Breaking News

ಕಲಬುರಗಿ ವಿಭಾಗ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಮತ್ತು ಥ್ರೋ ಬಾಲ್ ಕ್ರೀಡಾಕೂಟ ಗಳಿಗೆ ಚಾಲನೆ

Kalaburagi division level men and women kabaddi and throw ball sports events are underway

ಜಾಹೀರಾತು

ಸಿಂಧನೂರು : ನಗರದ ಸರ್ಕಾರ ಮಹಾವಿದ್ಯಾಲಯದಲ್ಲಿ ಕಲಬುರಗಿ ವಿಭಾಗ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಮತ್ತು ಥ್ರೋ ಬಾಲ್ ಕ್ರೀಡಾಕೂಟಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಸ್ಕಿ ಶಾಸಕ ಬಸನಗೌಡ ತುರವಿಹಾಳ ,ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ,ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ ಚಾಲನೆ ನೀಡಿದರು.
ಕಲಬುರಗಿ ವಿಭಾಗದ ಕಬಡ್ಡಿ ಹಾಗೂ ಥ್ರೋ ಬಾಲ್ ಆಟಗಳು ಪುರುಷ ಮತ್ತು ಮಹಿಳೆಯರಿಗೆ ನಡೆದುವು. ರಾಯಚೂರು, ಬಳ್ಳಾರಿ, ಬೀದರ್,ಕಲಬುರಗಿ, ಕೊಪ್ಪಳ, ವಿಜಯನಗರ, ಯಾದಗಿರಿ ಜಿಲ್ಲೆಗಳಿಂದ ತಂಡಗಳು ಆಗಮಿಸಿದ್ದವು.ಮೊಟ್ಟಮೊದಲಿಗೆ ಕೊಪ್ಪಳ ( ಡಣಾಪುರ) ಬೀದರ್ ಮಹಿಳೆಯರ ಕಬಡ್ಡಿ ಮತ್ತು ಪುರುಷರ ಕಬಡ್ಡಿ ಬೀದರ್ ಹಾಗೂ ಕಲಬುರಗಿ ಪ್ರಾರಂಭವಾದುವು.
ಇದೇ ಸಂದರ್ಭದಲ್ಲಿ ಮುಖಂಡ ಆರ್.ಸಿ.ಪಾಟೀಲ್ ,ಕಾಲೇಜ್ ಸಮಿತಿ ಸದಸ್ಯರಾದ ಶರಣಪ್ಪ ಉಪ್ಪಲದೊಡ್ಡಿ,ರಾಜೇಂದ್ರ ಕುಮಾರ ಜೈನ್,ಮಲ್ಲಿಕಾರ್ಜುನ ಹಟ್ಟಿ,ಅಮರೇಶ ಮಾಡಶಿರವಾರ, ನವೀನ್ ಹಾಗೂ ತಹಶಿಲ್ದಾರ ಅರುಣ್ ಕುಮಾರ್ ದೇಸಾಯಿ,ಪೌರಾಯುಕ್ತ ಮಂಜುನಾಥ ಗುಂಡೂರು, ಇಒ ಚಂದ್ರಶೇಖರ ,ಕಾಲೇಜ್ ಪ್ರಾಚಾರ್ಯರಾದ ಶಿವಯ್ಯ,ಉಪನ್ಯಾಸಕ ವೆಂಕಟರಮಣ,ಶಿವ ಸೇರಿದಂತೆ ಅನೇಕರು ಭಾಗವಹಿಸಿದ್ದರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.