Breaking News

ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆ ಕ್ಷಣಗಣನೆ ಆರಂಭ

Surrender Victory Nadahabba, Martyr’s Day Commencement Commencement

ಜಾಹೀರಾತು

ಅಕ್ಟೋಬರ್ 15 ರಿಂದ ಅ. 25 ವರೆಗೆ ಪ್ರತಿನಿತ್ಯ ಕಾರ್ಯಕ್ರಮ.


ಬಸವಾದಿ ಶರಣರ ಪಾವನ ಭೂಮಿ ಬಸವಕಲ್ಯಾಣದ ಭವ್ಯವಾದ ಹರಳಯ್ಯನವರ ಗವಿ ಮಹಾಮನೆಯ ಆವರಣದಲ್ಲಿ ವಿಜಯೋತ್ಸವ ನಾಡಹಬ್ಬ
ಕಾರ್ಯಕ್ರಮ ಕ್ಷಣಗಣನೆ ಆರಂಭಕ್ಕೆ ಸಾಕ್ಷಿಯಾಗಲಿದೆ.
ಪೂಜ್ಯ ಡಾ.ಗಂಗಾಂಬಿಕೆ ಅಕ್ಕನವರ
ನೇತೃತ್ವದಲ್ಲಿ ಅಕ್ಟೋಬರ್ 15 ರಿಂದ ಪ್ರಾರಂಭವಾಗಿ ಅ.24 ವರೆಗೆ ನಿರಂತರವಾಗಿ ಸಾಗಿ ಬರಲಿದೆ. ಈ
ಹತ್ತು ದಿವಸಗಳ ಕಾಲ ಅತ್ಯಂತ ಶಿಸ್ತು ಬದ್ಧ, ಅರ್ಥಪೂರ್ಣ, ವೈಜ್ಞಾನಿಕ, ವೈಚಾರಿಕತೆ ಮೌಲ್ಯಾಧಾರಿತ
ಬಸವ ತತ್ವ ಸಿದ್ಧಾಂತದ ಮೇಲೆ ನಾಡಹಬ್ಬ
ಜರುಗಲಿದೆ. ಶರಣ ವಿಜಯೋತ್ಸವ ನಾಡಹಬ್ಬ ಮತ್ತು ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಕರ್ನಾಟಕ, ತೆಲಂಗಾಣ ಮಹಾರಾಷ್ಟ್ರ, ಮೊದಲಾದ ಭಾಗಗಳಿಂದ ಸಾವಿರಾರು ಶರಣ ಬಂಧುಗಳು ಭಾಗವಹಿಸಲಿದ್ದು. ಹತ್ತು ದಿವಸಗಳ ಕಾಲ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶರಣ ವಿಜಯೋತ್ಸವ ಆರಂಭೋತ್ಸವ ಮತ್ತು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡುವದರೊಂದಿಗೆ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗುತ್ತದೆ. ಕೃಷಿ ವಿಚಾರ ಸಂಕಿರಣ ವಿಚಾರಗೋಷ್ಠಿ, ಜೀವನ ಹಿತ ಸಿದ್ಧಾಂತ ಷ್ಟಟಸಲ ಚಿಂತನೆ ಮತ್ತು ಜಿಲ್ಲಾ ಮಟ್ಟದ ಬಹುಭಾಷಾ ಕವಿಗೋಷ್ಠಿ , ಮಹಾಶಕ್ತಿಕೂಟಗಳು ಸಮಾವೇಶ , ಯುವ ಜಾಗೃತಿಗಾಗಿ ವಚನ ಓದು, ಅಂಧಶ್ರದ್ಧೆ ನಿವಾರಣೆಗಾಗಿ ವಚನದ ನೆಲೆಗಳು, ಹಿರಿಯ ನಾಗರಿಕರ ಕೂಟ, ಮಹಾರಾಷ್ಟ್ರದಲ್ಲಿ ಶರಣ ಸಂಸ್ಕೃತಿ ವಿಚಾರಗೋಷ್ಠಿ, ಪ್ರಸಾದ ಕಾಯವ ಕೆಡಿಸಲಾಗದು,ಸಮರ್ಥ ಸಮಾಜ ನಿರ್ಮಿತಿಗಾಗಿ ಶರಣರ ಸಂದೇಶ,ಜಗತ್ತಿನ ಮೊದಲ ಪ್ರಜಾತಂತ್ರದ ಸಂಸತ್ತು ಅನುಭವ ಮಂಟಪ ಚಿಂತನಾ ಗೋಷ್ಠಿಗಳು ಪ್ರತಿನಿತ್ಯ ಇಷ್ಟಲಿಂಗ ಪೂಜೆ, ಪ್ರಾರ್ಥನೆ,ಶರಣ ಸ್ಮರಣೆ, ಧರ್ಮಚಿಂತನೆ, ವಚನ ಸಂಗೀತ, ವಚನ ನೃತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಶರಣ ವಿಜಯ ವಚನ ಪಠಣ, ಹುತಾತ್ಮ ಶರಣರ ಎಳೆಹೊಟ್ಟೆಯ ಮೆರವಣಿಗೆ ಇದು ಬಸವಕಲ್ಯಾಣದ ಐತಿಹಾಸಿಕ ಕೋಟೆಯಿಂದ ಪ್ರಾರಂಭವಾಗಿ ಹರಳಯ್ಯನವರ ಗವಿಯವರೆಗೆ ಸಾಗಿ ಬರಲಿದೆ. ಈ ಮೆರವಣಿಗೆಯಲ್ಲಿ ಸ್ವಾಮಿಜಿಗಳು, ಬಸವ ಅಭಿಮಾನಿಗಳು, ರಾಜಕೀಯ ನಾಯಕರು, ಕಲಾತಂಡಗಳು, ಜನಪದ ಕಲಾವಿದರು, ವಚನ ಗಾಯಕರು ಭಾಗವಹಿಸುತ್ತಿದ್ದಾರೆ.
ಮಹಾ ಮಾನವತಾವಾದಿ ಬಸವಣ್ಣನವರ ವಚನ ಸಾಹಿತ್ಯದ ಸಂದೇಶಗಳಲ್ಲಿ ನಂಬಿಕೆ ಇಟ್ಟು ಬದುಕುವ ಸಮಸ್ತ ಬಸವಭಕ್ತರು, ಬಸವ ತತ್ವಾಭಿಮಾನಿಗಳೆಲ್ಲರೂ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮಕ್ಕೆ
ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು
ಪೂಜ್ಯ ಗಂಗಾಂಬಿಕೆ ಅಕ್ಕನವರು ವಿನಂತಿಸಿದ್ದಾರೆ.


About Mallikarjun

Check Also

ರಾಯಚೂರ ಜಿಲ್ಲೆಯ ನೂತನ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ ಕಾಂದೂ ಅಧಿಕಾರ ಸ್ವೀಕಾರ

Raichur district's new Zilla Panchayat CEO Ishwar Kumar Kandu assumes office ರಾಯಚೂರ ಜುಲೈ 9 (ಕ.ವಾ.): …

Leave a Reply

Your email address will not be published. Required fields are marked *