17th year anniversary of Avadhuta Purusha Sangappajjana
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಮಸಬ ಹಂಚಿನಾಳ ರಸ್ತೆಯಲ್ಲಿರುವ ಅವದೂತ ಪುರುಷ ದಿಗಂಬರ ಮೂರ್ತಿ ಕೂಡ್ಲೂರ ಸಂಗಪ್ಪಜ್ಜನವರು ಮಠದಲ್ಲಿ ಅವರ ಪುಣ್ಯಾರಾಧನೆ ಜರುಗಲಿದೆ.
ಸಂಗಪ್ಪಜ್ಜನವರು ಕಾಲಾನಂತರವಾಗಿ 17 ವರ್ಷವಾಗಿದ್ದು ತನ್ನಿಮಿತ್ಯವಾಗಿ ಸೆ.03ರ ಮಂಗಳವಾರದಂದು ಅವರ ಪುಣ್ಯ ತಿಥಿ ಜರುಗಲಿದೆ.
ಈ ಪುಣ್ಯಾರಾಧನೆಯಲ್ಲಿ ಸಿಂಧನೂರ ತಾಲೂಕಿನ ಭಜಪ್ಪ ಕುಂಟೋಜಿ ಇವರ ಕುಟುಂಬದವರು ಪಾಲ್ಗೋಂಡು ಶ್ರಾವಣ ಕೊನೆಯ ಸೋಮವಾರದಂದು ವಿಷೇಶ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆಯನ್ನು ಸತತ 17ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮೂರ್ತಿ ಕುಂಟೋಜಿ ಮಾತನಾಡಿ ಸಂಗಪ್ಪಜ್ಜನವರು ದಿಗಂಬರ ಮೂರ್ತಿಗಳಾಗಿದ್ದು ನಾಡಿನ ವಿವಿಧ ಭಾಗಗಳಲ್ಲಿ ಭಕ್ತಾಧಿಗಳನ್ನು ಹೊಂದಿದ್ದಾರೆ.
ಇವರ ನುಡಿಗಳು ಹುಸಿಯಾಗದೇ ನುಡಿದಂತೆ ನಡೆಯುತ್ತಿದ್ದವು, ಇವರು ಮೃತ ಪಟ್ಟ ಎತ್ತನ್ನು ಮಾತನಾಡಿಸಿ ಜೀವ ಕಳೆ ತುಂಬಿದ ನಡೆದಾಡುವ ದೈವಿ ಪುರುಷರಾಗಿದ್ದರು. ಇವರ ನುಡಿದಂತೆ ನಡೆದ ಹಲವಾರು ಘಟನೆಗಳನ್ನು ನಾವು ಸ್ವತಃ ನೋಡಿದ್ದೇವೆ ಎಂದರು.
ಇವರು ನಮ್ಮ ಕುಟುಂಬಕ್ಕೆ ಸುಮಾರು 35ವರ್ಷಗಳಿಂದ ಚಿರ ಪರಿಚಿತರಾಗಿದ್ದರು. ನಾವು ಹಾಗೂ ಕಾರಟಗಿ ಗ್ರಾಮದ ಮಾವಿನಮಡಗು ಕುಟುಂಬದವರು ಪ್ರತಿ ಅಮವಾಸ್ಯೆಗೆ ಆಗಮಿಸಿ ಭಕ್ತಿ ಸೇವೆ ಸಲ್ಲಿಸಿ ಅನ್ನ ಸಂತರ್ಪಣೆ ನೆರವೇರಿಸುತ್ತೇವೆ, ಹಾಗೂ ಶ್ರಾವಣ ಮಾಸದ ಕೊನೆ ಸೋಮವಾರ ವಿಷೇಶ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡುತ್ತೇವೆ, ಮಾರನೇಯ ದಿನ ಮಂಗಳವಾರದಂದು ಪುಣ್ಯಾರಾಧನೆಯಲ್ಲಿ ಭಾಗಿಯಾಗುತ್ತೇವೆ ಎಂದು ತಿಳಿಸಿದರು.
ಸೆ.03ರ ಮಂಗಳವಾರದಂದು ನಡೆಯುವ ಇವರ ಪುಣ್ಯಾರಾಧನೆಯಲ್ಲಿ ಸಕಲ ಸಧ್ಬಕ್ತರು ಪಾಲ್ಗೋಳ್ಳಲು ವಿನಂತಿಸಿದರು. ಈ ಸಂದರ್ಭದಲ್ಲಿ ಕುಟುಂಬದವರು ಸ್ಥಳೀಯ ಭಕ್ತರು, ಅರ್ಚಕರು ಇದ್ದರು.