In Lingadahalli village panchayat of Kushtagi taluk, villagers demand investigation into corruption in the cost of materials for lake works.
ಕುಷ್ಟಗಿ ತಾಲೂಕಿನ ಲಿಂಗದಹಳ್ಳಿ ಗ್ರಾಮಸ್ಥರು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಲಿಂಗದಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ‘ಲಿಂಗದಹಳ್ಳಿ, ಹಾಗೂ ವಿವಿಧ ಹಳ್ಳಿಗಳಲ್ಲಿ ಗ್ರಾಮದ ಕೂಲಿಕಾರರ MGNREGA ಯೋಜನೆಯಡಿಯಲ್ಲಿ ಕೆರ ಹೊಳೆತ್ತುವ ಕೆಲಸ ನಿರ್ವಹಿಸಿದ್ದು ಇರುತ್ತದೆ. ಆದರೆ MGNREGA ಕಾಯ್ದೆ ಪ್ರಕಾರ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಮೂಲ ಭೂತ ಸೌಕರ್ಯಗಳಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಆರೋಗ್ಯ ದೃಷ್ಟಿಯಿಂದ, ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಇದು ಯಾವುದನ್ನು ಮಾಡದೆ ಮತ್ತು ಸಾರ್ವಜನಿಕ ಮಾಹಿತಿ ಫಲಕ (CIB) ಹಾಕದೆ ಲಿಂಗದಹಳ್ಳಿ ಗ್ರಾಮದ ಒಂದೇ ಕಾಮಗಾರಿಯಲ್ಲಿ 6,72,389 ಬೋಗಸ್ ಬಿಲ್ MIS ಹಾಗೂ FTO ಮಾಡಿದ್ದಾರೆ ಹಾಗೂ ಲಿಂಗದಹಳ್ಳಿ ಗ್ರಾಮ ಸೇರಿದಂತೆ ಪಂಚಾಯತ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ನಡೆದ ಕಾಮಗಾರಿಗಳು ಸೇರಿದಂತೆ ಸುಮಾರು 12 ಲಕ್ಷಕ್ಕೂ ಅಧಿಕಾ ಹಣವನ್ನು ತಮಗೆ ಅನುಕೂಲ ಇರುವ ವೆಂಡರ್‌ಗಳಿಗೆ ಈಗಾಗಲೆ ಬಿಲ್ ಮಡಿ ಭ್ರಷ್ಟಾಚಾರ ಮಾಡಲು ಹೊರಟಿದ್ದಾರೆ, ಆದ್ದರಿಂದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಕಾಮಗಾರಿಗಳ ಬಿಲ್ಲು ತಡೆಹಿಡಿಯಬೇಕು ಹಾಗೂ ಲಿಂಗದಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಯಲ್ಲಿ ನಡೆದ ಕಾಮಗಾರಿ ಸೇರಿದಂತೆ ಸುಮಾರು 12 ಲಕ್ಷ ರೂಪಾಯಿ ಹಣ ಎತ್ತುವಳ್ಳಿ ಮಾಡಲು ಮುಂದಾಗಿದ್ದಾರೆ ಅಲ್ಲದೆ 15 ನೇ ಹಣಕಾಸು ಯೋಜನೆಯಲ್ಲಿ ಲಕ್ಷ,ಲಕ್ಷಗಟ್ಟಲೆ ಹಣ ಕೊಳ್ಳೆ ಹೊಡಿದಿದ್ದಾರೆ ಗ್ರಾಮದ ಅಭಿವೃದ್ಧಿ ಮಡವುದನ್ನು ಬಿಟ್ಟು ಅಭಿವೃದ್ಧಿ ಹೆಸರನಲ್ಲಿ ನಕಲಿ ಬಿಲ್ ತಯಾರಿಸಿ ಲಕ್ಷಗಟ್ಟಲೆ ಕೊಳ್ಳೆ ಹೊಡಿಯಲ್ಲು ಮುಂದಾಗಿದ್ದಾರೆ ಆದ್ದರಿಂದ ತಾವುಗಳು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಭ್ರಷ್ಟಾಚಾರ ಮಾಡಿ ಹೊರಟಿರುವ ಹಿಂದಿನ P.D.O ಹಾಗೂ ಹಿಂದಿನ ಗ್ರಾಮ ಪಂಚಾಯತಿ ಅಧ್ಯಕ್ಷರು ವಿರುದ್ಧ ಸೂಕ್ತ ಕಾನೂನ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಗ್ರಾಮದ ಮುಂಖಡರಾದ ಶಿವಕುಮಾರ ನಾಯಕ, ದೇವರಾಜ ನಾಯಕ, ಉಮೇಶ ರಡ್ಡಿ, ಮಂಜುನಾಥ, ಜಗದೀಶ ರಡ್ಡಿ ಇತರರು ಸೇರಿದಂತೆ ಶುಕ್ರವಾರ ದಿನಾಂಕ 25 ರಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವಮೂಲಕ ಆಗ್ರಹಿಸಿದ್ದಾರೆ.
ಈ ಕಾಮಗಾರಿಗಳ ಹೆಸರನಲ್ಲಿ ಬೋಗಸ್ ಬಿಲ್ ಮಾಡಿದ್ದಾರೆ.
1) ಲಿಂಗದಹಳ್ಳಿ ಗ್ರಾಮದ ಉತ್ತರ ಭಾಗದಲ್ಲಿ ಕೆರೆ ಹೊಳೆತ್ತುವದು WCIGIS/540296.
2) ಲಿಂಗದಹಳ್ಳಿ ಗ್ರಾಮದ ದಕ್ಷಿಣ ಭಾಗದಲ್ಲಿ ಕೆರೆ ಹೊಳೆತ್ತುವದು WCGIS/540334
3) ಲಿಂಗದಹಳ್ಳಿ ಗ್ರಾಮದ ಪೂರ್ವ ಭಾಗದಲ್ಲಿ ಕೆರೆ ಹೂಳೆತ್ತುವದು WCGHS/542795.
4) ಲಿಂಗದಹಳ್ಳಿ ಗ್ರಾಮದ ಪಶ್ಚಿಮ ಭಾಗದಲ್ಲಿ ಕೆರೆ ಹೊಳೆತ್ತುವದು WCGIS 540296 –