Breaking News

ದಿನನಿತ್ಯಲಿಂಗಪೂಜೆಯಿಂದ ಮಾನವನ ಅಪಮೃತ್ಯೂಗಳ ದೂರ

Away from human immortality by daily lingam pooja


ಯಲಬುರ್ಗಾ ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕನಾಗಲಾಂಬಿಕೆ ಮಹಿಳಾ ಗಣದ ಸಂಯೋಗದಿಂದ 89 ನೇ ಹುಣ್ಣಿಮೆಯ ಮಾಸಿಕ ಬಸವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದ ಶರಣಪ್ಪ ಹೊಸಳ್ಳಿ ಇವರು ಮಾತನಾಡಿ, ಈ ಒಂದು ಪವಿತ್ರವಾದ ಭಾರತ ಉಣ್ಣಿಮೆ ಚನ್ನಹುಣ್ಣಿಮೆ ಎಂದು ಕರೆಯಲ್ಪಡುವ ಈ ಉಣ್ಣಿಮೆ ಚನ್ನಬಸವಣ್ಣನವರ ಜಾತ್ರೆ ನಡೆಯುವ ದಿನ ಇದು ಸುದೈವದ ದಿನವಾಗಿದೆ ಯಲಬುರ್ಗಾ ತಾಲೂಕಿನ ಗಡಿಭಾಗದ ಒಂದು ಸಣ್ಣ ಗ್ರಾಮದಲ್ಲಿ, ಮಾಸಕ್ಕೊಂದು ಉಣ್ಣಿಮೆ ದಿನಗಳನ್ನ ನೆಪ ಮಾಡಿಕೊಂಡು, ಸುತ್ತ ಮುತ್ತಲಿನ ಗ್ರಾಮದಿಂದ ಜನ ಸಮುದಾಯದವರನ್ನ ಮತ್ತು ಕುಟುಂಬದವರನ್ನ ಸಂಗಮಗೊಳಿಸಿಕೊಂಡು, ಅನುಭವಿಗಳಿಂದ ಪ್ರವಚನದ ಮೂಲಕ ಗುರು, ಲಿಂಗ, ಜಂಗಮ, ದಾಸೋಹ, ಕಾಯಕದ ಪರಿಕಲ್ಪನೆಯ ಕುರಿತಾಗಿರುವ ವಚನಗಳ ತಿರುಳನ್ನ ಮನ ಮನಗಳಿಗೆ ಮುಟ್ಟಿಸುವ ಕಾರ್ಯವೇ ಈ ಮಾಸಿಕ ಬಸವಾನುಭವ ಕಾರ್ಯಕ್ರಮ ಉದ್ದೇಶ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅತ್ಯಂತ ಮಾರ್ಮಿಕವಾಗಿ ವಿಷಯಾಧಾರಿತವಾಗಿ ಮನ ಮುಟ್ಟುವಂತೆ ಮಾತನಾಡಿದ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ ಇವರು ಮಾತನಾಡಿ
ಮೊಟ್ಟಮೊದಲು ಮನುಷ್ಯ ಮಾಡಬೇಕಾದದ್ದು ಶಿವ ಚಿಂತೆ ಶಿವಜ್ಞಾನ. ಕಾರಣ ನಮಗೆ ನೈಸರ್ಗಿಕವಾಗಿ ಜೀವನ ಬದುಕಲಿಕ್ಕೆ ಬೇಕಾಗಿರುವ ಗಾಳಿ, ಮಳೆ, ಬೆಳಕು, ಪೃಥ್ವಿಯ ನ್ನು ಕೊಟ್ಟಂತ ನಿರಾಕಾರ ನಿರಂಜನ, ನಿರವಯ ದೇವನನ್ನ ನೆನೆಯಬೇಕು. ಅದು ಯಾವರೀತಿ ಎಂದರೆ ಅಂಗದ ಮೇಲೆ ಲಿಂಗ ಧರಿಸಿ, ಸುಪ್ರಭಾತ ಸಮಯದಲ್ಲಿ ಎದ್ದು ತನಗೆ ಇಷ್ಟ ಬಂದಂತೆ ಸ್ವಲ್ಪ ಸಮಯವಾದರೂ ಇಷ್ಟಲಿಂಗಾರ್ಚನೆ ಮಾಡಬೇಕು. ನಂತರ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಅಂದಾಗಮಾತ್ರ ನಮ್ಮಲ್ಲಿರುವ ದುರ್ಗುಣಗಳು, ಅಪಮೃತ್ಯೂಗಳು ದೂರಾಗಿ, ಮನೆಯಲ್ಲಿ ಸದಾಚಾರದಿಂದ ಮಂಗಳಮಯ ವಾತಾವರಣ, ಶಾಂತಿ ನೆಮ್ಮದಿ ನೆಲೆಸುವುದು. ಅಷ್ಟೇ ಅಲ್ಲದೆ ಭಕ್ತಿಯಿಂದ ದಿನ ನಿತ್ಯ ಲಿಂಗವ ಪೂಜಿಸುವುದರಿಂದ ಹುಟ್ಟು ಸಾವಿನ ಮಧ್ಯದಲ್ಲಿರುವ ಅಪಮೃತ್ಯೂಗಳು ದೂರಾಗುವವು. ಅದಕ್ಕಾಗಿಯೇ ವರ್ಗ ಭೇದವಿಲ್ಲದೆ ವರ್ಣ ಭೇದವಿಲ್ಲದೆ, ಲಿಂಗ ಭೇದವಿಲ್ಲದೆ ಎಲ್ಲರು ಒಂದೆ ಎಂಬ ಭಾವನೆಯಿಂದ, ಅವರವರ ಮನದಲ್ಲಿ ಭಕ್ತಿಯ ಭಾವನೆ ಮೂಡಲಿ ಎನ್ನುವ ಉದ್ದೇಶದಿಂದ, ಸಮ ಸಮೂದಾಯಗಳನ್ನ ಒಗ್ಗೂಡಿಸಿಕೊಂಡು ಮೌಲ್ಯಾಧಾರಿತ ವಚನಗಳ ಕುರಿತು ಮನವರಿಕೆ ಮಾಡಿಕೊಡುವುದು ನಮ್ಮ ಉದ್ದೇಶ.
12ನೇ ಶತಮಾನದ ಶರಣರು ಕಾಯಕದ ತತ್ವ ಆಧಾರವಾಗಿ, ಲಿಂಗ ನಿಷ್ಟೆ, ಜಂಗಮ ನಿಷ್ಠೆಯಿಂದ ಬದುಕಿರುವ ಉದ್ದೇಶದಿಂದ ಶಿವಶರಣರಾಗಿ ಉಳಿದಿದ್ದಾರೆ. ಎಲ್ಲರ ಅಂತರಾತ್ಮದಲ್ಲಿ ದೇವನಿದ್ದಾನೆ. ಮಾನವ ನಿರ್ಮಿತವಾದ ಹಲವಾರು ದೇವರುಗಳಿಗೆ ಎರಗದೆ, ಏಕದೇವೋಪಾಸಕರಾಗಿ ಇಷ್ಟಲಿಂಗ ಧರಿಸಿ, ಲಿಂಗಯೋಗದೊಂದಿಗೆ ಸತ್ಯ ಶುದ್ಧ ಕಾಯಕ ಮಾಡುತ್ತಾ ಸಾಗಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾಗಿ, ಶರಣ ಅಮರೇಶಪ್ಪ ಬಳ್ಳಾರಿ ಬಸವ ಕೇಂದ್ರದ ಅಧ್ಯಕ್ಷರು ಮರಕಟ್ಟ, ಅಮರೇಶಪ್ಪ ಗಡಿಹಳ್ಳಿ ಸಾ. ಸೋಮಸಾಗರ, ದೇವಪ್ಪ ಕೋಳೂರು, ವಿರಪಣ್ಣ ಮೇಟಿ, ಚನ್ನಬಸಪ್ಪ ಮೇಟಿ, ಹನಮಂತಪ್ಪ ಮೇಟಿ, ಗಿರಿಮಲ್ಲಪ್ಪ ಪರಂಗಿ, ಯಲ್ಲಪ್ಪ ಅತ್ತಿಗುಡ್ಡದ, ಶರಣಪ್ಪ ಗೊಂದಿ, ನಿಂಗಪ್ಪ ಪರಂಗಿ ಸಾ. ವನಜಭಾವಿ ವೇದಿಕೆ ಹಂಚಿಕೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಕ್ಕ ನಾಗಲಾಂಬಿಕೆ ಬಳಗದ ಶರಣೆ ಶರಣಮ್ಮ ಬಸವನಗೌಡ ಪೋಲಿಸ್ ಪಾಟೀಲ್ ಕನಸಾವಿ, ಸಾವಿತ್ರಮ್ಮ ದೇವೇಂದ್ರಪ್ಪ ಆವಾರಿ, ಶಂಕ್ರಮ್ಮ ಹನಮೇಶ್ ಹೊಸಳ್ಳಿ, ಚನ್ನಮ್ಮ ಹೊಸಳ್ಳಿ, ದ್ರಾಕ್ಷಾಯಣಮ್ಮ ಹೊಸಳ್ಳಿ, ಹನಮಮ್ಮ ಉಚ್ಚಲಕುಂಟಿ, ವಿಶಾಲಾಕ್ಷಿ ಕೋಳೂರು, ಚನ್ನಮ್ಮ ಮಂತ್ರಿ, ಹಂಪಮ್ಮ ಮೇಟಿ, ಯಮನಮ್ಮ ಗೌಡ್ರ, ಹುಲಿಗೆಮ್ಮ ಅತ್ತಿಗುಡ್ಡದ ವನಜಭಾವಿ, ನಾಗಮ್ಮ ಜಾಲಿಹಾಳ ಮಲ್ಲಮ್ಮ ಮಂತ್ರಿ, ಮತ್ತು ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ, ಲಿಂಗನಗೌಬ ದಳಪತಿ, ಶಿವಪುತ್ರಪ್ಪ ಉಚ್ಚಲಕುಂಟಿ, ಪಂಪಾಪತಿ, ರಾಷ್ಟ್ರಪತಿ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ಬಸವರಾಜ ಬಸವಣ್ಣ ಹೊಸಳ್ಳಿ, ಬಸವರಾಜ ಕೋಳೂರು, ಸೋಮಣ್ಣ, ವಿರುಪಣ್ಣ, ಶರಣಪ್ಪ, ಮಲ್ಲಿಕಾರ್ಜುನ ಮಂತ್ರಿ, ಪಕೀರಪ್ಪ ಮಂತ್ರಿ,ಜಗದೀಶ್ ಮೇಟಿ, , ಚನ್ನಬಸವ ನಿಡಶೇಸಿ, ಹಾಗು ಸುತ್ತ ಮುತ್ತಲಿನ ಗ್ರಾಮದ ವನಜಭಾವಿ, ಚವಡಾಪುರ, ಮರಕಟ್ಟ, ಮಾಟಲದಿನ್ನಿ, ತಾಳಕೇರಿ, ಯಡ್ಡೋಣಿ, ಕಲಭಾವಿ ಗ್ರಾಮದ ಶರಣ ಸದ್ಭಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಎಸ್ ಹೂಗಾರ ನಿರೂಪಿಸಿದರು.
ಪಂಪಾಪತಿ ಹೊಸಳ್ಳಿ ವಚನಗಾಯನ ಗೈದರು.
ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ ಇವರನ್ನ ವನಜಭಾವಿ ಗ್ರಾಮದ ರಾಷ್ಟ್ರೀಯ ಬಸವ ದಳದ ಎಲ್ಲಾ ಪದಾಧಿಕಾರಿಗಳು ಸೇರಿಕೊಂಡು ಈ ಸಂದರ್ಭದಲ್ಲಿ ಗೌರವ ಸತ್ಕಾರ ನೀಡಲಾಯಿತು.
✍️ ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳದ ಶರಣಗ್ರಾಮ ಗುಳೆ.

About Mallikarjun

Check Also

ಗಡ್ಡಿ ಯಲ್ಲಿ ಉಚಿತವಾಗಿ ಅಯ್ಯಾಚಾರ ಮತ್ತು ಶಿವ ದೀಕ್ಷೇ ಯನ್ನು ಹಮ್ಮಿಕೊಳ್ಳಲಾಯಿತು

Ddharma Sri Ajata Appaji’s holy shrine Sri Kshetra Gaddi was offered free Ayyachar and Shiva …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.