Breaking News

ನಗರದ ಶಂಕರಮಠದಲ್ಲಿ ಆರನೇವರ್ಷದವಾರ್ಷಿಕೋತ್ಸವ

Sixth anniversary celebrations at Sankara Math in the city

ಗಂಗಾವತಿ 21 ಸನಾತನ ಧರ್ಮದ ಜಾಗೃತಿ ಜೊತೆಗೆ ಸಮಾಜದಲ್ಲಿರುವ ಆಸ್ತಿಕ ಬಡ ವರ್ಗದವರಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಲು ಶೃಂಗೇರಿಯ ಉಭಯ ಜಗದ್ಗುರುಗಳು ಸಮ್ಮತಿಸಿದ್ದಾರೆ ಎಂದು ಗಂಗಾವತಿ ಶೃಂಗೇರಿ ಮಠದ ಧರ್ಮಾಧಿಕಾರಿ ನಾರಾಯಣರಾವ್ ವೈದ್ಯ ಹೇಳಿದರು ಅವರು ಬುಧವಾರದಂದು ಶೃಂಗೇರಿ ಶಾಖಾಮಠದ ಆರನೇ ವಾರ್ಷಿಕೋತ್ಸವ ಪ್ರಯುಕ್ತ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿ ಯಾವುದೇ ಜಾತಿ ಮತ ಭೇದವಿಲ್ಲದೆ ಸಮಾಜದಲ್ಲಿರುವ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ (ಸ್ಕಾಲರ್ಶಿಪ್) ವಿದ್ಯಾರ್ಥಿ ವೇತನ ಗೋ ಸಂರಕ್ಷಣೆಗಾಗಿ ಧನಸಹಾಯ ಸೇರಿದಂತೆ ಪರಿಸರ ಸಂರಕ್ಷಣೆಗಾಗಿ ಸಸಿ ಹಾಕುವಿಕೆ ಇತರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದ ಅವರು ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸನ್ಯಾಸತ್ವ ಪಡೆದ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಯೋಜನೆಗಳನ್ನು ನಡೆಸುವಂತೆ ಆಡಳಿತ ಅಧಿಕಾರಿಗಳಾದ ಪಿ ಮುರುಳಿ ಹಾಗೂ ಗೌರವ ಸಲಹೆಗಾರರಾದ ಸೇವಾದುರಿನ ವಿಆರ್ ಗೌರಿಶಂಕರ್ ಎಲ್ಲಾ ಶಂಕರ ಮಠಗಳಲ್ಲಿ ಆದೇಶಿಸಿದ್ದಾರೆ ಎಂದು ತಿಳಿಸಿದರು ಬಳಿಕ ವೇದಾ ಬಾಯಿ ದೇಸಾಯಿ ಅವರು ಗಂಗಾವತಿಯಲ್ಲಿ ಶಂಕರ ಮಠ ಬೆಳೆದು ಬಂದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆ ಶಕ್ತಿ ಗಣಪತಿ ಶ್ರೀ ಶಾರದಾಂಬೆ ಹಾಗೂ ಶಂಕರಾಚಾರ್ಯರ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಅಷ್ಟೋತ್ತರ ಶತನಾಮಾವಳಿ ನಡೆಸಲಾಯಿತು ಜೊತೆಗೆ ಸಂಜೆಯ ಕಾರ್ಯಕ್ರಮದಲ್ಲಿ ಶಾರದಾ ಶಂಕರ ಭಕ್ತ ಮಂಡಳಿ ಸೌಂದರ್ಯ ಲಹರಿ ಭಗಿನಿಯರ ಸಂಘ ಇತರೆ ಭಜನಾ ಮಂಡಳಿಯವರಿಂದ ಕುಂಕುಮಾರ್ಚನೆ ಲಲಿತ ಸಹಸ್ರನಾಮಾವಳಿ ಪಾರಾಯಣ ಇತರೆ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕ ಕುಮಾರ್ ಭಟ್ ನೆರವೇರಿಸಿದರು ಇದೇ ಸಂದರ್ಭದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಿರ್ಮಲ ರಾಯ್ಕರ್ ಸು ಮಂಗಳ ಇವರನ್ನು ವಿವಿಧ ಭಜನಾ ಮಂಡಳಿಯ ಪ್ರಮುಖರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿ ಶ್ರೀನಿವಾಸ ಕರಮಡಿ ವಿದ್ಯಾ ತೀರ್ಥ ನಾರ್ವೆ ವೇಣು ಬಾಲಕೃಷ್ಣ ದೇಸಾಯಿ ಇತರರು ಪಾಲ್ಗೊಂಡಿದ್ದರು

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.