Breaking News

ಡಾ.ಬಿ.ಆರ್.ಅಂಬೇಡ್ಕರ್ ಫಲಪುಷ್ಪ ಪ್ರದರ್ಶನಕ್ಕೆ ಸಾಕ್ಷಿಯಾದ ವಿದ್ಯಾರ್ಥಿಗಳು

Students witnessed Dr. BR Ambedkar’s fruit flower display

ಜಾಹೀರಾತು

ಬೆಂಗಳೂರು: ಅ.19: ದೇಶವು ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರಿತ 216ನೇ ಫಲಪುಷ್ಪ ಪ್ರದರ್ಶನವನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.

ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. “ಸಮಾನತೆ ಯಾತ್ರೆ” ಹೆಸರಿನಲ್ಲಿ ವಿದ್ಯಾರ್ಥಿಗಳು,ಶಿಕ್ಷಕರು,ಶಿಕ್ಷಕೇತರ ಸಿಬ್ಬಂದಿಗಳು ಲಾಲ್‌ಭಾಗ್‌ಗೆ ಭೇಟಿ ನೀಡಿ ಪುಷ್ಪಪ್ರದರ್ಶನವನ್ನು ವೀಕ್ಷಿಸಿದರು. ವಿದ್ಯಾರ್ಥಿಗಳ ಪ್ರವಾಸಕ್ಕಾಗಿ ವಿವಿ ಆಡಳಿತ ಮಂಡಳಿ ಬಸ್ ವ್ಯವಸ್ಥೆ ಮಾಡಿದ್ದು, 10ಕ್ಕೂ ಹೆಚ್ಚು ಬಸ್‌ಗಳಲ್ಲಿ 600ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯಾಣಿಸಿ ಪುಷ್ಪಪ್ರದರ್ಶನ ವೀಕ್ಷಿಸಿದರು. ಸಮಾನತೆ ಯಾತ್ರೆಯ ಪ್ರವಾಸಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವ ಶೇಕ್ ಲತೀಫ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಪುಷ್ಪಪ್ರದರ್ಶನದಲ್ಲಿ ಹೂಗಳಲ್ಲಿ ಅರಳಿ ನಿಂತಿದ್ದ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್‌ರ ಜೀವನ ಸಾಧನೆ,ಕೊಡುಗೆಗಳು, ಪ್ರಮುಖ ಘಟ್ಟಗಳು, ಚಿಂತನೆಗಳು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ವೀಕ್ಷಿಸಿದರು.

ಸಮಾನತೆ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕುಲಪತಿ ಡಾ‌.ಜಯಕರ ಎಸ್ ಎಂ “ಡಾ.ಬಿ.ಆರ್.ಅಂಬೇಡ್ಕರರ ಪುಷ್ಪ ಪ್ರದರ್ಶನ ವೀಕ್ಷಿಸಲು ವಿದ್ಯಾರ್ಥಿಗಳು ಆಸಕ್ತರಾಗಿದ್ದರು. ಈ ಹಿನ್ನೆಲೆ ವಿಶ್ವವಿದ್ಯಾಲಯದ ವತಿಯಿಂದ ಪ್ರವಾಸ ಆಯೋಜಿಸಲಾಗಿದೆ. ಇತಿಹಾಸದ ಭಾಗವಾಗಿರುವ ಡಾ.ಬಿ.ಆರ್.ಅಂಬೇಡ್ಕರ್‌ರ ಅಧ್ಯಯನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿರಲಿದೆ. ಪುಷ್ಪಪ್ರದರ್ಶನ ವೀಕ್ಷಿಸುವ ಮೂಲಕ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರರ ಚಿಂತನೆ, ಆಶಯ, ವ್ಯಕ್ತಿ ಉದ್ದೇಶಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಜ್ಞಾನರ್ಜನೆಗೆ ವಿಶ್ವವಿದ್ಯಾಲಯ ಸದಾ ಬೆಂಬಲವಾಗಿರಲಿದೆ” ಎಂದರು.

ಸಂಶೋಧನಾ ವಿದ್ಯಾರ್ಥಿ ಹಾಗೂ ಮುಖಂಡ ಚಂದ್ರು ಪೆರಿಯಾರ್ ಮಾತನಾಡಿ “ಸ್ವಾತಂತ್ರ್ಯೋತ್ಸವದಂದು ಅಂಬೇಡ್ಕರ್‌ರವರ ಕೇಂದ್ರಿತ ಫಲಪುಷ್ಪ ಪ್ರದರ್ಶನ ಆಯೋಜಿಸಿ ರಾಜ್ಯ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ವಿಶ್ವದ ಗಮನ ಸೆಳೆದಿದೆ. ಪುಷ್ಪಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಿ ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಬಾಬಾಸಾಹೇಬರ ತತ್ವಸಿದ್ದಾಂತಗಳನ್ನು ವಿದ್ಯಾರ್ಥಿಗಳಿಗೆ ಸಾರಬೇಕೇಂದು ಮನವಿ ಮಾಡಿದ್ದೇವು. ಆಡಳಿತ ಮಂಡಳಿ ಮನವಿ ಪುರಸ್ಕರಿಸಿ ಪ್ರವಾಸಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಈ ಕಾರ್ಯ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಮಾದರಿ.ಸಮಾನತೆಯ ಯಾತ್ರೆ ಸಂವಿಧಾನದ ವಿಜಯಿಯಾತ್ರೆಯಾಗಿದೆ ಎಂದು ಭಾವಿಸಿದ್ದೇವೆ. ಇನ್ನು ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಆಶಿಸುವುದಾಗಿ” ಎಂದರು.

ಈ ವೇಳೆ ವಿತ್ತಾಧಿಕಾರಿ ಡಾ.ಸುನೀತಾ,ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಪ್ರೊ. ಜಯರಾಮ್ ನಾಯಕ್, ಪ್ರೊ.ಪಿ.ಸಿ.ನಾಗೇಶ್, ಸಿಂಡಿಕೇಟ್ ಸದಸ್ಯೆ ಡಾ. ಸರ್ವಮಂಗಳ,
ನಿಕಟಪೂರ್ವ ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ. ಶಿವರಾಜು, ಪ್ರೊ.ಸಿ.ಡಿ. ವೆಂಕಟೇಶ್, ಡಾ. ದಿನೇಶ್ ಮತ್ತಿತರರು
ಉಪಸ್ಥಿತರಿದ್ದರು.

About Mallikarjun

Check Also

ಚಾಮರಾಜಪೇಟೆ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಜಾಗದ ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಹೊರಡಿಸಿದಅಧಿಸೂಚನೆ ರದ್ದುಗೊಳಿಸಿ ಹೈಕೋರ್ಟ್ ತೀರ್ಪು*

High Court verdict quashes Karnataka government’s notification for land acquisition of Chandra Spinning and Weaving …

Leave a Reply

Your email address will not be published. Required fields are marked *