Breaking News

ಡಾ. ಬಸವರಾಜ ಪೂಜಾರರಿಗೆ ಸಾರ್ಥಕ್ಯ ಪ್ರಶಸ್ತಿ ಪ್ರದಾನ

Dr. Sarthakya award to Basavaraja Pujara


ಕೊಪ್ಪಳ,೧೩ : ಚನ್ನಬಸವ ಪ್ರಕಾಶನ, ಮಾನಸ ಪ್ರಕಾಶನ, ಸುಮಸಿರಿ ಕನ್ನಡ ಪ್ರಕಾಶನ, ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ, ಕೊಪ್ಪಳ ಇವರುಗಳ ಸಹಯೋಗದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ.ಯ ಸಿಂಡಿಕೇಟ್ ಸದಸ್ಯರಾದ ಡಾ. ಬಸವರಾಜ ಪೂಜಾರರ ಶಿಕ್ಷಣ, ಸಾಹಿತ್ಯ ಸೇವೆಯನ್ನು ಪರಿಗಣಿಸಿ ಸಾರ್ಥಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕöÈತರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶ್ರೀಯುತ ಶರಣಬಸಪ್ಪ ಬಿಳೆಎಲಿ ಮಾತನಾಡಿ, ಶಿಕ್ಷಕ ಅಂದರೆ ಬೆಳಕು; ಕನ್ನಡ ಭಾಷೆ ರಾಜಮಾರ್ಗ, ಈ ಮಾರ್ಗದ ಮುಖೇನ ಅಪಾರ ಶಿಷ್ಯ ಬಳಗವನ್ನು ಪೂಜಾರರು ನಿರ್ಮಿಸಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳನ್ನು ಬೆಳಕಿಗೆ ತರುವ ಕಾರ್ಯ ಅವರಿಂದಾಗಲಿ ಎಂದು ಹಾರೈಸಿದರು. ಮೂರು ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ ಡಾ, ಬಸವರಾಜ ಪೂಜಾರರವರಿಗೆ ನೀಡಿರುವ ಈ ಪ್ರಶಸ್ತಿ ನಿಜಕ್ಕೂ ಸಾರ್ಥಕತೆ ಪಡೆದಿದೆ .ಅವರ ವಿದ್ಯಾರ್ಥಿಗಳು ಇಂದು ರಾಜ್ಯ ಮಟ್ಟದಲ್ಲಿ ಬೆಳಗುತ್ತಿದ್ದಾರೆ ಎಂದು ಡಾ. ಸಿದ್ಲಿಂಗಪ್ಪ ಕೊಟ್ನೆಕಲ್ ನುಡಿದರು.

ಗುರುಗಳ ಪಾಠ ಬೋಧನೆಯನ್ನು ಸ್ಮರಿಸಿದ ಯುವಕವಿ ಮಹೇಶ ಬಳ್ಳಾರಿ ಎರಡು ದಶಕಗಳ ಹಿಂದೆ ತಾವು ಕೇಳಿದ ಪಾಠಗಳು ಇಂದಿಗೂ ನೆನಪಿವೆ,ಅಲ್ಲದೆ ಅವರು ಎಷ್ಟು ಎತ್ತರಕ್ಕೆ ಬೆಳೆದರು ಯಾವ ಚೌಕಟ್ಟುಗಳನ್ನು ಹಾಕಿಕೊಂಡವರಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಹಲವಾರು ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ಮಾಡಿ ಭವಿಷ್ಯ ರೂಪಿಸಿದ್ದಾರೆ ಎಂದರು. ಸಾರ್ಥಕ ಶಿಕ್ಷಕತ್ವವನ್ನು ಮೆರೆದ ಪೂಜಾರ ಸರ್ ಅವರು ಕಣ್ಣಮುಂದಿನ ಬೆಳಕು ಈ ಬೆಳಕಿನ ಮಾರ್ಗದಲ್ಲಿ ಹತ್ತಾರು ಸಾವಿರ ವಿದ್ಯಾರ್ಥಿಗಳು ನಡೆಯುತ್ತಿದ್ದಾರೆ.ಗುರುಗಳ ಸಾಧನೆಯನ್ನು ಅವರು ಸೃಷ್ಟಿಸಿರುವ ಪಂಡಿತರನ್ನು ಗಮನಿಸಿ ನಾವು ತಿಳಿಯಬಹುದಾಗಿದೆ ಶ್ರೀಯುತರನ್ನು ಪ್ರಶಸ್ತಿಯಿಂದ ಗೌರವಿಸಿದ್ದು, ತಮ್ಮ ಹಲವು ವರ್ಷಗಳ ಹಂಬಲ ಈಡೇರಿದೆ ಎಂದು ಸಾಹಿತಿ ಮಂಜುನಾಥ ಚಿತ್ರಗಾರ ನುಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಸವರಾಜ ಪೂಜಾರ ರವರು ಸೇವೆ, ಸಾಧನೆ ಅನ್ನೋದಕ್ಕಿಂತ ಕರ್ತವ್ಯವನ್ನು ಆತ್ಮಪ್ರತ್ಯಯದಿಂದ ಮಾಡಿದ್ದೇವೆ. ಒಬ್ಬ ಮೇಷ್ಟಿçಗೆ ತಮ್ಮ ವಿದ್ಯಾರ್ಥಿಗಳ ಬೆಳವಣಿಗೆ ಅತೀವ ಸಂತಸವನ್ನು ತರುತ್ತದೆ. ಬಹುಷಃ ತಮಗೆ ಸ್ವಂತ ಮಕ್ಕಳ ಬೆಳವಣಿಗೆ ಗಿಂತ ವಿದ್ಯಾರ್ಥಿಗಳ ಬೆಳವಣಿಗೆ ಹೆಚ್ಚು ಪ್ರೀತಿ. ಕೊಪ್ಪಳದ ಸಾಹಿತ್ಯ ಸಾಂಸ್ಕöÈತಿಕ ಬಳಗ ಬಹಳ ಕ್ರಿಯಾಶೀಲವಾಗಿದೆ. ಆದರೆ ಮೈಸೂರು, ಬೀದರ್, ರಾಯಚೂರು ಮುಂತಾದ ಕಡೆಗಳಲ್ಲಿ ಇರುವಂತೆ ಇಲ್ಲಿ ರಂಗಮAದಿರಗಳಿಲ್ಲ. ಈ ಭಾಗದ ಬರಹಗಾರರಿಗೆ, ಕಲಾವಿದರಿಗೆ ಇನ್ನಷ್ಟು ಅವಕಾಶಗಳು ದೊರೆಯಬೇಕು. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಏಳ್ಗೆಗೆ ಸರ್ಕಾರ ಕಾರ್ಯಪ್ರವೃತ್ತವಾಗಬೇಕು, ಸಾಂಸ್ಕöÈತಿಕ ಪ್ರಜ್ಞೆಗೆ ಬಲ ತುಂಬಬೇಕು. ಎಂಬ ಕಾಳಜಿಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕöÈತ ಜಿ.ಎಸ್. ಗೋನಾಳ, ಶಿಶು ಸಾಹಿತಿ, ಕಲಾವಿದ ಶ್ರೀನಿವಾಸ. ವಿ. ಚಿತ್ರಗಾರ, ರಾಘವೇಂದ್ರ .ಜೆ .ಡಬ್ಲೂ÷್ಯ, ಶಿಕ್ಷಕರಾದ ವಿನಾಯಕ ನರಗುಂದ, ಆಶು ಕವಿ ರಂಗನಾಥ ಅಕ್ಕಸಾಲಿಗರ ಮುಂತಾದವರು ಉಪಸ್ಥಿತರಿದ್ದರು.

About Mallikarjun

Check Also

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಜನ್ಮ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮಕ್ಕೆಕೊಪ್ಪಳದಿಂದ 100 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ

More than 100 people from Koppal will participate in the closing ceremony of the founder …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.