Breaking News

ಬಸವಪ್ರಣೀತಲಿಂಗಾಯತ : ಸಿದ್ದರಾಮಯ್ಯ

Basava praneetha lingayat : Siddaramaiah

ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಮುಖ್ಯ ಮಂತ್ರಿಯಾಗಿರುವ ಕಾರಣಕ್ಕೆ ಹೊಗಳುವ ಉಮೇದು ನನ್ನದಲ್ಲ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಭೋದಿಸಿ ಬದುಕಿದ ತತ್ವಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡವರು. ಶರಣರ ವೈಚಾರಿಕ ನಿಲುವು ಸಹ ಅವರಲ್ಲಿದೆ. ಇದು ಹಲವಾರು ಪ್ರಸಂಗಗಳಲ್ಲಿ ನನಗೆ ಕಂಡು ಬಂದಿದೆ.

ಜನ್ಮಥ ಲಿಂಗಾಯತರಾಗಿರುವ ಬಹುತೇಕ ರಾಜಕಾರಣಿಗಳಲ್ಲಿ ಇಲ್ಲದ ಬಸವ ಪ್ರೇಮ, ಹರಿತ ವಿಚಾರ ಸಿದ್ಧರಾಮಯ್ಯನವರಲ್ಲಿ ಖಂಡಿತ ಇದೆ. ಅದನ್ನು ಎಷ್ಟು ಸಾಧ್ಯವೋ ಅಷ್ಟನ್ನು ಬದುಕಲು ಯತ್ನಿಸುತ್ತಿದ್ದಾರೆ. ರಾಜಕಾರಣಿಗಳೆಂದರೆ ಬದ್ಧತೆ ಇಲ್ಲದವರು ಎಂಬ ಕಾಲಮಾನದಲ್ಲಿ ಕನಿಷ್ಠ ಅರಿವು ಇಟ್ಟುಕೊಂಡು ಶರಣರ ಚಿಂತನೆಗಳನ್ನು ಸಮಾಜಕ್ಕೆ ಆಗಾಗ ಹರಿ ಬಿಡುತ್ತಲೇ ಇರಿತ್ತಾರೆ.

ಆದರೆ ಅವರ ನಡೆ ಮತ್ತು ಮಾತುಗಳು ಪಿಂಜರಾಪೋಲು ಪತ್ರಕರ್ತರಿಗೆ ನುಂಗಲಾಗದ ತುತ್ತಾಗುತ್ತದೆ. ಸುಖಾ ಸುಮ್ಮನೆ ಅವರ ಮಾತನ್ನು ತಿರುಚಿ ವಿವಾದಾತ್ಮಕ ಮಾತೆಂದು ದೃಶ್ಯ ಮಾಧ್ಯಮಗಳು ಹೇಳುತ್ತವೆ. ಆದರೆ ಕರ್ನಾಟಕದ ಬಸವ ಪ್ರೇಮಿಗಳು ಕಿವಿಯಲ್ಲಿ ಹೂ ಇಟ್ಟುಕೊಂಡಿಲ್ಲ. ಆದ್ದರಿಂದಲ ಬಸವ ಪ್ರಣೀತ ಲಿಂಗಾಯತರು ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದ್ದಾರೆ. ರಾಜ್ಯದ ಹಿತ ಬಯಸುವ ಬರಹಗಾರ, ಸಾಹಿತಿಗಳೂ ಸಹ ಸಿದ್ಧರಾಮಯ್ಯನವರ ಜೊತೆಗೆ ಇದ್ದಾರೆ.

ಮೂಲತಃ ಲಿಂಗಾಯತ ,ಜಾತಿ ಸಂಕರಗೊಂಡ ಧರ್ಮ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಸಕಲ ಜೀವ ಪ್ರೇಮವನ್ನು ಅರಿತು ಜೊತೆಗೂಡಿದವರು. ಆದರೆ ಈ ಧರ್ಮ ಬರ ಬರುತ್ತ ಸ್ಥಾವರವಾಗುತ್ತ ಬಂತು. ಇದಕ್ಕೆ ಹಲವಾರು ಐತಿಹಾಸಿಕ ಸಾಮಾಜಿಕ ಕಾರಣಗಳಿವೆ ಆ ಮಾತು ಬೇರೆ.

ವಿಷಮ ಸ್ಥಿತಿಯ ಇಂದಿನ ದಿನ ಮಾನಗಳಲ್ಲಿ ಬಸವಣ್ಣನವರ ಅಸಲಿ ಭಕ್ತಿ ಜನತೆಗೆ ತೋರಿಸಬೇಕಿದೆ. ಅವರ ಕಾಯಕ ಮತ್ತು ದಾಸೋಹ ತತ್ವ ಸಮಾಜಕ್ಕೆ ಪರಿಚಯಿಸಬೇಕಿದೆ. ಗೊಡ್ಡು ಸಂಪ್ರದಾಯದ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವವರನ್ನು ಮೇಲೆತ್ತಬೇಕಿದೆ. ಹೆಣ್ಣು ಗಂಡಿನ ನಡುವಿನ ಅಸಮಾನತೆಯನ್ನು ತೆಗೆದು ಹಾಕಬೇಕಿದೆ. ಜಾತಿಯ ಕಾರಣಕ್ಕಾಗಿ ಮೇಲು ಕೀಳು ಎಂಬ ಭಾವ ಸಮಾಜದಲ್ಲಿ ತೊನೆದಾಡುತ್ತಿದೆ. ಅದನ್ನು ಬಸವಣ್ಣನವರ ವಚನ ಚಿಂತನೆಯನ್ನು ಪಸರಿಸುವ ಮೂಲಕ ಸರಿಪಡಿಸಬೇಕಿದೆ.ಸ್ಥಾವರ ಗುಡಿಗಳಿಗಿಂತ ನಡೆದಾಡುವ ಗುಡಿಯನ್ನು ಕಟ್ಟಬೇಕಿದೆ. ಸ್ಥಾವರ ದೇವರ ಮುಂದೆ ಗಂಟೆ ಬಾರಿಸಿ, ಸರ್ಕಸ್ ಮಾಡುವ ಬದಲು ಎದೆಯ ದನಿಗೆ ಕಿವಿಗೊಡಬೇಕಿದೆ. ಡಾ.ಬಿ.ಆರ್. ಅಂಬೇಡ್ಕರ ಸೃಜಿಸಿದ ಸಂವಿಧಾನದ ಆಶಯಗಳು ಗೆಲ್ಲಬೇಕಿದೆ. ಮನುವಾದ ,ಪಟ್ಟಭದ್ರರು ಸೋಲಬೇಕಿದೆ.

ಇದನ್ನೆಲ್ಲ ಅರಿತಿರುವ ಸಿದ್ಧರಾಮಯ್ಯ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಾರೆ. ಈ ಘೋಷಣೆಯ ಒತ್ತಾಸೆಯಾಗಿ ಬಹಳಷ್ಟು ಜನ ಪ್ರಜ್ಞಾವಂತ ಬಳಗ ಇದೆ. ತೀರಾ ಇತ್ತೀಚೆಗೆ ಡಾ.ಬಸವಲಿಂಗ ಪಟ್ಟದ್ದೇವರು, ಸಾಣೆಹಳ್ಳಿಯ ಪೂಜ್ಯ ಶ್ರೀ.ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಬಸವ ಬಳಗ, ಪ್ರಗತಿಪರ ಬರಹಗಾರರ ಒತ್ತಾಯಿಸಿದ್ದರು.

ಮುಖ್ಯ ಮಂತ್ರಿಗಳನ್ನು ಕಲ್ಯಾಣದ ನೆಲದಲ್ಲಿ ಅಭಿನಂದಿಸಬೇಕೆಂದು ಇಂದು ಕರ್ನಾಟಕ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು, ಸಾಣೆಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಬೈಲೂರಿನ ನಿಜಗುಣ ಸ್ವಾಮೀಜಿಗಳು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿದ್ದಾರೆ. ಬಹುಶಃ ಮುಂದಿನ ತಿಂಗಳು ಮುಖ್ಯ ಮಂತ್ರಿಗಳನ್ನು ಅಭಿನಂದಿಸುವ ಕಾರ್ಯವೂ ಬಸವ ಕಲ್ಯಾಣದಲ್ಲಿ ಜರುಗಲಿದೆ. ಜೊತೆಗೆ ಅಂದೆ ಮುಖ್ಯ ಮಂತ್ರಿಗಳು ವಚನ ವಿಶ್ವವಿದ್ಯಾಲಯವನ್ನು ಘೋಷಿಸುವ ಸಾಧ್ಯತೆ ಇದೆ. ವಚನಗಳ ಆಶಯದ ತುಡಿತಹೊಂದಿರುವ ಮುಖ್ಯ ಮಂತ್ರಿಗಳಿಗೆ ಗೌರವದ ಶರಣಾರ್ಥಿಗಳು.

ವಿಶ್ವಾರಾಧ್ಯ ಸತ್ಯಂಪೇಟೆ

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.