A program to invite all body donors and get information about health

ಬೆಂಗಳೂರಿನ MS ರಾಮಯ್ಯ ಆಸ್ಪತ್ರೆಗೆ ನನ್ನ ದೇಹ ದಾನ ಮಾಡಿ 14 ವರ್ಷ ಗಳಾಗಿವೆ. ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ದೇಹ ದಾನಿಗಳನ್ನು ಆಮಂತ್ರಣ ನೀಡಿ ಕರೆಸಿ Opthomologist ಡಾ. ಅನಂತ್ ಭಂಡಾರಿ, Anchalogy specialist docter ಮತ್ತು Physiotherapist specialist ಮುಂತಾದ ಪ್ರಮುಖ ವೈದ್ಯರನ್ನು ಕರೆಸಿ ಆಲ್ಲಿ ಸೇರಿದ್ದ ಎಲ್ಲಾ

ದೇಹದಾನಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ನೀಡುವ ಉಪನ್ಯಾಸ ಗಳನ್ನು ಏರ್ಪಡಿಸಿದ್ದರು. ಈ ಕಾರ್ಯ ಕ್ರಮದಲ್ಲಿ ದೇಹದಾನಿಗಳ ಪರವಾಗಿ ನನ್ನನ್ನು ವೇದಿಕೆಯ ಮೇಲೆ ಆಹ್ವಾನಿಸಿ ಈ ಆಸ್ಪತ್ರೆಯ ಸ್ಥಾಪಕರಾದ ಕೀರ್ತಿ ಶ್ರೀ M.S. ರಾಮಯ್ಯನವರ ಪುತ್ರರಾದ M.R. ಶ್ರೀನಿವಾಸ್ ಮತ್ತು Principal ಮತ್ತು Dean ಆಗಿರುವ ಡಾ. ಶಾಲಿನಿ ಸಿ ನೂಯಿ ಮುಂತಾದ ಪ್ರಮುಖ ವೈದ್ಯರೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ ಗೌರವಿಸಿದರು. ಬದುಕಿನ ಅವಿಭಾಜ್ಯ ಅಂಗಗಳಾದ ಹಿರಿಯ ಜೀವಿಗಳಿಗೆ ಗೌರವ ನೀಡುವ ಈ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಮುಂತಾದವರು ತಮ್ಮ ಆತ್ಮೀಯತೆ ಯಿಂದ ನಮ್ಮನ್ನೆಲ್ಲಾ ಬೀಳ್ಕೊಡುವಾಗ ನಮಗೆಲ್ಲಾ ಧನ್ಯತಾ ಭಾವವೆನಿಸುವುದು
ಆ ಆಸ್ಪತ್ರೆಯ ಎಲ್ಲಾ ವೈದ್ಯರಿಗೂ ಮತ್ತು ಸಿಬ್ಬಂದಿಗೂ ನನ್ನ ಹೃತ್ಪೂರ್ವಕ ವಂದನೆಗಳು
🙏💐 ಶಶಿಕಲಾ.
[ಪ್ರತಿಷ್ಠಿತ MS Ramaiah Hospital ದೇಹದಾನ function protocal ನಲ್ಲಿ ನನ್ನ ಹೆಸರು ಸೇರಿಸಿ ವೇದಿಕೆಗೆ ಆಹ್ವಾನಿಸಿ ಅವರ ಪುತ್ರ MR Seetharam ರವರು ಮತ್ತು ಕೆಲವು ವೈದ್ಯರ ಜೊತೆ ಜ್ಯೋತಿ ಬೆಳಗಿಸಿದ ಈ ಅವಕಾಶಕ್ಕೆ ನಾನು ಅಲ್ಲಿನ ಎಲ್ಲಾ ವೈದ್ಯರಿಗೆ ಮತ್ತು ಈ ಆಸ್ಪತ್ರೆಯ ನಿರ್ಮಾತೃ MR ಶ್ರೀನಿವಾಸ್ ಸರ್ ಮತ್ತು ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ 🙏ಶಶಿಕಲಾ.
Kalyanasiri Kannada News Live 24×7 | News Karnataka