Breaking News

ತಾಲೂಕಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ನ ನಾಲ್ಕು ವಿಭಾಗಗಳಲ್ಲಿ ಲಿಟಲ್ ಹಾರ್ಟ್ಸ್ ಸ್ಕೂಲ್ ಮೂರರಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಲಗ್ಗೆ

Little Hearts School secured first place in three of the four categories of taluka level ball badminton and advanced to the district level.

Screenshot 2025 08 06 14 47 05 98 6012fa4d4ddec268fc5c7112cbb265e78876493216774771236 1024x616

  ಗಂಗಾವತಿ:  ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತ ಲಿಟಲ್ ಹಾರ್ಟ್ಸ್ ಸ್ಕೂಲ್ ನಲ್ಲಿ ಆಯೋಜಿಸಲಾಗಿದ್ದ 14 ವರ್ಷದ ಒಳಗಿನ ಹಾಗೂ 17 ವರ್ಷದ ಒಳಗಿನ ಬಾಲಕರ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ನಮ್ಮ ಲಿಟಲ್ ಹಾರ್ಟ್ಸ್ ಸ್ಕೂಲ್ ನ 14 ವರ್ಷದ ಒಳಗಿನ ಬಾಲಕರ ಹಾಗೂ ಬಾಲಕಿಯರ ತಂಡಗಳು ಮತ್ತು 17 ವರ್ಷದ ಒಳಗಿನ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಲಗೈಯಿಟ್ಟರು. 17 ವರ್ಷದ ಬಾಲಕರ ತಂಡವೂ ಸಹ ದ್ವಿತೀಯ ಸ್ಥಾನ ಪಡೆದರು ಎಂದು ತಿಳಿಸಲು ಹೆಮ್ಮೆ ಎನಿಸುತ್ತಿದೆ.

ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಅವರಿಗೆ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಸೋಮಪ್ಪ ಹಾಗೂ ಶ್ರೀ ಛತ್ರಪ್ಪ ಅವರಿಗೆ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರಿಯಾಕುಮಾರಿ ಹಾಗೂ ಎಲ್ಲಾ ಶಿಕ್ಷಕ/ ಕಿಯರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

ಈ ಸಂಧರ್ಭ ದಲ್ಲಿ ದೈಹಿಕ ಶಿಕ್ಷಕ ರುಗಳಾದ ಶ್ರೀ ವೆಂಕಪ್ಪ ತಳವಾರ, ಶ್ರೀ ವೀರಕುಮಾರ ಶ್ರೀ ನಾಗರಾಜ ಶ್ರೀ ಫಕ್ರುದ್ದಿನ್ ನದಾಫ್ ಶ್ರೀಮತಿ ಸರಸ್ವತಿ ಉಪಸ್ಥಿತರಿದ್ದರು.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.