Kalyan Karnataka Vikas Path Yatra
ಮಾನ್ವಿ: ಪಟ್ಟಣದ ವಾಲ್ಮೀಕಿ ಮಹಾರ್ಷಿಗಳ ವೃತ್ತದ ಹತ್ತಿರ ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆ ವಾಹನವನ್ನು ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ನೇತಾಜಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಜನಪದ ನೃತ್ಯಗಳ ಮೂಲಕ ಬರಮಾಡಿಕೊಂಡರು ನಂತರ ನೇತಾಜಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಸೇಡಮ್ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೀಠಾಧಿಪತಿಗಳಾದ ಶ್ರೀ ಸದಾಶಿವ ಸ್ವಾಮಿಗಳು ಮಾತನಾಡಿ ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ನಮ್ಮ ನಡೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ದೃಷ್ಟಿ ಬದಲಾವಣೆಯಾದರೆ ಸೃಷ್ಟಿ ಬದಲಾದಿತು ಎಂಬ ಸಂಕಲ್ಪದೊಂದಿಗೆ ಸೇಡಮ್ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಮಹೋತ್ಸವ ನಿಮಿತ್ತವಾಗಿ ಬೀರನಹಳ್ಳಿಯಲ್ಲಿ ರಾಷ್ಟç ಮಟ್ಟದ 7 ನೇ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು 2025ರ ಜ. 29 ರಿಂದ ಫೇ. 6 ರವರೆಗೆ 9 ದಿನಗಳಕಾಲ ಮಾತೆ,ದೇಶ,ಧರ್ಮ,ಸಂಸ್ಕೃತಿ,ಶಿಕ್ಷಣ,ಸೇವೆ,ಸ್ವಯಂ ಉದ್ಯೋಗ,ಯುವಶಕ್ತಿ,ಆಹಾರ-ಆರೋಗ್ಯ,ಪರಿಸರ,ಕೃಷಿ,ಗ್ರಾಮ,ಸ್ವದೇಶಿ ಸ್ವಾಭಿಮಾನ ಇತ್ಯಾದಿ ವಿಷಯಾಧಾರಿತ ದಿಶಾ ನಿರ್ದೇಶನ ಚಿಂತನ ಸಮಾವೇಶಗಳನ್ನು ಅಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಶ್ರೇಷ್ಟ ಮಠಾಧಿಶರು,ಸಂತರು,ಮಹಾತರು,ದಾರ್ಶನಿಕರು,ಧಾರ್ಮಿಕ ಮುಖಂಡರು,ರಾಷ್ಟç ಮತ್ತು ಅಂತರಾಷ್ಟ್ರೀಯ ತತ್ವಜ್ಞಾನಿಗಳು ಭಾಗವಹಿಸಲಿದ್ದಾರೆ ಅದರಿಂದ ಪಟ್ಟಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು,ಕಾಲ ತಂಡಗಳು ಸೇರಿದಂತೆ ಶಿಕ್ಷಣ ತಜ್ಞರು ಭಾಗವಹಿಸುವಂತೆ ಕೋರುವುದಕ್ಕಾಗಿ ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆಯನ್ನು ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೇಗಳ 48 ತಾಲೂಕುಗಳು ಸೇರಿ 5ಸಾವಿರ ಕಿಮೀ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರೀ ಸದಾಶಿವ ಸ್ವಾಮಿಗಳನ್ನು ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಇ.ನರಸಿಂಹ ಹಾಗೂ ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ರವರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಾಂಟೇಸ್ಸರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ಪಾಟೀಲ್,ತಾ.ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಹೆಚ್.ಶಾರ್ಪುದೀನ್ನ್ ,ತಾ.ವಿಕಾಸ ಆಕಡೆಮಿಯ ಸಂಚಾಲಕರಾದ ಬಿ.ಮೌಲಪ್ಪ,ಸಂಯೋಜಕರಾದ ಸುಭಾಷಪಾಟೀಲ್,ಆನಿಲ್ ಕುಮಾರ್,ರಾಜು ತಾಳಿಕೋಟೆ,ಮಹಾಂತೇಶ್ ವಲೇಕಾರ್,ಭೀಮರಾಯ ಸೀತಿಮನಿ,ಶಂಕ್ರಪ್ಪ,ನಾಗರಾಜ ಶೆಟ್ಟಿ ಸೇರಿದಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.