Breaking News

ಬೀದಿನಾಯಿಗಳ ಹಾವಳಿಗೆ ಕಡಿವಾಣದ ಕ್ರಮ : ಮುಖ್ಯಾಧಿಕಾರಿ ನಸ್ರುಲ್ಲಾ

Measures to curb the menace of stray dogs: Chief Nasrullah

ಜಾಹೀರಾತು

ಕೊಟ್ಟೂರು ಪಟ್ಟಣದಲ್ಲಿ ಇತ್ತೀಚೆಗೆ ನಾಯಿಗಳ ಹಾವಳಿ ಮಿತಿಮೀರಿದ್ದು, ವಯೋವೃದ್ಧರ, ಮಕ್ಕಳ ಓಡಾಟಕ್ಕೆ ನಾಯಿಗಳು ವಿಪರೀತ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ, ಪತ್ರಿಕಾ ವರದಿಗಳಿಂದ ಎಚ್ಚೆತ್ತ ಪಟ್ಟಣ ಪಂಚಾಯಿತಿ ಪಟ್ಟಣದ ಸಾರ್ವಜನಿಕರ ಹಾಗೂ ಸಮಾಜದ ಮುಖಂಡರ ಮನವಿ ಮೇರೆಗೆ ಮುಖ್ಯಾಧಿಕಾರಿ ನಸ್ರುಲ್ಲಾ ರವರು ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬೀದಿನಾಯಿಗಳಿಗೆ ಈಗಾಗಲೇ ಲಸಿಕೆ ಹಾಕಲಾಗಿದ್ದು, ಅವು ಕಡಿದರೂ ಯಾವುದೇ ಮಾರಣಾಂತಿಕ ಹಾನಿಯಾಗುವುದಿಲ್ಲವೆಂದು ಅಲ್ಲದೇ, ಬೀದಿ ನಾಯಿಗಳನ್ನು ನಿಯಂತ್ರಣಸಲು ಹದಿನೈದು ದಿನಗಳೊಳಗಾಗಿ ಬೀದಿನಾಯಿಗಳ ಹಾವಳಿ ತಡೆಯಲು ಕ್ರಮ ವಹಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸ್ರುಲ್ಲಾ ತಿಳಿಸಿದರು.

About Mallikarjun

Check Also

ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ

New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ …

Leave a Reply

Your email address will not be published. Required fields are marked *