮುಖಂಡ ಜಯಸಿಂಹ, ಸಿದ್ದಯ್ಯ, ಚಂದ್ರಶೇಖರ್ ಜಗದಾರ್ಯ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

About Mallikarjun

Check Also

ಹನೂರು ವಿದಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಮತಗಟ್ಟೆ ಧ್ವಂಸ

ವರದಿ : ಬಂಗಾರಪ್ಪ ಸಿ .ಹನೂರು : ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.