Dr. As part of Duttesh Kumar’s birthday, fruits were distributed to the elderly at Karuna Bhavan.

ವರದಿ : ಬಂಗಾರಪ್ಪ ,ಸಿ .
ಹನೂರು :ಚಾಮರಾಜನಗರ ಜಿಲ್ಲೆಯಾದ್ಯಂತ ವಿದ್ಯಾಸಂಸ್ಥೆಗಳ ಮುಖಾಂತರ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದ ಶ್ರೀ ಯುತ ಡಾ ದತ್ತೇಶ್ ಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಕರುಣಾ ಭವನ ವೃದ್ಧಾಶ್ರಮದಲ್ಲಿ ಗುರುವಾರ ವೃದ್ದರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು .
ನಂತರ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹನೂರು ವೆಂಕಟೆಗೌಡರು ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ಎಸ್.ದತ್ತೇಶ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳ ಜೊತೆಯಲ್ಲಿ ವೃದ್ಧರಿಗೆ ಹಣ್ಣು ವಿತರಿಸುತ್ತಿರುವುದು ಸಂತೋಷದ ವಿಷಯ ಡಾ.ದತ್ತೇಶ್‌ಕುಮಾರ್ ಸಾಮಾಜಿಕ ಕಳಕಳಿ ಹೊಂದಿರುವಂತ ವ್ಯಕ್ತಿಗಳಾಗಿದ್ದು ಸಮಾಜ ಸೇವೆಯ ಜೊತೆಗೆ ಶಿಕ್ಷಣ ಸಂಸ್ಥೆಯನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನರಿಗೆ ಸಹಾಯ ಮಾಡಿದ್ದರು ,ಇದೇ ವಿಷಯವಾಗಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಲ್ಲದೆ ಕ್ಷೇತ್ರದ ಜನತೆಗೆ ಸೇವೆ ಒದಗಿಸುವ ಸಲುವಾಗಿ ಹನೂರಿನಲ್ಲೇ ಮಾನಸ ಫೌಂಡೇಷನ್ ಸಂಸ್ಥೆ ತೆರೆದು ಹಳ್ಳಿಗಳಿಗೆ ವಾಹನವನ್ನು ಕಳುಹಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸಿಕೊಡಲು ಶ್ರಮಿಸಿದ್ದಾರೆ. ಹಾಗಾಗಿ ಇವರ ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ಸಿಗುತ್ತಿದ್ದು .ಎಲ್ಲಾರಿಗೂ ಕೇಕ್ ಕತ್ತರಿಸಿ ವೃದ್ಧರಿಗೆ ಹಂಚುವ ಮೂಲಕ ಹುಟ್ಟುಹಬ್ಬವನ್ನು ಎಲ್ಲಾರು ಆಚರಿಸಿದ್ದೆವಿ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ವೆಂಕಟೆಗೌಡ , ಪುಟ್ಟರಾಜು, ರವಿ, ಅನಿಲ್, ಮಂಜು, ವೆಂಕಟಾಚಲ, ಮುತ್ತುರಾಜು, ಮಂಜು, ಮೀನಾ, ನಾಗೇಂದ್ರ, ಸೀಗನಾಯಕ, ಮಾನಸ ಫೌಂಡೇಷನ್ ಸಿಬ್ಬಂದಿ ರವಿ, ಬಾಬು, ಶಿವು ಇನ್ನಿತರರು ಹಾಜರಿದ್ದರು.