ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ಭಾಗದ ಖಾಸಗಿ ಶಾಲಾ, ಕಾಲೇಜುಗಳಲ್ಲಿ ನಡೆಯುತ್ತಿರುವಅಕ್ರಮ ಡೊನೇಷನ್ ದಂಧೆ ತಡೆಗಟ್ಟಲು ಆಗ್ರಹ: ಉಡುಚಪ್ಪ ಶ್ರೀರಾಮನಗರ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Demand to stop illegal donation racket going on in private schools and colleges in Gangavathi, Karatagi and Kanakagiri areas: Uduchappa Sriramanagara

ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ಭಾಗದ ಖಾಸಗಿ ಶಾಲಾ, ಕಾಲೇಜುಗಳಲ್ಲಿ ನಡೆಯುತ್ತಿರುವ
ಅಕ್ರಮ ಡೊನೇಷನ್ ದಂಧೆ ತಡೆಗಟ್ಟಲು ಆಗ್ರಹ: ಉಡುಚಪ್ಪ ಶ್ರೀರಾಮನಗರ

ಜಾಹೀರಾತು

ಗಂಗಾವತಿ: ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಖಾಸಗಿ ಶಾಲಾ ಕಾಲೇಜುಗಳು ಶಿಕ್ಷಣದ ಹೆಸರಿನಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಅಕ್ರಮವಾಗಿ ಭಾರೀ ಪ್ರಮಾಣದ ಡೊನೇಷನ್ ಮತ್ತು ವಿವಿಧ ರೀತಿಯ ಶುಲ್ಕಗಳನ್ನು ವಸೂಲಾತಿ ಮಾಡುವ ದಂಧೆಗಿಳಿದಿವೆ ಎಂದು ದಲಿತ ಸೇನೆ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಉಡುಚಪ್ಪ ಶ್ರೀರಾಮನಗರ ಕಿಡಿಕಾರಿದರು.
ಅವರು ಈ ಮೂರು ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಖಾಸಗಿ ಶಾಲಾ, ಕಾಲೇಜುಗಳ ಶುಲ್ಕ ವಸೂಲಾತಿ ದಂಧೆಯನ್ನು ತಡೆಗಟ್ಟಲು ಆಗ್ರಹಿಸಿ ಇಂದು ಜೂನ್‌-22 ರಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಜ್ಞಾನ ನೀಡುವ ಪವಿತ್ರ ಕೇಂದ್ರಗಳಾಗಬೇಕು. ಆದರೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರಿಕ ಸರಕಾಗಿ ಪರಿವರ್ತಿಸಿ ಸಾರ್ವಜನಿಕರ ಆರ್ಥಿಕ ಶೋಷಣೆಯಲ್ಲಿ ತೊಡಗಿರುವುದು ಅತ್ಯಂತ ಖಂಡನೀಯ ಮತ್ತು ಆತಂಕಕಾರಿ ಸಂಗತಿಯಾಗಿದೆ. ಪ್ರವೇಶಾತಿ ಸಮಯದಲ್ಲಿ ಲಕ್ಷಾಂತರ ರೂಪಾಯಿಗಳ ಡೊನೇಷನ್ ಪಡೆಯುವುದು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮನಬಂದಂತೆ ಶುಲ್ಕ ನಿಗದಿಪಡಿಸುವುದು ಹಾಗೂ ಶುಲ್ಕದ ವಿವರಗಳನ್ನು ಸಾರ್ವಜನಿಕರಿಗೆ ಮುಚ್ಚಿಡುವುದು ಕಾನೂನುಬಾಹಿರ ಕೃತ್ಯವಾಗಿದೆ. ಇದು ಶಿಕ್ಷಣ ಕ್ಷೇತ್ರದ ಪಾರದರ್ಶಕತೆಗೆ ಧಕ್ಕೆ ಉಂಟುಮಾಡುತ್ತಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಅಡ್ಮಿಷನ್ ಫೀಸ್, ಬಿಲ್ಡಿಂಗ್ ಫಂಡ್, ಡೆವಲಪ್ ಮೆಂಟ್ ಫೀಸ್, ಲ್ಯಾಬ್ ಫೀಸ್, ಟ್ರಾನ್ಸ್‌ಪೋರ್ಟ್ ಫೀಸ್, ಪುಸ್ತಕ, ಸಮವಸ್ತ್ರ, ಚಟುವಟಿಕೆ ಶುಲ್ಕ ಹಾಗೂ ಇತರೆ ಅನಧಿಕೃತ ಶುಲ್ಕಗಳ ಹೆಸರಿನಲ್ಲಿ ಪೋಷಕರಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿವೆ. ಇಂತಹ ಕ್ರಮಗಳು ಬಡ, ಮಧ್ಯಮ ವರ್ಗ ಹಾಗೂ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕಿನ ಮೇಲೆ ನೇರ ಪರಿಣಾಮ ಬೀರುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಖಾಸಗಿ ಶಾಲಾ-ಕಾಲೇಜುಗಳಿಗೆ ಖುದ್ದಾಗಿ ಭೇಟಿ ನೀಡಿ ಡೊನೇಷನ್ ನಾಮ ಫಲಕವನ್ನು ಅಳವಡಿಸುವಂತೆ ಆದೇಶಿಸಬೇಕು, ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಮಾಹಿತಿ ಹಕ್ಕು ಕಾಯ್ದೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL), ಮಾನವ ಹಕ್ಕು ಆಯೋಗ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಹೋರಾಟ ನಡೆಸಲು ನಮ್ಮ ದಲಿತ ಸೇನೆ ಬದ್ಧವಾಗಿದೆ. ಶಿಕ್ಷಣವು ಸೇವೆಯಾಗಬೇಕೇ ಹೊರತು, ವ್ಯಾಪಾರವಾಗಬಾರದು. ವಿದ್ಯಾರ್ಥಿಗಳ ಭವಿಷ್ಯವನ್ನು ಹಣದ ದಾಹಕ್ಕೆ ಬಲಿಯಾಗಲು ಅವಕಾಶ ನೀಡಬಾರದು. ಈ ಕುರಿತು ಶಿಕ್ಷಣ ಇಲಾಖೆ ತಕ್ಷಣ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಹಾಗೂ ಮಾದರಿ ಕ್ರಮ ಕೈಗೊಳ್ಳುವಂತೆ ದಲಿತ ಸೇನೆ ಒತ್ತಾಯಿಸಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಸೇನೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಶಿವಕುಮಾರ ಡಿ., ಹನುಮಂತ ನಾಯಕ, ಗಂಗಾವತಿ ನಗರ ಘಟಕ ಅಧ್ಯಕ್ಷ ವಿರುಪಣ್ಣ ಸಂಗಾಪುರ, ಗ್ರಾಮ ಘಟಕ ಅಧ್ಯಕ್ಷ ದುರುಗಪ್ಪ, ಗಂಗಾವತಿ ತಾಲೂಕ ಅಧ್ಯಕ್ಷ ಮಂಜುನಾಥ ಜಿ., ಪದಾಧಿಕಾರಿಗಳಾದ ಪರಶುರಾಮ, ಶಿವ, ಜಗದೀಶ್, ಯಮನೂರ್, ವಿಜಯ್, ಗಣೇಶ್, ಹನುಮಂತ, ಹುಸೇನಿ, ಈರಪ್ಪ ಸೇರಿದಂತೆ ಮತ್ತಿತರರು ಭಾ

Total Views: 0
Share This Article