ಗಡ್ಡಿ ಕೆರೆ ಹೂಳೆತ್ತುವ ಕಾಮಗಾರಿ ಪಿಡಿಓ ಸುರೇಶ ಚಲವಾದಿ ಯವರಿಂದ ಪರಿಶೀಲನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Inspection of dredging work of Gaddi Lake by PDO Suresh Chalawadi

ಜಾಹೀರಾತು

ಪೂರ್ಣ ಕೆಲಸ, ಪೂರ್ತಿ ಕೂಲಿ ವಡ್ಡರಹಟ್ಟಿ ಪಿಡಿಓ ಸುರೇಶ ಚಲವಾದಿ ಹೇಳಿಕೆ

ಗಂಗಾವತಿ : ನರೇಗಾ ಕೂಲಿಕಾರರು ನಿಗದಿತ ಅವಧಿ ಮತ್ತು ಕೆಲಸ ನಿರ್ವಹಣೆಗೆ ಎಲ್ಲರೂ ಸಾಮೂಹಿಕವಾಗಿ ಶ್ರಮಿಸಿ, ಕೂಲಿಕಾರರು ಪೂರ್ಣ ಪ್ರಮಾಣದ 370 ರೂ. ಕೂಲಿ ಪಡೆಯಬೇಕು ಎಂದು ವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಕೂಲಿಕಾರರು ನರೇಗಾ ಯೋಜನೆಯಡಿ ಗಡ್ಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಶನಿವಾರ ಪರಿಶೀಲನೆ ನಡೆಸಿ ಮಾತನಾಡಿದರು.

ಮನರೇಗಾ ಯೋಜನೆಯ ಮಾರ್ಗಸೂಚಿಯನ್ನು ಕೂಲಿಕಾರರು ಉಲ್ಲಂಘಿಸಬಾರದು. ಕೆಲಸ ಬಯಸುವ ಕೂಲಿಕರಾರು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕೆಲಸಕ್ಕೆ ಹಾಜರಾದವರು ಸಂಪೂರ್ಣ ಕೆಲಸ ನಿರ್ವಹಿಸಿ ಸಂಪೂರ್ಣ ಕೂಲಿ ಪಡೆಯಬೇಕು. ನರೇಗಾ ಯೋಜನೆಯಡಿ ದಿನಕ್ಕೆ 370 ರೂ. ಕೂಲಿ ಇದ್ದು, ಸಂಪೂರ್ಣ ಕೆಲಸ ನಿರ್ವಹಿಸಿ ಪೂರ್ಣ ಪ್ರಮಾಣದ ಕೂಲಿ ಪಡೆಯಬೇಕು. ಕಾಯಕಬಂಧುಗಳು ತಮ್ಮ ಕೂಲಿಕಾರರಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳಬೇಕು. ಕೆಲಸಕ್ಕೆ ಹಾಜರಾದವರಿಗೆ ಮಾತ್ರ ಎನ್ ಎಂಎಂಎಸ್ ಹಾಜರಾತಿ ಹಾಕಲಾಗುವುದು ಎಂದು ತಿಳಿಸಿದರು.

ಕೆರೆ ಹೂಳೆತ್ತುವುದರಿಂದ ಅಂತರ್ಜಲ ವೃದ್ದಿಯಾಗಿ, ರೈತರ ಬೊರ್ ವೆಲ್ ಗಳು ರಿಚಾರ್ಜ್ ಆಗುತ್ತವೆ. ಹೀಗಾಗಿ, ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದರು.

ಈ ವೇಳೆ, ಗ್ರಾಪಂ ಸಿಬ್ಬಂದಿಗಳು, ಕಾಯಕಬಂಧುಗಳು ಇದ್ದರು.

Total Views: 0
Share This Article