ಗಂಗಾವತಿ: ಗಂಗಾವತಿ ನಗರದ ಡಾ:ಅಂಬೇಡ್ಕರ್ ನಗರದ ಪ್ರಾಥಮಿಕ ಆರೋಗ ಕೇಂದ್ರದಲ್ಲಿ
ಜುಲೈ 01 ರಾಷ್ಟ್ರೀಯ ವೈದ್ಯರ ದಿನ. ಕೋವಿಡ್ 19 ಸೋಂಕಿನ ಹಾವಳಿಯ ಸಮಯದಲ್ಲಿ ವೈದ್ಯಲೋಕದ ಪರಿಶ್ರಮ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ರೋಗದ ಆತಂಕದ ನಡುವೆಯೂ ಮುಂಚೂಣಿ ವಾರಿಯರ್‌ಗಳಾಗಿ ವೈದ್ಯರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದದ್ದು. ದೇಶವಾಸಿಗಳ ಆರೋಗ್ಯ ರಕ್ಷಣೆಗಾಗಿ ಹಗಲಿರುಳೂ ಶ್ರಮಿಸುತ್ತಿರುವ ವೈದ್ಯಲೋಕಕ್ಕೆ ನುಡಿನಮನವಿದು,
ಡಾ: ಬಿ.ಸಿ. ರಾಯ್ ಅವರ ಜನ್ಮ ದಿನವಾದ ಜುಲೈ 1ರಂದು ದೇಶದಲ್ಲಿ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ವೈದ್ಯರ ದಿನಾಚರಣೆಯ ವೈದ್ಯರು ರೋಗಿಗಳೊಂದಿಗೆ ನಗು ನಗುತಾ ಚಿಕಿತ್ಸೆ ನೀಡಿದರೆ ಸಾಕು ಅರ್ದ ಭಾಗ ಗುಣಮುಖವಾಗುತ್ತಾರೆ, ರೋಗಿಗಳಿಗೆ ಒಳ್ಳೆಯ ಗೌರವದಿಂದ ಮತ್ತು ನಮ್ಮ ಮನೆಯಲ್ಲಿ ನಮ್ಮ ತಂದೆ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತೇವೆ ಹಾಗೆ ನೋಡಿದರೆ, ನಮ್ಮ ವೈದ್ಯಕೀಯ ಜೀವನ ಸಾರ್ಥಕವಾಗುತ್ತದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಂಬೇಡ್ಕರ್ ನಗರದ ವೈದ್ಯರಾದ ಡಾ: ರಮೇಶ ಸಲಹೆಯನ್ನು ನೀಡಿದರು.
ಈ ವೇಳೆ ವೈದ್ಯರನ್ನು ಸಮ್ಮಾನಿಸುವ ಮೂಲಕ ಅವರನ್ನು ಗೌರವಿಸಲಾಗುತ್ತದೆ.
ಈ ಸಂದರ್ಭದಲ್ಲಿ ಡಾ:ಶರಣೆಗೌಡ ಹಿರೇಗೌಡ, ಡಾ:ರಾಧಿಕಾ ಅರಳಿ, ಆರೋಗ್ಯ ಸಿಬ್ಬಂದಿಗಳಾದ ಪ್ರಭುರಾಜ, ಬೀಧು, ಹೆಚ್.ಸುರೇಶ, ವಿರೇಶ, ಸರಸತಿ, ಗಿರೀಜಾ, ಶಿವಗಂಗಾ, ರಮೇಶ, ಗುರುಪ್ರಸಾದ, ರಾಜೇಸಾಬ, ಮಹಾಮಹೆ ಸೇರಿದಂತೆ ಇತರರು ಇದ್ದರು.