Yalaburga No. 1 Government Primary School Head Teacher Rudra Gowda Goni suspended.
ಶಿಕ್ಷಕ ಅಮಾನತ,,,,
ಕೊಪ್ಪಳ( ಯಲಬುರ್ಗಾ) : ಪಟ್ಟಣದ ನಂ.1 ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 2 ಚೀಲ ಬೆಳೆ ಕಳ್ಳತನವಾಗಿರುವ ಕುರಿತು ವರದಿ ನೀಡದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕ ರುದ್ರಗೌಡ ಗೋಣಿ ಅವರನ್ನು ಕೊಪ್ಪಳ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ್ ಅಮಾನತು ಆದೇಶ ಹೊರಡಿಸಿದ್ದಾರೆ,,,
ಘಟನೆಯ ವಿವರ,,ಶಾಲೆಯಲ್ಲಿದ್ದ ಎರಡು ಚೀಲ ಬೆಳೆ ಕಳ್ಳತನವಾಗಿವೆ ಎಂದು ಆರೋಪಿಸಿದ ಮುಖ್ಯ ಶಿಕ್ಷಕ ಈ ಕುರಿತು ಪೋಲಿಸ್ ಇಲಾಖೆಗೆ ದೂರು ನೀಡಬೇಕಿತ್ತು,,? ಆದರೆ ದೂರನ್ನು ನೀಡದೇ ಇದ್ದರಿಂದ ಹಾಗೂ ಬೆಳೆ ಕಳ್ಳತನದ ಬಗ್ಗೆ ನನಗೇನೂ ಗೊತ್ತಿಲ್ಲಾ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಪತ್ರಕರ್ತ ಶಿವಮೂರ್ತಿ ಇಟಗಿಯವರು ಆರೋಪಿಸಿದ್ದಾರೆ.
ಈ ಮುಖ್ಯ ಶಿಕ್ಷಕ ರುದ್ರಗೌಡ ತೊಗರಿ ಬೆಳೆ ಕಳ್ಳತನದ ಬಗ್ಗೆ ಸೂಕ್ತ ಮಾಹಿತಿ ಒದಗಿಸದೇ ಇರುವದರಿಂದ ಇವರೇ ನೆರ ಹೊಣೆಗಾರರು ಎಂದು ಆರೋಪಿಸಿದರು.
ಘಟನೆ ಕುರಿತಂತೆ ಯಲಬುರ್ಗಾ ಅಕ್ಷರ ದಾಸೋಹ ಸಹಾಯ ನಿರ್ದೇಶಕರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿ ಪೂರಕ ದಾಖಲೆಗಳು ನಮೂನೆ – 2 ಹಾಗೂ ವೋಚರ್ ಗಳನ್ನು ಪರಿಶೀಲಿಸಿದಾಗ ಮುಖ್ಯ ಶಿಕ್ಷಕನ ಬಂಡವಾಳ ಬಯಲಾಗಿದೆ.
ನಿಯಮಾನುಸಾರ ದೂರು ದಾಖಲಿಸದೇ ನಿರ್ಲಕ್ಷ ವಹಿಸಲಾಗಿದೆ ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಿಧಿಕಾರಿಗಳು ವರದಿ ನೀಡಿದ್ದಾರೆ.
ಮುಖ್ಯ ಶಿಕ್ಷಕ ರುದ್ರಗೌಡ ಗೋಣಿ ಇತನು ಇಲಾಖೆ ನಿಯಮವನ್ನು ಉಲ್ಲಂಘಿಸಿ, ಕರ್ತವ್ಯ ಲೋಪ ತೋರಿದ್ದರಿಂದ ಇತನನ್ನು ಅಮಾತುಗೊಳಿಸುವಂತೆ ಕೊಪ್ಪಳ ಡಿಡಿಪಿಐ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದು, ಸಕ್ಷಮ ಪ್ರಾಧಿಕಾರ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡದಂತೆ ಸೂಚಿಸಿದ್ದಾರೆ.
ವರದಿ : ಪಂಚಯ್ಯಹಿರೇಮಠ,,