ನೋಂದಾಯಿತ ಕ್ರೀಡಾ ಸಂಘ ಸಂಸ್ಥೆಗಳ ನವೀಕರಣಕ್ಕೆ ಸೂಚನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Notice for renewal of registered sports associations




ನೋಂದಾಯಿತ ಕ್ರೀಡಾ ಸಂಘ ಸಂಸ್ಥೆಗಳ ನವೀಕರಣಕ್ಕೆ ಸೂಚನೆ

ಜಾಹೀರಾತು


ಕೊಪ್ಪಳ ಜೂನ್ 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ನೋಂದಾಯಿತ ಕ್ರೀಡಾ ಸಂಘ ಸಂಸ್ಥೆಗಳು ನವೀಕರಣ ಮಾಡಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ್ ಅವರು ತಿಳಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳು ಹಾಗೂ ಕ್ರೀಡಾ ಸಾಮಾಗ್ರಿಗಳ ಸೌಲಭ್ಯಗಳಿಗೆ ಸಂಬಂಧಿಸಿದಂತೆ 2011-12ನೇ ಸಾಲಿನಿಂದ ಪ್ರಸಕ್ತ ಸಾಲಿನವರೆಗೆ ಜಿಲ್ಲಾ ಹಾಗೂ ತಾಲೂಕುಗಳಲ್ಲಿರುವ ವಿವಿಧ ಕ್ರೀಡಾ ಸಂಸ್ಥೆಗಳು ನೋಂದಣಿ ಪ್ರಮಾಣ ಪತ್ರವನ್ನು ಪಡೆಯಲಾಗಿರುತ್ತದೆ. ಆದರೆ, ಈ ಕ್ರೀಡಾ ಸಂಸ್ಥೆಗಳು ಮಾನ್ಯತೆ ಪ್ರಮಾಣ ಪತ್ರ ತೆಗೆದುಕೊಂಡ ನಂತರ ಹಲವು ವರ್ಷಗಳ ಕಾಲ ಇಲಾಖೆಯಲ್ಲಿ ನವೀಕರಣಗೊಂಡಿರುವುದಿಲ್ಲ. ನೋಂದಾಯಿತ ಕ್ರೀಡಾ ಸಂಸ್ಥೆಗಳು ನಿಯಮಿತವಾಗಿ ನಿಗಧಿತ ಅವಧಿಯೊಳಗೆ ನವೀಕರಣ ಮಾಡಿಕೊಳ್ಳದಿದ್ದರೆ, ಕ್ರೀಡಾ ಇಲಾಖೆಯಿಂದ ಚಟುವಟಿಕೆಗಳಿಗೆ ಸಿಗುವಂತಹ ಸೌಲಭ್ಯಗಳನ್ನು ರದ್ದುಗೊಳಿಸಲಾಗುವುದು ಹಾಗೂ ಇದರಿಂದ ಕ್ರೀಡಾಕೂಟಗಳನ್ನು ಆಯೋಜಿಸಲು ಅಥವಾ ಕ್ರೀಡಾ ಸಾಮಾಗ್ರಿಗಳನ್ನು ಖರಿದೀಸಲು ಈ ಸಂಸ್ಥೆಯು ಅಸಿಂಧು ಎಂದು ಪರಿಗಣನೆಗೆ ತೆಗೆದುಕೊಂಡು, ಕ್ರೀಡಾ ಸಂಸ್ಥೆಗೆ ಯಾವುದೇ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಆದ್ದರಿಂದ ಕ್ರೀಡಾ ಇಲಾಖೆಯಲ್ಲಿ ನೋಂದಾಯಿತ ಕ್ರೀಡಾ ಸಂಸ್ಥೆಗಳು ನವೀಕರಣಕ್ಕಾಗಿ “ಸೇವಾಸಿಂಧು” ಪೋರ್ಟಲ್ ಮುಖಾಂತರ ನವೀಕರಣವನ್ನು ಮಾಡಿ, ನವೀಕರಣಗೊಂಡ ಪ್ರತಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೊಪ್ಪಳ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಜಿಲ್ಲಾ ಕ್ರೀಡಾಂಗಣ, ಗದಗ ರಸ್ತೆ, ಕೊಪ್ಪಳ-583231, ದೂರವಾಣಿ ಸಂಖ್ಯೆ: 08539-230121ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  

Total Views: 0
Share This Article