Breaking News

ಸಂಜೀವಿನಿ ಮಾಸಿಕ ಸಂತೆ

Sanjeevini is a monthly festival

ಜಾಹೀರಾತು

ಕೊಪ್ಪಳ ತಾಲೂಕಿನ ಹುಲಗಿ ಗ್ರಾಮ ಪಂಚಾಯತ ಮತ್ತು ಚಿಗುರು ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟ(ರಿ) ಇವರ ಸಂಯುಕ್ತಾಶ್ರಯದಲ್ಲಿ ಇಂದು 27-08-2024 ರಂದು

ಹುಲಗಿ ಗ್ರಾಮದಲ್ಲಿರುವ RDCC ಬ್ಯಾಂಕ್ ಮುಂಬಾಗದಲ್ಲಿ ಆಯೋಜಿಸಿದ ಸಂಜೀವಿನಿ ಮಾಸಿಕ ಸಂತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಗುಗ್ಗಾಡಿ, ರವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಿ ಚಾಲನೆ ನೀಡಿದರು.

ಸದರಿ ಮಾಸಿಕ ಸಂತೆಯಲ್ಲಿ ಹುಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ವ-ಸಹಾಯ ಗುಂಪಿನ ಮಹಿಳೆಯರು ತಾವೇ ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ನಿಟ್ಟಿನಲ್ಲಿ ಅಗತ್ಯ ಮಾರುಕಟ್ಟೆ‌ಯ ಉತ್ತಮ ಅವಕಾಶ ಕಲ್ಪಿಸಿ, ಉತ್ಪನ್ನಗಳನ್ನು ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ಗುರುದೇವಮ್ಮ, ತಾಲ್ಲೂಕು ಪಂಚಾಯತಿಯ ಸಂಜೀವಿನಿ ಯೋಜನೆಯ ತಾಲೂಕ ಕಾರ್ಯಕ್ರಮ‌ ವ್ಯವಸ್ಥಾಪಕರಾದ ಸುನೀಲ್ & ನವೀನ್ ಶಿಳ್ಳಿನ್, BRP-EP ಸವಿತಾ ಹಾಗೂ ಚಿಗುರು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ, ಕಾರ್ಯದರ್ಶಿಯಾದ ಶ್ರೀಮತಿ ಭಾಗ್ಯ ರವರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಗೂ ಒಕ್ಕೂಟದ ಸಿಬ್ಬಂದಿಗಳಾದ MBK ಯಮನೂರಮ್ಮ, LCRP ಮಹೆಬೂಬಿ, ಮಲ್ಲಿಕಾ, ಲಕ್ಷ್ಮೀದೇವಿ , ಕೃಷಿ ಸಖಿ ಅನ್ನಪೂರ್ಣ, ಪಶು ಸಖಿ ಸಾಬಿಯಾ ಬೇಗಂ ಮತ್ತು ಸ್ವಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು.

About Mallikarjun

Check Also

ಕನಕಗಿರಿ ಭಾಗದ ವಿವಿಧ ಗ್ರಾಮಗಳಲ್ಲಿ ಮಧ್ಯರಾತ್ರಿ ವಿದ್ಯುತ್ ಸ್ಥಗಿತ: ರೈತರ ಪರದಾಟಕ್ರಿಮಿಕೀಟಗಳ ಭೀತಿಯಲ್ಲಿ ರೈತರ ಕುಟುಂಬ

Midnight power outage in various villages of Kanakagiri region: farmers protest Farmer family in fear …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.