Teacher transfer tearful children: An emotional scene full of tears!
ಗುಡೇಕೋಟೆ:- ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ…!ಗುರುವಿಗೆ ದೇವರೆಂದು ಕರೆಯುತ್ತಾರೆ. ಗುರುವಿಗೆ ದೇವರೆಂದು ಕರೆಯುತ್ತಾರೆ. ಶಿಕ್ಷಕರು ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಾರೆ. ಇಂತಹ ಶಿಕ್ಷಕರು ವರ್ಗಾವಣೆಯಾದರೆ ಮಕ್ಕಳ ಗೋಳಾಟವಂತೂ ಹೇಳತೀರದು. ಅಂತದ್ದೇ ಒಂದು ದೃಶ್ಯ ಚಂದ್ರಶೇಖರಪುರ ಸರ್ಕಾರಿ ಶಾಲೆಯೊಂದರಲ್ಲಿ ಜರುಗಿದೆ.
ಹೌದು ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14 ವರ್ಷ ಸೇವೆ ಸಲ್ಲಿಸಿ ಬೇರೆ ಕಡೆ ವರ್ಗಾವಣೆಯಾಗಿದ್ದ ಶಿಕ್ಷಕಿ ಮಂಗಳಾ ಅವರನ್ನು ಶಾಲೆಯಿಂದ ಆಚೆ ಬಿಡದೇ ಸುತ್ತುವರಿದ ಮಕ್ಕಳು ಕಣ್ಣೀರಿಟ್ಟ ಘಟನೆ ನಡೆದಿದೆ.
ನೆಚ್ಚಿನ ಟೀಚರ್ ಮಂಗಳಾ ಅವರು ವರ್ಗಾವಣೆಗೊಂಡ ವಿಷಯ ತಿಳಿದ ಮಕ್ಕಳು ಭಾವುಕರಾದರು.ಟೀಚರ್ ಕ್ಲಾಸ್ ನಿಂದ ಆಚೆ ಬರ್ತಿದ್ದಂತೆ ಅವರನ್ನು ಸುತ್ತುವರಿದ ಮಕ್ಕಳು ಆಚೆ ಬಿಡದೇ ಆಳುತ್ತಾ ನಿಂತ ದೃಶ್ಯ ನೋಡಿದವರಿಗೂ ಕಣ್ಣೀರು ತರಿಸುವಂತಿತ್ತು.
ಮಕ್ಕಳು ಆಳುತ್ತಿರುವುದನ್ನು ನೋಡಿದ ಶಿಕ್ಷಕಿ ಮಂಗಳಾ ಅವರು ಕೆಲ ಕಾಲ ಭಾವುಕರಾದರು. ಶಾಲೆ ಬಿಟ್ಟು ತೆರಳುವಾಗ ಶಾಲಾ ಮಕ್ಕಳು ಸುತ್ತುವರಿದು ತಬ್ಬಿಕೊಂಡು ಟೀಚರ್ ದಯವಿಟ್ಟು ಶಾಲೆ ಬಿಟ್ಟು ಹೋಗಬೇಡಿ ಮೇಡಂ ನೀವು ಇಲ್ಲೇ ಇದ್ದು ನಮಗೆ ಪಾಠ ಮಾಡಬೇಕೆಂದು ವಿದ್ಯಾರ್ಥಿಗಳು ಕಣ್ಣೀರು ಹಾಕಿದರು.ಈ ದೃಶ್ಯ ಕರುಳು ಚುರ್ ಎನ್ನುವಂತಿತ್ತು.ನಂತರ ಮಕ್ಕಳನ್ನ ಸಮಾಧಾನ ಮಾಡಿದ ಶಿಕ್ಷಕಿ ಮಂಜುಳ ಅವರು ನೀವು ಚೆನ್ನಾಗಿ ಓದಿ ಉನ್ನತ ಗುರಿ ಸಾಧಿಸಬೇಕು ನೀವು ಕಣ್ಣೀರು ಹಾಕಬಾರದು ಎಂದು ಬುದ್ಧಿಮಾತು ಹೇಳುತ್ತಾ ಮಕ್ಕಳೊಂದಿಗೆ ಕೆಲ ಹೊತ್ತು ಗ್ರೌಂಡ್ ನಲ್ಲೆ ಕಾಲ ಕಳೆದ್ರು. ನಾನು ಚಂದ್ರಶೇಖರಪುರ ಶಾಲೆಯಲ್ಲಿ 14 ಸೇವೆ ಮಾಡಿದ್ದೇನೆ. ಮಕ್ಕಳು ಹಾಗೂ ಗ್ರಾಮಸ್ಥರ ಪ್ರೀತಿಗೆ ಖುಷಿಯಾಗುತ್ತದೆ. ಮಕ್ಕಳನ್ನು ಬಿಟ್ಟು ಹೋಗುವುದು ನನಗೆ ದುಃಖ ತಂದಿದೆ ಎಂದರು.