

Do not share OTP or bank account details with strangers: Bhimesha Tondihala

ಒಟಿಪಿ, ಬ್ಯಾಂಕ್ ಖಾತೆ ವಿವರಗಳನ್ನು ಅಪರಿಚಿತರಿಗೆ ನೀಡಬೇಡಿ: ಭೀಮೇಶ ತೊಂಡಿಹಾಳ
ಸೈಬರ್ ವಂಚನೆ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಲು ಮನವಿ
ಗಂಗಾವತಿ, ನ. 29: ಎಟಿಎಂ ಶುಲ್ಕ ಕಡಿತ, ಬ್ಯಾಂಕ್ ಖಾತೆ ಪರಿಶೀಲನೆ ಹಾಗೂ ಬ್ಯಾಂಕ್ನ ವಿವಿಧ ಸೇವೆಗಳ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿ ಒಟಿಪಿ (OTP) ಕೇಳುವ ಮೂಲಕ ಸೈಬರ್ ವಂಚನೆ ನಡೆಸುವ ಸಾಧ್ಯತೆಗಳಿವೆ. ಆದ್ದರಿಂದ ಸಾರ್ವಜನಿಕರು ಇಂತಹ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಭೀಮೇಶ ತೊಂಡಿಹಾಳ ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಸೈಬರ್ ಪೊಲೀಸ್ ವಿಭಾಗದಿಂದ ಸಾರ್ವಜನಿಕರಲ್ಲಿ ಸೈಬರ್ ವಂಚನೆಗಳ ಕುರಿತು ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಬ್ಯಾಂಕ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಕರೆ ಮಾಡುವ ಅಪರಿಚಿತ ವ್ಯಕ್ತಿಗಳು ಗ್ರಾಹಕರನ್ನು ನಂಬಿಸಿ ಅವರ ಬ್ಯಾಂಕ್ ಖಾತೆಯ ಗೌಪ್ಯ ಮಾಹಿತಿಯನ್ನು ಪಡೆದು ವಂಚಿಸುವ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಬ್ಯಾಂಕ್ ಖಾತೆಯ ವಿವರಗಳು, ಎಟಿಎಂ ಕಾರ್ಡ್ ಮಾಹಿತಿ, ಪಿನ್ ಸಂಖ್ಯೆ ಹಾಗೂ ಒಟಿಪಿಯನ್ನು ಅಪರಿಚಿತರಿಗೆ ನೀಡಬಾರದು ಎಂದು ಅವರು ತಿಳಿಸಿದ್ದಾರೆ.
ಬ್ಯಾಂಕ್ನಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡು ಯಾರಾದರೂ ದೂರವಾಣಿ ಮೂಲಕ ಒಟಿಪಿ ಅಥವಾ ಪಿನ್ ಸಂಖ್ಯೆ ಕೇಳಿದರೆ ಮಾಹಿತಿ ನೀಡಬಾರದು. ಬ್ಯಾಂಕ್ಗಳ ಹೆಸರಿನಲ್ಲಿ ನಕಲಿ ಆ್ಯಪ್ಗಳನ್ನು ಸೃಷ್ಟಿಸಿ, ನಕಲಿ ಸಂದೇಶಗಳು ಹಾಗೂ ಲಿಂಕ್ಗಳನ್ನು ಕಳುಹಿಸುವ ಮೂಲಕ ಜನರನ್ನು ವಂಚಿಸುವ ಸಾಧ್ಯತೆಗಳಿವೆ. ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡುವುದು ಹಾಗೂ ನಕಲಿ ಆ್ಯಪ್ಗಳನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವುದರಿಂದ ಬ್ಯಾಂಕ್ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ ಯಾವುದೇ ಸಂದೇಶ ಅಥವಾ ಲಿಂಕ್ನ ವಿಶ್ವಾಸಾರ್ಹತೆಯನ್ನು ಪರಿಶೀಲಿಸದೆ ಬಳಸಬಾರದು ಎಂದು ಸಲಹೆ ನೀಡಿದ್ದಾರೆ.
ಬ್ಯಾಂಕ್ ಸಾಲದ ಹೆಸರಿನಲ್ಲಿ ಬ್ರೋಕರ್ಗಳ ವಂಚನೆ ಬಗ್ಗೆ ಎಚ್ಚರಿಕೆ
ಕೆಲವು ಅಪರಿಚಿತ ವ್ಯಕ್ತಿಗಳು ತಾವು ಬ್ಯಾಂಕ್ನ ಬ್ರೋಕರ್ಗಳೆಂದು ಪರಿಚಯಿಸಿಕೊಂಡು, ಬ್ಯಾಂಕ್ನಿಂದ ಸಾಲ ಮಾಡಿಸಿಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆಯುವ ಸಾಧ್ಯತೆಗಳಿವೆ. ಇಂತಹ ವ್ಯಕ್ತಿಗಳನ್ನು ನಂಬಿ ಯಾವುದೇ ದಾಖಲೆಗಳು, ಬ್ಯಾಂಕ್ ಖಾತೆಯ ವಿವರಗಳು ಅಥವಾ ಗೌಪ್ಯ ಮಾಹಿತಿಯನ್ನು ನೀಡಬಾರದು.
ಸಾಲ ಮಾಡಿಸಿಕೊಡುವುದಾಗಿ ಯಾರಾದರೂ ಸಂಪರ್ಕಿಸಿದರೆ ಅವರನ್ನು ನಂಬದೆ, ಖುದ್ದಾಗಿ ಸಂಬಂಧಪಟ್ಟ ಬ್ಯಾಂಕ್ಗೆ ಭೇಟಿ ನೀಡಿ ವ್ಯವಸ್ಥಾಪಕರನ್ನು ಸಂಪರ್ಕಿಸಿ ಸಾಲದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಬ್ಯಾಂಕ್ನ ಅಧಿಕೃತ ಪ್ರಕ್ರಿಯೆಗಳ ಮೂಲಕವೇ ಸಾಲದ ಅರ್ಜಿ ಸಲ್ಲಿಸುವುದು ಸುರಕ್ಷಿತ ಎಂದು ಭೀಮೇಶ ತೊಂಡಿಹಾಳ ತಿಳಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಒಟಿಪಿ, ಪಿನ್ ಕೇಳುವುದಿಲ್ಲ
ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಅನುಮಾನ ಅಥವಾ ಮಾಹಿತಿ ಬೇಕಿದ್ದಲ್ಲಿ ಅಪರಿಚಿತ ಕರೆಗಳನ್ನು ನಂಬದೆ, ನೇರವಾಗಿ ಸಂಬಂಧಪಟ್ಟ ಬ್ಯಾಂಕ್ಗೆ ಭೇಟಿ ನೀಡಿ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕು. ಬ್ಯಾಂಕ್ ಸಿಬ್ಬಂದಿಯೂ ದೂರವಾಣಿ ಮೂಲಕ ಗ್ರಾಹಕರ ಒಟಿಪಿ ಅಥವಾ ಪಿನ್ ಸಂಖ್ಯೆಯನ್ನು ಕೇಳುವುದಿಲ್ಲ ಎಂಬುದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು.
ಸಾರ್ವಜನಿಕರು ಸೈಬರ್ ವಂಚನೆಗಳ ಬಗ್ಗೆ ನಿರಂತರ ಜಾಗೃತಿ ಹೊಂದಿರಬೇಕು. ಅಪರಿಚಿತ ಕರೆಗಳು, ಸಂದೇಶಗಳು ಹಾಗೂ ನಕಲಿ ಆ್ಯಪ್ಗಳ ಬಗ್ಗೆ ಎಚ್ಚರಿಕೆ ವಹಿಸುವ ಮೂಲಕ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು.
ಒಂದು ವೇಳೆ ಸೈಬರ್ ವಂಚನೆಗೆ ಒಳಗಾದಲ್ಲಿ ವಿಳಂಬ ಮಾಡದೆ ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ಭೀಮೇಶ ತೊಂಡಿಹಾಳ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


