Breaking News

ಫಕ್ರುಸಾಬ ನದಾಫ್ ಕರ್ನಾಟಕ ಮುಸ್ಲಿಂ ಯೂನಿಟಿ ಕೊಪ್ಪಳ ತಾಲೂಕಾ ಅಧ್ಯಕ್ಷರಾಗಿ ನೇಮಕ

Fakhrusaba Nadaf appointed as President of Karnataka Muslim Unity Koppal Taluka

ಜಾಹೀರಾತು


ಕೊಪ್ಪಳ : ಕರ್ನಾಟಕ ಮುಸ್ಲಿಂ ಯೂನಿಟಿ ಕೊಪ್ಪಳ ತಾಲೂಕಾ ಅಧ್ಯಕ್ಷರನ್ನಾಗಿ ಫಕ್ರುಸಾಬ ತಂದೆ ಖಾಸೀಮ್‌ಸಾಬ ನದಾಫ್, ಸಾ: ಕೊಪ್ಪಳ ಇವರನ್ನು ನೇಮಕ ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಜಿಲ್ಲಾಧ್ಯಕ್ಷ ಮಹ್ಮದ್ ಜಿಲಾನ್ ಕಿಲ್ಲೇದಾರ (ಮೈಲೈಕ್) ತಿಳಿಸಿದ್ದಾರೆ.
ಕರ್ನಾಟಕ ಮುಸ್ಲಿಂ ಯೂನಿಟಿ ಸಂಘವು ಕರ್ನಾಟಕ ರಾಜ್ಯಾದ್ಯಂತ ಮುಸ್ಲಿಂ ಸಮಾಜವನ್ನು ಸಂಘಟಿಸಿ, ಸಮಾಜದ ಹಕ್ಕುಗಳಿಗಾಗಿ ಹೋರಾಟ ಮಾಡುವ ಒಂದು ಸಂಘವಾಗಿದ್ದು, ಸಂಘದ ಧ್ಯೆಯೋದ್ದೇಶಗಳಿಗಾಗಿ ಕಾನೂನಿನ ಚೌಕಟ್ಟಿನಲ್ಲಿ ಸಂಘಟನೆಯನ್ನು ಕೈಗೊಂಡು, ಸಂಘದ ನೀತಿ ನಿಯಮಗಳಿಗನುಸಾರವಾಗಿ ಸಮಾಜದ ಹಿರಿಯ-ಕಿರಿಯರನ್ನು, ಯುವಕರನ್ನು ಸಂಘಟಿಸಿ, ಸಂಘವನ್ನು ಬಲಪಡಿಸುವ ಹೊಣೆಗಾರಿಕೆಯನ್ನು ತಮಗೆ ನೀಡಲಾಗಿದೆ.
ಕೊಪ್ಪಳ ತಾಲೂಕಿನಾದ್ಯಂತ “ಕರ್ನಾಟಕ ಮುಸ್ಲಿಂ ಯೂನಿಟಿ” ಸಂಘಟನೆ ಮಾಡಲು ಜಿಲ್ಲಾ ಹಾಗೂ ರಾಜ್ಯ ಸಮಿತಿಗಳಿಗೆ ತಾವು ಅಗತ್ಯ ಸಹಕಾರ ನೀಡಲು ಕೋರುತ್ತೇವೆ. ಕೊಪ್ಪಳ ತಾಲೂಕಿನಾದ್ಯಂತ ಮುಸ್ಲಿಂ ಸಮಾಜವನ್ನು ಸಂಘಟಿಸಿ, ತಾಲೂಕಿನ ಮುಸ್ಲಿಂ ಸಮಾಜದ ಹಿರಿಯರನ್ನು ಮತ್ತು ಯುವಕರನ್ನು ಹಾಗೂ ಮುಸ್ಲಿಂ ಮೌಲ್ವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಚುರುಕುಗೊಳಿಸಬೇಕೆಂದು ತಿಳಿಸಲಾಗಿದೆ.
ಹರ್ಷ : ಕರ್ನಾಟಕ ಮುಸ್ಲಿಂ ಯೂನಿಟಿ ಕೊಪ್ಪಳ ತಾಲೂಕಾ ಅಧ್ಯಕ್ಷರಾಗಿ ಫಕ್ರುಸಾಬ ನದಾಫ್ ನೇಮಕಗೊಂಡಿದ್ದಕ್ಕೆ ಅನೇಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.