Breaking News

ವಚನಗಳುಸರ್ವಕಾಲಕ್ಕೂ ಮಾರ್ಗದರ್ಶನ ನೀಡಿವೆ- ಡಾ, ಶರಣಬಸಪ್ಪ ಕೊಲ್ಕಾರ್ ಅಭಿಮತ.

Vachanas have always guided us – Dr. Sharanbasappa Kolkar Abhimata.

ಗಂಗಾವತಿ, ೨೮:ಇತ್ತೀಚಿಗೆ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ಕರೋನಾ ಮಹಾಮಾರಿ ಅಂತಹ ಸಂದರ್ಭದಲ್ಲಿ ನಮಗೆ ಮಾರ್ಗದರ್ಶನ ನೀಡಿದ ಪುಸ್ತಕಗಳು ಎಂದರೆ ವಚನ ಪುಸ್ತಕಗಳು.
ಇವುಗಳು ನಮ್ಮ ಬದುಕು ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದರ ಬಗ್ಗೆ ಉನ್ನತವಾಗಿರುವ ಜೀವನವನ್ನು ಸಾಗಿಸಲು , ಮಹತ್ತರವಾದ ಚಿಂತನೆಯನ್ನು ಹೊಂದಲು ನಮಗೆ ಈಗಿನ ಕಾಲಕ್ಕೂ ಹಿಂದಿನ ಕಾಲಕ್ಕೂ ಮುಂದಿನ ಕಾಲಕ್ಕೂ ಮಾರ್ಗದರ್ಶನ ನೀಡುತ್ತವೆ. ಹಾಗಾಗಿ ವಚನಗಳು ಸರ್ವಕಾಲಕ್ಕೂ ಮಾರ್ಗ ದರ್ಶನವನ್ನು ನೀಡುತ್ತಲೇ ಇವೆ .
ಈ ನಿಟ್ಟಿನಲ್ಲಿ ವಚನಗಳ ವಿಸ್ತೃತ ವಿವರಣೆಗೆ ಶ್ರೀಮತಿ ರುದ್ರಮ್ಮ ಹಾಸಿನಾಳ ರವರ ಪ್ರಯತ್ನ ಅವಿಸ್ಮರಣೀಯವಾಗಿದೆ ಎಂದು ಪುಸ್ತಕಗಳ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಡಾ. ಶರಣಬಸಪ್ಪ ಕೊಲ್ಕರ್ ಅವರು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು .

ಇಂದು ಕನ್ನಡ ಸಾಹಿತ್ಯ ಪರಿಷತ್ತು ಗಂಗಾವತಿ ಶ್ರೀಮತಿ ರುದ್ರಮ್ಮ ಹಾಸಿನಾಳ ರವರ ಮನೆಯಲ್ಲಿ ಹಮ್ಮಿಕೊಂಡ ಶ್ರೀಮತಿ ರುದ್ರಮ್ಮ ಹಾಸಿನಾಳರವರ ಪುಸ್ತಕ ಬಿಡುಗಡೆ ಸಮಾರಂಭದ ಬಿಡುಗಡೆಯನ್ನು ಶರಣೆ ಶ್ರೀಮತಿ ಸರ್ವಮಂಗಲ ಸಿರುಗುಪ್ಪ ರವರು ಎರಡು ಪುಸ್ತಕಗಳಾದ ಬೆಳಗಿನೊಳಗೆ ಮಹಾ ಬೆಳಗು ಮತ್ತು ವಚನ ಹೊಳವು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಬಸವ ಕೇಂದ್ರದಲ್ಲಿ ವಚನಗಳನ್ನು ಆಲಿಸದೆ, ವಚನಗಳನ್ನು ಮತ್ತು ಅವುಗಳ ಅರ್ಥಗಳನ್ನು ತಿಳಿಸಿದ ಅಕ್ಕ ಶ್ರೀಮತಿ ರುದ್ರಮ್ಮ ಹಾಸಿನಾಳ ರವರ ಪ್ರಯತ್ನ ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ನೀಡಿದೆ ಎಂದು ಶ್ರೀಮತಿ ಸರ್ವಮಂಗಳ ಮಾತನಾಡಿದರು.

ಈ ಕಾರ್ಯಕ್ರಮದ ಪುಸ್ತಕ ಅವಲೋಕನಕ್ಕಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಳ್ಳಾರಿಯ ಅಧ್ಯಕ್ಷರಾದ ಶ್ರೀ ನಿಷ್ಠಿ ರುದ್ರಪ್ಪ ಅವರು ವಚನ ಹೊಳವು ಪುಸ್ತಕದ ಮುನ್ನುಡಿಯನ್ನು ಬರೆದದ್ದಲ್ಲದೆ ಪುಸ್ತಕದ ಅಗತ್ಯವನ್ನು ಹಾಗೂ ಪುಸ್ತಕದ ಹೂರಣವನ್ನು ಸವಿವರವಾಗಿ ನೀಡಿದರು. ಹಾಗೂ ಗಂಗಾವತಿಯ ಕೊಲ್ಲಿ ನಾಗೇಶ್ವರ ಕಾಲೇಜಿನ ಪ್ರಾಚಾರ್ಯರಾದ ಡಾ. ಜಾಜಿ ದೇವೇಂದ್ರಪ್ಪ ರವರು ರುದ್ರಮ್ಮ ಹಾಸಿನಾಳರವರ ಇನ್ನೊಂದು ಪುಸ್ತಕ ಬೆಳಗಿನೊಳಗೆ ಮಹಾಬೆಳಗು ಇದರ ಸಂಪೂರ್ಣ ಚಿತ್ರಣವನ್ನು ನೀಡುತ್ತ ಮನೆಯಲ್ಲಿ ಸರ್ವರೂ ಇರಿಸಿಕೊಳ್ಳಬೇಕಾದ ಪುಸ್ತಕ ಎಂದು ಪುಸ್ತಕದ ಬಗ್ಗೆ ಹೆಮ್ಮೆಯ ನುಡಿಗಳನ್ನು ಹಾಡಿದರು.
ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶಿವಕುಮಾರ್ ಮಾಲಿಪಾಟೀಲ್, ಸಿ ಎಚ್ ನಾರಿನಾಳ , ಶ್ರೀಮತಿ ರುದ್ರಮ್ಮ ಹಾಸಿನಾಳ ಶ್ರೀಮತಿ ಜಗದೇವಿ ಕಲಶೆಟ್ಟಿ ಹಾಗೂ ಕಸಾಪ ಅಧ್ಯಕ್ಷರಾದ ಶ್ರೀನಿವಾಸ ಅಂಗಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣೆಗೌಡ ಪೊಲೀಸ್ ಪಾಟೀಲ್ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಉಮಾದೇವಿ ಕುಂಬಾರ್ ಅವರು ಹಾಗೂ ಸ್ವಾಗತವನ್ನು ಕಸಾಪ ಕಾರ್ಯದರ್ಶಿ ಶ್ರೀ ಶಿವಾನಂದ ತಿಮ್ಮಾಪುರ ರವರು ನೆರವೇರಿಸಿದರು.

About Mallikarjun

Check Also

ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ, ಬಿಜೆಪಿ-ಜೆಡಿಎಸ್ ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ: ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಮಾಧ್ಯಮ ಹೇಳಿಕೆ ಬೆಂಗಳೂರು, ಮೇ 6: ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.