Breaking News

ಕಾಡಾನೆ ದಾಳಿಗೆ ಬೆಳೆನಾಶ ರೈತ ನಷ್ಟದ ಸುಳಿಯಲ್ಲಿ

In the whirlwind of crop loss due to forest attack.


ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ಇತ್ತೀಚಿನ ದಿನಗಳಲ್ಲಿ ಗ್ರಾಮಗಳಿಗೆ ಕಾಡನೆಗಳ ಹಾವಳಿಯು ಹೆಚ್ಚಿದ್ದು ಜೋಳದ ಫಸಲು ನಾಶವಾಗಿರುವ ಘಟನೆ ತಾಲೂಕಿನ ಮೈಸೂರಪ್ಪನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಪಿ ಜಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೈಸೂರಪ್ಪನ ದೊಡ್ಡಿ ಗ್ರಾಮದ ನಿವಾಸಿ ರಾಮಯ್ಯ ಬಿನ್ ರಾಮಯ್ಯ ಎಂಬವರಿಗೆ ಸೇರಿದ 85ಅರಬಗೆರೆ ಸರ್ವೇ ನಂ 405/3ರಲ್ಲಿ 86. ಸೆಂಟ್ ಹಾಗೂ ಸರ್ವೇ ನಂ 406/1ರಲ್ಲಿ 1.27ಎಕರೆ ಅಷ್ಟು ಜೋಳದ ಫಸಳನ್ನು ಬೆಳೆಯಲಾಗಿದ್ದು ತಡ ರಾತ್ರಿ ಕಾಡನೆ ಗಳು ಲಗ್ಗೆ ಇಟ್ಟು ಜೋಳದ ಫಸಲನ್ನು ತಿಂದು ನಾಶ ಪಡಿಸಿವೆ, ಫಸಲು ಕಟಾವು ಮಾಡುವ ಹಂತದಲ್ಲಿದ್ದು ಕೈಗೆ ಬಂದ ತುತ್ತು ಬಾಯಿಗೆ ಭಾರದಂತಾಗಿದೆ ಎಂದು ರೈತ ಕಂಗಲಾಗಿದ್ದಾರೆ, ಆದ್ದರಿಂದ ಸರಕಾರದಿಂದ ಸೂಕ್ತ ಪರಿಹಾರ ವನ್ನು ಒದಗಿಸಬೇಕೆಂದು ಒತ್ತಾಯ ಮಾಡಿದ್ದಾರೆ,

ಮೈಸೂರಪ್ಪನ ದೊಡ್ಡಿ ಗ್ರಾಮವೂ ಬಹುತೇಕ ಅರಣ್ಯದ ಅಂಚಿನಲ್ಲಿ ಇರುವುದರಿಂದ ಕಳೆದ 15ದಿನ ಗಳಿಂದಲೂ ಸಹ ಈ ಭಾಗದಲ್ಲಿ ರಾತ್ರಿಯ ವೇಳೆ ಕಾಡಾನೆ ಗಳು ಜಮೀನು ಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಪಡಿಸುತ್ತಿವೆ ಎಂದು ಸ್ಥಳೀಯರು ಅರಣ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು,

About Mallikarjun

Check Also

ಹನೂರು ವಿದಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಮತಗಟ್ಟೆ ಧ್ವಂಸ

ವರದಿ : ಬಂಗಾರಪ್ಪ ಸಿ .ಹನೂರು : ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.