Deteriorated road: Passenger’s brain: Who is responsible if there is an accident?
ಮಾನ್ವಿ :ತಾಲೂಕು ಆಡಳಿತ, ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ಪಟ್ಟಣದ ಅಂಬೇಡ್ಕರ್ ವೃತ್ತ ಮತ್ತು ಬಸವ ವೃತ್ತ ವಾಲ್ಮೀಕಿ ವೃತ್ತ ಸೇರಿದಂತೆ ಸಂಗಾಪುರ ಪ್ರಮುಖ ರಸ್ತೆಗಳಿಂದ ಹಿಡಿದು, ಸಂಪರ್ಕ ಕಲ್ಪಿಸುವ ಒಳ ರಸ್ತೆಗಳಲ್ಲೂ ಗುಂಡಿಗಳು ಬಿದ್ದಿವೆ.
ಮಾನ್ವಿ ಕ್ಷೇತ್ರದ ಶಾಸಕರು ಜಿ ಹಂಪಯ್ಯನಾಯಕ ಅವರು ಅಭಿವೃದ್ಧಿ ಹರಿಕಾರರೇ ಎಂಬ ಪ್ರಶ್ನೆ ಮಾಡುತ್ತಿದ್ದಾರೆ ಅಲ್ಲಿನ ಜನತೆ. ಯಾಕೆಂದರೆ ಜನಪ್ರೀಯವಾಗಿರುವ ಶಾಸಕರಿಗೆ ವರ್ಷವಾದರೂ ಈ ಪಟ್ಟಣದಲ್ಲಿ ಇರುವ ರಸ್ತೆಯನ್ನು ನಿರ್ಲಕ್ಷ್ಯ ಮಾಡುವಷ್ಟು ಸಮಯ ಇವರಿಗೆ ಬಂದಿದೆಯೇ…? ಈ ರಸ್ತೆಗಳು ಇವರ ಕಣ್ಣಿಗೆ ಕಾಣುತ್ತಿಲ್ಲವೇ.. ಇತ್ತೀಚೆಗೆ ರಾಜ್ಯಾದ್ಯಂತ ಡೆಂಗ್ಯೂ ಹಾವಳಿಯಿಂದ ಜನರು ಸಾಯುತ್ತಿದ್ದು ರಸ್ತೆಯಲ್ಲಿ ಇಂತಹ ಗುಂಡಿಬಿದ್ದ ಜಾಗದಲ್ಲಿ ಕಲುಷಿತ ಮಳೆ ನೀರು,ಚರಂಡಿ ನೀರು
ನಿಂತುಕೊಳ್ಳುವುದರಿಂದ ಸೊಳ್ಳೆಗಳು ಹೆಚ್ಚಾಗಿ ಈ ಸೊಳ್ಳೆಗಳ ಕಾಟದಿಂದ ಡೆಂಗ್ಯೂ ಜ್ವರ ಹಾಗೂ ಇತರೇ ಸಾಂಕ್ರಮಿಕ ರೋಗ ಲಕ್ಷಣಗಳು ಹರಡುವ ಬೀತಿಯಲ್ಲಿ ಸಾರ್ವಜನಿಕರು ದಿನ ಕಳೆಯುವಂತಾಗಿದೆ.
ಯಾರಾದರೂ ಪ್ರಶ್ನಿಸಿದರೆ ಅಭಿವೃದ್ಧಿ ಮಾಡಲಿಕ್ಕೆ ಸರ್ಕಾರದಿಂದ ಅನುದಾನವನ್ನು ತಂದಿದ್ದೇನೆ ಎಂದು ಪತ್ರಿಕೆಗಳಿಗೆ ಮಾತ್ರ ಭರವಸೆಯನ್ನು ಕೊಟ್ಟು ಹೋಗುತ್ತಾರೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ಹೇಳಿಕೊಂಡರು.
ಲೋಕೋಪಯೋಗಿ ಇಲಾಖೆಯ ಕಣ್ಣು ಮುಚ್ಚಾಲೆ ಆಟದಿಂದ ಈ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ
ತಾಲೂಕಿನ ಪೋತ್ನಾಳ ದಿಂದ ಕಲ್ಲೂರುವರಿಗೆ ಮುಖ್ಯ ರಸ್ತೆಗಳಿಂದ ಹಿಡಿದು, ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳಲ್ಲೂ ಸಾಕಷ್ಟು ಗುಂಡಿಗಳು ಬಿದ್ದಿವೆ. ಈ ರಸ್ತೆಗಳಲ್ಲೇ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ರಸ್ತೆಯ ಸ್ಥಿತಿಯಂತೂ ನೋಡುವಂತಿಲ್ಲ. ಇಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಯಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ. ಈ ಗುಂಡಿಗಳ ಆಳ ಎಷ್ಟಿವೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಈ ಭಯಾನಕ ತೆಗ್ಗು ಗುಂಡಿಗಳ ಒಳಗೆ ಬೈಕ್ ಪಲ್ಟಿ ಹೊಡೆದು ಬಿದ್ದು ಅನೇಕ ಸವಾರರು ಕೈಕಾಲು, ಹಲ್ಲುಗಳು ಮುರಿದುಕೊಂಡ ಘಟನೆಗಳು ಉದಾಹರಣೆಗಳು ಸಾಕಷ್ಟಿವೆ.
ಯಮ ಸ್ವರೂಪಿ ಗುಂಡಿಗಳು :
ರಸ್ತೆಯಲ್ಲಿ ಬಿದ್ದಿರುವ ತೆಗ್ಗುಗಳಿಂದ ಮಕ್ಕಳಿಗೆ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ ವಿವಿಧ ವೃತ್ತಗಳಲ್ಲಿ ಮತ್ತು ಸಂಗಪೂರ, ಕರಡಿಗುಡ್ಡ ಯಡಿವಾಳ, ಜೀನೂರು, ಜಾಗೀರಪನ್ನೂರು , ಸೇರಿದಂತೆ
ಬಹುತೇಕ ರಸ್ತೆಗಳು ಜಿಟಿ ಜಿಟಿ ಮಳೆಗೆ ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ಎಲ್ಲಿ ನೋಡಿದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಸಂಚರಿಸಲು ಹರ ಸಾಹಸ ಪಡಬೇಕಿದೆ.ಎಂದು ಸ್ಥಳೀಯ ಸಾರ್ವಜನಿಕರು ಅತ್ಯಂತ ನೋವಿನಿಂದ ಹೇಳಿದ್ದಾರೆ. ಸಾರ್ವಜನಿಕರಿಗೆ ಇಷ್ಟೆಲ್ಲಾ ಅವಾಂತರಗಳು ಕಣ್ಣಿಗೆ ಕಂಡರು ಯಾವೊಬ್ಬ ಅಧಿಕಾರಿಗಳಿಗೆ ಅನಾಹುತ ಸಂಭವಿಸುವ ಗುಂಡಿಗಳು ಇವರಿಗೆ ಕಾಣುತ್ತಿಲ್ಲ.
ಒಂದಂತೂ ಸತ್ಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷವಂತು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಅನಾಹುತ ಗುಂಡಿಗಳು ನಿರ್ಮಾಣವಾಗಿವೆ. ಈ ರಸ್ತೆಗಳ ಬಗ್ಗೆ ವರ್ಣನೇ ಮಾಡಲು ಪದಗಳೇ ಸಾಲುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಪ್ರಮುಖ ಮುಖ್ಯ ರಸ್ತೆಗಳಲ್ಲಿಯೇ ಇಷ್ಟೊಂದು ಆಳವಾದ ಗುಂಡಿಗಳು ಬಿದ್ದಿವೆ. ಅಲ್ಲದೇ ದಿನನಿತ್ಯ ಅಲೆದಾಡುವ ಸಾರ್ವಜನಿಕರಿಗೆ ನರಕಯಾತನೆ ನೀಡಲು ಸಿದ್ಧವಾಗಿವೆ. ರಸ್ತೆಯ ತೆಗ್ಗು, ಗುಂಡಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿನ ಬೃಹದಾಕಾರದಲ್ಲಿ ನಿರ್ಮಾಣವಾಗಿರುವ ಗುಂಡಿಗಳು ಮಳೆಯಾದರೆ ರಸ್ತೆಯಲ್ಲಿ ಅಡ್ಡಾಡುವ ಸ್ಥಳೀಯ ಜನರಿಗೆ ಹೆಚ್ಚಿನ ಕಿರಿ, ಕಿರಿ ಉಂಟು ಮಾಡುತ್ತಿದೆ.
ದುರಸ್ತಿಯೂ ಹೊಂದರದ ರಸ್ತೆ : ಪ್ರಮುಖವಾದ ಬಹುತೇಕ ರಸ್ತೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ತಗ್ಗುಗಳು ಬಿದ್ದಿವೆ. ಇವುಗಳ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ದುರಸ್ತಿ ಮಾಡಲು ಮುಂದಾಗದ ರಸ್ತೆಗಳು ಅದರಲ್ಲೇ ನಿತ್ಯ ನೂರಾರು ಬಸ್, ಬೈಕ್, ಕಾರುಗಳು ಲಾರಿಗಳು ಚಲಿಸುತ್ತಿವೆ. ಇಲ್ಲಿ ಹಾದು ಹೋಗುವ ಪ್ರತಿಯೊಬ್ಬರೂ ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕದೇ ಹೋಗುವುದಿಲ್ಲ. ಇದಲ್ಲದೇ ಇಂತಹ ಬಹುತೇಕ ಪ್ರಮುಖ ಮತ್ತು ಒಳ ರಸ್ತೆಗಳ ಸ್ಥಿತಿ ಗತಿ ಹಾಗೂ ಈ ತಗ್ಗು ಗುಂಡಿಗಳ ಸ್ಥಿತಿಯನ್ನು ನೋಡಿ ನೋಡಿಯೂ ಸುಮ್ಮನೆ ಕೈಕಟ್ಟಿ ಕುಳಿತರೆ ಸಾಲದು ಇನ್ನಾದರೂ ಎಚ್ಚೆತ್ತುಕೊಂಡು ಈ ರಸ್ತೆಗಳ ಸುಧಾರಣೆಗೆ ಮುಂದಾದರೆ ಒಳ್ಳೆಯದು ಇಲ್ಲವಾದರೆ ಸ್ಥಳೀಯ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಿಮ್ಮ ಕಛೇರಿಗಳಿಗೆ ಘೇರಾವ್ ಹಾಕಿ ಛೀ ಮಾರಿ ಹಾಕುವ ಮುನ್ನ ತಕ್ಷಣವೇ ಎಚ್ಚೆತ್ತು ಸುಧಾರಣೆಗೆ ಮುಂದಾಗಿ ಜನರಿಂದ ಸೈ ಎನಿಸಿಕೊಳ್ಳಿ ಕಾಟಾಚಾರಕ್ಕೆ ಮಾಡಿ ಕೈ ಮೇಲೆತ್ತಿ ನಿಲ್ಲಬೇಡಿ ಆದಷ್ಟು ಬಾಳಿಕೆ ಬರುವ ರಸ್ತೆಗಳ ಸುಧಾರಣೆಗೆ ಮುಂದಾದರೆ ಒಳ್ಳೆಯದು ಎಂಬ ಸಲಹೆ ನಮ್ಮ ಪತ್ರಿಕೆಯದ್ದು.