Breaking News

ಅಕಾಲಿಕ ಮಳೆ ಒಣ ದ್ರಾಕ್ಷಿ ಹಾನಿ: ಸ್ಥಳಕ್ಕೆ ತಹಶೀಲ್ದಾರ್ ಬೇಟಿ ಪರಿಶೀಲನೆ

Untimely rain damages dry grapes: Tahsildar visits the spot to inspect

ಜಾಹೀರಾತು

ಸಾವಳಗಿ: ಜೋರು ಗಾಳಿ ಹಾಗೂ ಮಳೆಯು ದ್ರಾಕ್ಷಿ ಬೆಳೆಗಾರರಿಗೆ ಕಹಿ ಉಣಿಸಿದೆ. ಮತ್ತೊಮ್ಮೆ ಪರಿಹಾರಕ್ಕಾಗಿ ಸರ್ಕಾರದ ಎದುರು ಕೈಒಡ್ಡುವಂತೆ ಮಾಡಿದೆ. ಸಾವಳಗಿ ಹೋಬಳಿಯಲ್ಲಿ ಸೋಮವಾರ ಬಿರುಗಾಳಿ, ಹಾಗೂ ಮಳೆಯಿಂದಾಗಿ ಹಾನಿಯಾದ ದ್ರಾಕ್ಷಿಯನ್ನು ತಹಶೀಲ್ದಾರ್ ಸದಾಶಿವ ಮುಕೋಜ್ಜಿ  ಮಂಗಳವಾರ ಭೇಟಿ ಪರೀಶೀಲನೆ ನಡೆಸಿದರು.

ಹೋಬಳಿಯಲ್ಲಿ ಹಾನಿಯಾದ ಸ್ಥಳಕ್ಕೆ ಮಂಗಳವಾರ ತೊದಲಬಾಗಿ, ತುಂಗಳ, ಸೇರಿದಂತೆ ಅನೇಕರು ಗ್ರಾಮಗಳಲ್ಲಿ ದ್ರಾಕ್ಷಿಯನ್ನು ವೀಕ್ಷಿಸಿದರು.

ನಂತರ ಮಾತನಾಡಿ ತಹಶೀಲ್ದಾರ್ ಸದಾಶಿವ ಮುಕೋಜ್ಜಿ ಅವರು ಶೆಡ್‌ಗಳಲ್ಲಿ ಒಣ ದ್ರಾಕ್ಷಿ ಸಿದ್ಧಪಡಿಸಲು ಹಾಕಿದ್ದ ದ್ರಾಕ್ಷಿ ಹಾನಿಯಾಗಿದೆ, ಹಾನಿಯಾದ ರೈತರ ಮಾಹಿತಿ ಪಡೆದು ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

ರೈತ ಉಮೇಶ್ ಜಾಧವ ಮಾತನಾಡಿ ಅಕಾಲಿಕ ಮಳೆ ತೀವ್ರ ಆರ್ಥಿಕ ಹೊಡೆತ ನೀಡಿದೆ. ಹೋದ ವರ್ಷವೂ ನಷ್ಟ ಅನುಭವಿಸಿ ಉಳಿಸಿಕೊಂಡಿದ್ದ ಅಲ್ಪಸ್ವಲ್ಪ ಬೆಳೆಯೂ ಈಗ ಹಾಳಾಗಿದೆ. ಶೆಡ್‌ಗಳಲ್ಲಿ ಒಣ ದ್ರಾಕ್ಷಿ ಸಿದ್ಧಪಡಿಸಲು ಹಾಕಿದ್ದ ದ್ರಾಕ್ಷಿ ಹಾಳಾಗಿ, ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಂತೆ ನಮ್ಮಬದುಕು ಆಗಿದೆ. ಸೋಮವಾರ ಸುರಿದ ಬಿರುಗಾಳಿ, ಮಳೆ ತುಂಬಾ ಸಾಕಷ್ಟು ಹಾನಿ ಮಾಡಿದೆ ಇನ್ನೂ ಮನುಕು ಬಿಸಿಲಿಗೆ ಹಾಕಿ ಒನಗಿಸಿ ಮನುಕು ಮಾಡಬೇಕು, ಸದ್ಯದ ಸ್ಥಿತಿ ನೋಡಿದರೆ ಖರ್ಚು ಸಹ ಮರಳಿ ಬಾರದಂತಾಗಿದೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಪ್ರಕಾಶ್ ಪವಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಸಚೀನ ಮಾಚಕನೂರ, ಗುರುನಾಥ್ ಬುದ್ನಿ, ಗ್ರಾಮ ಲೆಕ್ಕಾಧಿಕಾರಿ ಸವಿತಾ ಗಂಗಾವತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *