Gold medal for Geeta Yallappa, a student of Kalmath Graduate College

ಮಾನ್ವಿ: ಕಲಬುರ್ಗಿ ನಗರದಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 42ನೇ ಘಟಿಕೋತ್ಸವ ಸಮಾರಂಭದಲ್ಲಿ ಪಟ್ಟಣದ ಕಲ್ಮಠ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿನ ವಾಣಿಜ್ಯ ಕಾನೂನು ಎಂಬ ವಿಷಯದಲ್ಲಿ 100 ಅಂಕಗಳಿಗೆ 98 ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಗೀತಾ ಯಲ್ಲಪ್ಪ ರವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಚಿನ್ನದ ಪದಕವನ್ನು ನೀಡಿ ಗೌರವಿಸಿದರು.
ವಿದ್ಯಾರ್ಥಿನಿಯ ಸಾಧನೆಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಲ್ಮಠದ ಶ್ರೀ ವಿರುಪಾಕ್ಷ ಪಂಡಿತಾರಾಧ್ಯ ಮಹಾಸ್ವಾಮಿಗಳು ಹಾಗೂ ಆಡಳಿತಾಧಿಕಾರಿಗಳಾದ ಸಂಗಯ್ಯ ಸ್ವಾಮಿ, ಕಾಲೇಜಿನ ಪ್ರಾಚಾರ್ಯರರಾದ ಸಿದ್ದನಗೌಡ ಪಾಟೀಲ್ ಹಾಗೂ ಕಾಲೇಜಿನ ಉಪನ್ಯಾಸಕರು ಅಭಿನಂದಿಸಿದರೆ.